More

    ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ – ಶಾಸಕ ಸಿದ್ದು ಸವದಿ ಅಭಿಮತ

    ರಬಕವಿ/ಬನಹಟ್ಟಿ: ಪ್ರತಿ ಕ್ಷೇತ್ರದಲ್ಲಿ ದೇಶ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಶಿಕ್ಷಕರು ಮೂಲ ಕಾರಣ. ಉತ್ತಮ ವ್ಯಕ್ತಿತ್ವ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

    ರಾಂಪುರ ದಾನೇಶ್ವರಿ ಸಮುದಾಯ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಪಂ, ತಾಲೂಕು ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಸಮನ್ವಯಾಧಿಕಾರಿ ಕಾರ್ಯಾಲಯ ಜಮಖಂಡಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನೋತ್ಸವದ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

    ರಾಧಾಕೃಷ್ಣನ್ ಅವರ ಆದರ್ಶಗಳು ಇಂದಿನ ಶಿಕ್ಷಕರಿಗೆ ಮಾದರಿಯಾಗಬೇಕು. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವವರೇ ಗುರು. ಗುರುಗಳಿಗೆ ನಿವೃತ್ತಿ ಎಂಬುದೇ ಇಲ್ಲ ಎಂದರು.

    ಚಿಂತಕ ಮತ್ತು ಉಪನ್ಯಾಸಕ ವೀರೇಶ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ, ನೀತಿವಂತಿಕೆ, ಹೃದಯವಂತಿಕೆ ತುಂಬುವುದರ ಜತೆಗೆ ಚಾರಿತ್ರ್ಯವಂತ ಪ್ರಜೆಗಳನ್ನು ನಿರ್ಮಾಣ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನ ಬೆಳೆಸಬೇಕು ಎಂದರು.

    ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಹಸೀಲ್ದಾರ್ ಎಸ್. ಬಿ. ಇಂಗಳೆ, ತಾಪಂ ನಿರ್ವಾಹಕ ಅಧಿಕಾರಿ ಸಂಜೀವ ಹಿಪ್ಪರಗಿ, ನಗರಸಭೆ ಅಧ್ಯಕ್ಷ ಸಂಜಯ ತೆಗ್ಗಿ, ಬಿ.ಡಿ.ನೇಮಗೌಡ, ಬಿ.ಬಿ.ಮುಧೋಳ, ಬಾಬಾಗೌಡ ಪಾಟೀಲ, ಅರ್ಜುನ ಕಾಖಂಡಕಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪ್ರಭು ಹಟ್ಟಿ, ರೈತರಾದ ಧರೆಪ್ಪ ಉಳ್ಳಾಗಡ್ಡಿ, ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಲ, ಪ್ರಭು ಬಿಳ್ಳೂರ, ಬಸವರಾಜ ಹನಗಂಡಿ, ವಿಶ್ವಜ ಕಾಡದೇವರ, ಸಂಗಮೇಶ ಮುಕಾರ್ತಿಹಾಳ, ಮ. ಕ. ಮೇಗಾಡಿ, ಪೌರಾಯುಕ್ತ ಅಶೋಕ ಗುಡಿಮನಿ, ಐ.ಎ. ಡಾಂಗೆ ವೇದಿಕೆ ಮೇಲೆ ಇದ್ದರು.

    ಗೀತಾ ಎಸ್. ಪ್ರಾರ್ಥಿಸಿದರು. ಪ್ರಶಾಂತ ಹೊಸಮನಿ ಮತ್ತು ಶೈಲಾ ಮಿರ್ಜಿ ನಿರೂಪಿಸಿದರು. ಜಗದೀಶ ಕುಳ್ಳೊಳ್ಳಿ ವಂದಿಸಿದರು.

    ರವೀಂದ್ರ ಸಂಪಗಾವಿ, ಎಸ್.ಬಿ.ಬೆಳ್ಳಿಕಟ್ಟಿ, ಅರುಣ ಕುಲಕರ್ಣಿ, ಶಿವಕುಮಾರ ಕೊಕಟನೂರ, ಜಗದೀಶ ಕುಳ್ಳೋಳ್ಳಿ, ಬಿ.ಎಂ.ಹಳೇಮನಿ, ಶ್ರೀಶೈಲ ಬುರ್ಲಿ, ಎಸ್.ಎಸ್.ಹಾದಿಮನಿ, ಡಿ.ಬಿ.ಜಾಯಗೊಂಡ, ದ್ರಾಕ್ಷಾಯಣಿ ಮಂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts