More

    ಚರಂಡಿ ಬಿಟ್ಟು ಮಾರ್ಗ ಬದಲಿಸಿದ ಮಳೆ ನೀರು!

    ಆನಂದಪುರ: ಪಟ್ಟಣದ ಸುತ್ತಮುತ್ತ ಕಳೆದ ಮರ‍್ನಾಲ್ಕೂ ದಿನಗಳಿಂದ ವಿಪರೀತ ಮಳೆಯಾಗುತ್ತಿದೆ. ಹೀಗಿರುವಾಗ ಇಲ್ಲಿನ ಪೊಲೀಸ್ ಠಾಣಾ ಎದುರು ರಾಷ್ಟಿçÃಯ ಹೆದ್ದಾರಿಯ ಚರಂಡಿ ಸಂಪೂರ್ಣ ಕಟ್ಟಿಕೊಂಡಿದೆ. ಸುಳಗೋಡು ಗುಡ್ಡದ ಕಡೆಯಿಂದ ಹರಿದು ಬರುವ ಮಳೆ ನೀರು ಹೆದ್ದಾರಿಯಲ್ಲಿ ಹೊಳೆಯಂತೆ ಹರಿಯುತ್ತಿದೆ.

    ಪೊಲೀಸ್ ಠಾಣೆಯ ಸಮೀಪದ ಅರಣ್ಯ ಇಲಾಖೆಯ ವಸತಿ ಗೃಹಗಳ ಎದುರು ಸಾಗಿ ದಾಸಕೊಪ್ಪ ವೃತ್ತದವರೆಗೂ ಚರಂಡಿ ಮಣ್ಣು ಮತ್ತು ಕಲ್ಲಿನಿಂದ ತುಂಬಿಕೊAಡಿದೆ. 400 ಮೀಟರ್ ಉದ್ದಕ್ಕೂ ಮಳೆ ನೀರು ಹೆದ್ದಾರಿಯಲ್ಲೇ ಹರಿಯುತ್ತಿದೆ. ಸಿದ್ದೇಶ್ವರ ಕಾಲನಿಯಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯವಿದೆ. ವಸತಿ ನಿಲಯದ ಮಕ್ಕಳು ಶಾಲಾ ಕಾಲೇಜುಗಳಿಗೆ ಇದೇ ಮಾರ್ಗದಲ್ಲಿ ನಿತ್ಯವೂ ಸಂಚರಿಸುತ್ತಾರೆ. ಸ್ವಲ್ಪ ಮಳೆಯಾದರೂ ಹೆದ್ದಾರಿಯಲ್ಲಿ ನೀರು ಹರಿಯುತ್ತದೆ.
    ರಾ.ಹೆ.ಯ ಎರಡೂ ಕಡೆ ಚರಂಡಿ ದುರಸ್ತಿ ಅಗತ್ಯವಿದೆ. ಕಳೆದ 4-5 ವರ್ಷಗಳಿಂದ ಮಳೆಗಾಲದಲ್ಲಿ ಈ ಸಮಸ್ಯೆಯಾಗುತ್ತಿದೆ. ಹೆದ್ದಾರಿ ವಿಭಾಗದ ಅಽಕಾರಿಗಳಿಗೆ ಸ್ಥಳೀಯ ಗ್ರಾಮಸ್ಥರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಿದ್ದೇಶ್ವರ ಕಾಲನಿ ಕಡೆಯಿಂದ ದಾಸಕೊಪ್ಪ ವೃತ್ತದವರೆಗೂ ಸರಾಸರಿ 3 ಅಡಿ ಆಳದವರೆಗೆ ಚರಂಡಿ ಇದೆ. ಅತ್ಯಽಕ ನೀರು ಹರಿಯುವ ಕಾರಣ ಚರಂಡಿ ಹೆಚ್ಚು ಅಗಲಗೊಂಡರೆ ಕಸ, ಕಡ್ಡಿ, ಕಲ್ಲು ಸಿಲುಕಿ ಚರಂಡಿ ಬ್ಲಾಕ್ ಆಗುವುದೂ ತಪ್ಪುತ್ತದೆ.

    ಹೆದ್ದಾರಿಯ ಪಕ್ಕದಲ್ಲಿರುವ ಚರಂಡಿಯನ್ನು ಜಂಬಿಟ್ಟಿಗೆಯಿAದ ಕಟ್ಟಲಾಗಿದೆ. ಚರಂಡಿ ಬ್ಲಾಕ್ ಆಗಿರುವ ವಿಷಯ ಗಮನಕ್ಕೆ ಬಂದಿದೆ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.
    |ಪೀರ್ ಪಾಷಾ
    ಕಾರ್ಯ ನಿರ್ವಾಹಕ ಇಂಜಿನಿಯರ್, ರಾ.ಹೆ. ವಿಭಾಗ ಶಿವಮೊಗ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts