More

    ‘ದಿ ಪ್ರಿನ್ಸೆಸ್’ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಚಾಲನೆ: ರ‍್ಯಾಂಪ್​ ಮೇಲೆ ಹೆಜ್ಜೆ ಹಾಕಿದ ರಚಿತಾ, ರಾಕ್​ಲೈನ್

    ಬೆಂಗಳೂರು: ಸಾಂಪ್ರದಾಯಿಕ ವಜ್ರಾಭರಣಗಳಿಗೆ ಮನೆ ಮಾತಾಗಿರುವ ‘ನವರತನ್ ಜುವೆಲ್ಲರ್ಸ್’ ಹಾಗೂ ‘ವಿಜಯವಾಣಿ’, ‘ದಿಗ್ವಿಜಯ 24*7 ನ್ಯೂಸ್’ ಸಹಯೋಗದಲ್ಲಿ ಆಯೋಜಿಸಿರುವ ‘ದಿ ಪ್ರಿನ್ಸೆಸ್’ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಶುಕ್ರವಾರ ದೀಪ ಬೆಳಗುವ ಮೂಲಕ ನಟಿ ರಚಿತಾ ರಾಮ್ ಚಾಲನೆ ನೀಡಿದರು.

    ರಾಜಾಜಿನಗರದ ನವರತನ್ ಜುವೆಲ್ಲರ್ಸ್ ಮಳಿಗೆಯಲ್ಲಿ ಮೂರು ದಿನಗಳ ಕಾಲ ದಿ ಪ್ರಿನ್ಸೆಸ್ ಫ್ಯಾಷನ್ ಶೋ ಕಾರ್ಯಕ್ರಮ ನಡೆಯುತ್ತಿದ್ದು, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಜತೆ ಗುಳಿಕೆನ್ನೆ ಬೆಡಗಿ ರಚಿತಾ ರಾಮ್​ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದರು. ನೆರೆದಿದ್ದ ಕೆಲ ವೀಕ್ಷಕರೂ ರ‍್ಯಾಂಪ್ ಮೇಲೆ ವಾಕ್ ಮಾಡಿ ಸಾಥ್ ನೀಡಿದರು.

    'ದಿ ಪ್ರಿನ್ಸೆಸ್’ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಚಾಲನೆ: ರ‍್ಯಾಂಪ್​ ಮೇಲೆ ಹೆಜ್ಜೆ ಹಾಕಿದ ರಚಿತಾ, ರಾಕ್​ಲೈನ್ವಿಜಯವಾಣಿ ದಿನಪತ್ರಿಕೆಯ ಸಂಪಾದಕ ಕೆ.ಎನ್. ಚನ್ನೇಗೌಡ ಮಾತನಾಡಿ, ಜುವೆಲ್ಲರ್ಸ್ ಮತ್ತು ವಾಣಿಜ್ಯ ಮಳಿಗೆಗಳು ಎಂದರೆ ವ್ಯಾಪಾರ ವಹಿವಾಟಿಗೆ ಸೀಮಿತ ಎಂಬ ಮನೋಭಾವನೆಗಳಿವೆ. ಆದರೆ, ನವರತನ್ ಜುವೆಲ್ಲರ್ಸ್​ನ ಮಾಲೀಕರು ಹಲವಾರು ಸಮಾಜಮುಖಿ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಒಂದಷ್ಟು ಕೊಡುಗೆ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ನವರತನ್ ಜುವೆಲ್ಲರ್ಸ್ ವಾಣಿಜ್ಯ ಮಳಿಗೆಗಳು ಗಳಿಸಿದ ಲಾಭದಲ್ಲಿ ಅಲ್ಪ ಪ್ರಮಾಣವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

    ನವರತನ್ ಜುವೆಲ್ಲರ್ಸ್ ಸಂಸ್ಥೆಯ ಉಪಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಜತೆಗೆ ವಜ್ರದ ಮಹತ್ವವನ್ನು ಎಲ್ಲರಿಗೂ ತಿಳಿಸುವುದೂ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಮೂರು ದಿನದ ಕಾರ್ಯಕ್ರಮದಲ್ಲಿ 30 ರೂಪದರ್ಶಿಯರು ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಲಿದ್ದು, ಭವಿಷ್ಯದಲ್ಲಿ ಅವರಿಗೆ ಉತ್ತಮ ಅವಕಾಶಗಳು ಒದಗಲಿ ಎಂದು ಹಾರೈಸಿದರು.

    'ದಿ ಪ್ರಿನ್ಸೆಸ್’ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಚಾಲನೆ: ರ‍್ಯಾಂಪ್​ ಮೇಲೆ ಹೆಜ್ಜೆ ಹಾಕಿದ ರಚಿತಾ, ರಾಕ್​ಲೈನ್ವಜ್ರಾಭರಣಗಳ ಸಂಗ್ರಹ: ಫ್ಯಾಷನ್ ಶೋ ಮೂಲಕ ಯುವ ಪ್ರತಿಭೆಗಳನ್ನು ಪರಿಚಯಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ನವರತನ್ ಜ್ಯುವೆಲ್ಲರ್ಸ್​ನಲ್ಲಿ ಎಲ್ಲ ವಯೋಮಾನದವರಿಗೆ ಒಪ್ಪುವ ಹಲವು ಬಗೆಯ ವಜ್ರಾಭರಣಗಳ ದೊಡ್ಡ ಸಂಗ್ರಹವಿದೆ. ಹೆಣ್ಣು ಮಕ್ಕಳಿಗೆ ಚಿನ್ನಾಭರಣಗಳ ಬಗ್ಗೆ ಸಹಜವಾಗಿ ಹೆಚ್ಚಿನ ಆಸಕ್ತಿ ಇರುತ್ತದೆ. ನವರತನ್ ಜುವೆಲ್ಲರ್ಸ್ ಹಾಗೂ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ಆಯೋಜಿಸಿರುವ ದಿ ಪ್ರಿನ್ಸಸ್ ಫ್ಯಾಷನ್ ಶೋ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ನಟಿ ರಚಿತಾರಾಮ್ ಹಾರೈಸಿದರು.

    'ದಿ ಪ್ರಿನ್ಸೆಸ್’ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಚಾಲನೆ: ರ‍್ಯಾಂಪ್​ ಮೇಲೆ ಹೆಜ್ಜೆ ಹಾಕಿದ ರಚಿತಾ, ರಾಕ್​ಲೈನ್ಪ್ರತಿಭೆಗಳಿಗೆ ಅವಕಾಶ ಸಿಗಲಿ: ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಮಾತನಾಡಿ, ಕಳೆದ 25 ವರ್ಷಗಳಿಂದ ನಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರು ನವರತನ್ ಜುವೆಲ್ಲರ್ಸ್​ನ ಗ್ರಾಹಕರಾಗಿದ್ದೇವೆ. ಶುದ್ಧತೆ, ಆಕರ್ಷಕ ವಿನ್ಯಾಸ ಹಾಗೂ ಯಾವುದೇ ಲೋಪಗಳಿಲ್ಲದಂತೆ ರೂಪಿಸಿರುವ ಹೊಸ ಬಗೆಯ ಗುಣಮಟ್ಟದ ವಜ್ರಾಭರಣಗಳನ್ನು ನವರತನ್ ಜುವೆಲ್ಲರ್ಸ್​ನಲ್ಲಿ ಕಾಣಬಹುದು. 3 ದಿನಗಳ ಫ್ಯಾಷನ್ ಶೋ ಕಾರ್ಯಕ್ರಮದ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಲ್ಲಿ ಭಾಗವಹಿಸಿದ ಪ್ರತಿಭೆಗಳಿಗೆ ಎಲ್ಲೆಡೆ ಅವಕಾಶಗಳು ಸಿಗಲಿ ಎಂದು ಆಶಿಸುತ್ತೇನೆ. ಕರೊನಾದಿಂದ ವಿವಿಧ ಉದ್ಯಮಗಳಿಗೆ ನಷ್ಟ ಉಂಟಾಗಿದ್ದು, ಸದ್ಯ ಚಿನ್ನಾಭರಣ ವಹಿವಾಟು ಸ್ಥಿರವಾಗಿದೆ ಎಂದರು.

    ಸನ್ಮಾನ: ವಿಜಯವಾಣಿ ದಿನಪತ್ರಿಕೆಯ ಸಂಪಾದಕ ಕೆ.ಎನ್.ಚೆನ್ನೇಗೌಡ, ವಿಜಯವಾಣಿ ಮೀಡಿಯಾ ಲಿ.ಉಪಾಧ್ಯಕ್ಷ ಅರುಣ್ ಕರಡಿ, ನಟಿ ರಚಿತಾ ರಾಮ್ ನಿರ್ವಪಕ ರಾಕ್​ಲೈನ್ ವೆಂಕಟೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಕಾರ್ಯಕ್ರಮದಲ್ಲಿ ನವರತನ್ ಜುವೆಲ್ಲರ್ಸ್​ನ ಸಹ ವ್ಯವಸ್ಥಾಪಕ ನಿರ್ದೇಶಕ (ಜೆಎಂಡಿ) ನಿರ್ಮಲ್ ಕುಮಾರ್, ನಿರ್ದೇಶಕರಾದ ಅಶೋಕ್ ಕುಮಾರ್, ಮಿತೇಶ್ ಬಾಪ್ನಾ, ವಿನೋದ್ ಕುಮಾರ್, ಸಿಎಫ್​ಒ ಗ್ಯಾನ್ ಚಂದ್ ಮತ್ತಿತರರು ಉಪಸ್ಥಿತರಿದ್ದರು.

    ನಾನು 110 ಕೆಜಿ ಇದ್ದೇನೆ, ಕಾಂಗ್ರೆಸ್​ಗೆ ನನ್ನನ್ನು ತುಳಿಯೋಕೆ ಆಗಲ್ಲ ಎನ್ನುತ್ತಲೇ ಜೆಡಿಎಸ್​ಗೆ ಇಬ್ರಾಹಿಂ ಎಂಟ್ರಿ!

    ನಾನು ಇಷ್ಟೊಂದು ಕೆಟ್ಟದ್ದಾಗಿ ಸೋಲ್ತೀನಿ ಅಂತ ಭಾವಿಸಿರಲಿಲ್ಲ… ಎನ್ನುತ್ತಲೇ ಭಾವುಕರಾದ ಸಿದ್ದು

    ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts