More

    ನಾಟಕಗಳಿಂದ ಮನರಂಜನೆ ಜತೆ ಜ್ಞಾನ ವೃದ್ಧಿ

    ಭದ್ರಾವತಿ: ನಾಟಕಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ, ಜ್ಞಾನವನ್ನೂ ಹೆಚ್ಚಿಸುತ್ತವೆ ಎಂದು ನಿವೃತ್ತ ಪ್ರಾಧ್ಯಾಪಕ ಕೃಷ್ಣ ಉಪಾಧ್ಯಾಯ ಹೇಳಿದರು. ಅಪರಂಜಿ ಅಭಿನಯ ಶಾಲೆ, ಭೂಮಿಕಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸಿದ್ದರೂಢ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಿಶಿರ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಪ್ರಸ್ತುತ ದಿನಗಳಲ್ಲಿ ಸಿನಿಮಾಗಳ ಗೀಳಿನಿಂದಾಗಿ ನಾಟಕಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ವಿಷಾಧನೀಯ ಎಂದರು. ಭೂಮಿಕಾ ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್, ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಡಾ. ವೀಣಾಭಟ್, ಶಂಕರ ಮಠದ ಕೆ.ಎಸ್.ನಾಗರಾಜ್, ಮುನಿರಾಜು, ಡಾ. ನಾಗರಾಜ್ ಇದ್ದರು. ಸಭಾ ಕಾರ್ಯಕ್ರಮದ ನಂತರ ಅಪರಂಜಿ ಶಿವರಾಜ್ ರಚಿಸಿದ ಹಾಗೂ ಎಂ.ಅನಸೂಯಾ ನಿರ್ದೇಶನದ ‘ಅನ್ಯಾಯಕಾರಿ ಬ್ರಹ್ಮ’ ಹಾಸ್ಯ ನಾಟಕವನ್ನು ಅಪರಂಜಿ ಅಭಿನಯ ಶಾಲೆಯ ಕಲಾವಿದರು ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts