More

    ಸಾಧಕರು ಹುಟ್ಟಿ ಬೆಳೆದ ನೆಲಕ್ಕೆ ಪರಿಶ್ರಮದÀ -Àಲ ನೀಡುವ ಗುಣ

    ತೀರ್ಥಹಳ್ಳಿ: ಕವಿಗಳು, ಸಾಧಕರು ಹುಟ್ಟಿ ಬೆಳೆದ ನೆಲಕ್ಕೆ ಪರಿಶ್ರಮದ -Àಲ ನೀಡುವ ಗುಣವಿದೆ. ಕವಿ ಮನೆಯ ಕವಿ ಶೈಲದ ಸುಂದರ ವಾತಾವರಣಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸಾಧನೆಯ ಎತ್ತರ ಏರಲು ಈ ನೆಲ ಪ್ರೇರಣೆಯಾಗಲಿ ಎಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಹೇಳಿದರು.
    ಬುಧವಾರ ಕುಪ್ಪಳ್ಳಿಯ ಹೇಮಾಂಗಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ, ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಕವಿಮನೆಯಲ್ಲಿ ಯುವ ಸಮಾಗಮ ಎಂಬ ಶೀರ್ಷಿಕೆಯಡಿ ಯುವ ಮನಸ್ಸುಗಳಲ್ಲಿ ರಾಷ್ಟçಪ್ರೇಮ ಜಾಗೃತಗೊಳಿಸಿದ ವಿವೇಕಾನಂದರ ವಿಚಾರಧಾರೆಯನ್ನು ಕನ್ನಡ ನಾಡಿಗೆ ಪರಿಚಯಿಸಿದ ರಾಷ್ಟçಕವಿ ಕುವೆಂಪು ಅವರ ಆಶಯವನ್ನು ವಿದ್ಯಾರ್ಥಿ ಸಮೂಹಕ್ಕೆ ತಲುಪಿಸಲು ವಿವೇಕಯಾತ್ರೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮುಖ್ಯ ಅತಿಥಿಗಳಾಗಿ ಮಂಗಳೂರಿನ ಕದ್ರಿ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಕೇಶವ ಬಂಗೇರ ಮಾತನಾಡಿ, ನನ್ನ ಇಡೀ ಭಾವಕೋಶದ ವಿಕಾಸ ಮತ್ತು ಬದುಕು ಈ ನೆಲಕ್ಕೆ ಅರ್ಪಣೆಯಾಗಿರುವುದು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರ ಸಾಹಿತ್ಯದ ಸಂಸರ್ಗದಿAದಲೇ ಎಂದು ರಾಷ್ಟçಕವಿ ಕುವೆಂಪು ಹೇಳಿದ್ದಾರೆ. ಅವರ ಆತ್ಮಚರಿತ್ರೆ ನೆನಪಿನ ದೋಣಿಯ ಪ್ರತಿ ಪುಟಗಳಲ್ಲಿಯೂ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಸಾಹಿತ್ಯದ ಸಂಸರ್ಗ ಎದ್ದು ಕಾಣುತ್ತದೆ ಎಂದರು.
    ವಿವೇಕಾನಂದರು ಜಗತ್ತಿಗೆ ನೀಡಿದ ಕೊಡುಗೆ, ವ್ಯಕ್ತಿ ನಿರ್ಮಾಣ ಮತ್ತು ವ್ಯಕ್ತಿತ್ವ ನಿರ್ಮಾಣದ ಪ್ರತಿರೂಪವನ್ನು ಕುವೆಂಪು ಅವರಲ್ಲಿ ಕಾಣಬಹುದು. ವಿವೇಕಾನಂದರು ಸನ್ಯಾಸಿಯಾಗಿ ಸಾಽಸಿದರೆ, ಕುವೆಂಪು ಅವರು ಸಂಸಾರಿಯಾಗಿ ಸಾಽಸಿದ್ದಾರೆ. ವಿವೇಕಾನಂದರು ಉಪನ್ಯಾಸ, ಯಾತ್ರೆಗಳ ಮೂಲಕ ತನ್ನ ಔನ್ನತ್ಯದ ಪೂರ್ಣ ವಿಚಾರಗಳನ್ನು ಪಸರಿಸಿದರೆ ಕುವೆಂಪು ಅವರು ಸಾಹಿತ್ಯದ ಮೂಲಕ ಪಸರಿಸಿದರು ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ವಿಕಾಸ ಟ್ರಸ್ಟ್ನ ಅಧ್ಯಕ್ಷ ಬಿ.ಎ.ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ವಿವೇಕ ಯಾತ್ರೆಯ ಸಂಚಾಲಕ ಎಚ್.ಕೆ. ಪ್ರವೀಣ್, ಕಾರ್ಯಕರ್ತರಾದ ಎಂ.ಎA.ಪ್ರಮೋದ್, ಧರಣಿ, ಕೆ.ವೈ.ಪುನೀತ್ ಇತರರಿದ್ದರು. ಸಮಾರೋಪ ಸಮಾರಂಭದಲ್ಲಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಕರ್ನಾಟಕ ಮುಕ್ತ ವಿವಿ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ, ಕೃಷಿಕ ನಿಶ್ಚಲ್ ಕೊಳವರ ಇತರರಿದ್ದರು.

    ಕುವೆಂಪು ಸಾಹಿತ್ಯ ಸಮನ್ವಯ, ಸರ್ವೋದಯ, ಬಂಡಾಯದ ಧ್ವನಿಯೇ ಹೊರತು ಧರ್ಮ ವಿರೋಽಯಲ್ಲ. ನಾವೆಲ್ಲರೂ ಕೇವಲ ವಿದ್ಯಾರ್ಥಿಗಳಲ್ಲ ಈ ದೇಶದ ಪ್ರಜೆಗಳು. ನಮ್ಮ ಸಂವಿಧಾನ ನೀಡಿರುವ ಹಕ್ಕಿನ ಜತೆಗೆ ನಮ್ಮ ಕರ್ತವ್ಯ ನೆನಪಿಸಿಕೊಳ್ಳುವುದೂ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
    | ಕೇಶವ ಬಂಗೇರ
    ಕದ್ರಿ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಧ್ಯಾಪಕ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts