More

    ಪೊಲೀಸರ ವಿರುದ್ಧ ಮಹಿಳೆಯರ ಧರಣಿ

    ಬೋರಗಾಂವ: ಕಾರದಗಾ ಗ್ರಾಪಂ ಸದಸ್ಯ ಸೋಮನಾಥ ಗಾವಡೆ ಏ.3ರಂದು ಉಪಾಧ್ಯಕ್ಷೆ ರಶೀದಾ ಪಟೇಲ್ ಹಾಗೂ ಸದಸ್ಯೆ ಪದ್ಮಜಾ ಅಲಂಕಾರ ಎಂಬುವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ಸದಲಗಾ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಗ್ರಾಪಂ ಎದುರು ಸೋಮವಾರ ಪ್ರತಿಭಟಿಸಿದರು.

    ಪೊಲೀಸರು ಕೈಕಟ್ಟಿ ಕುಳಿತಿರುವುದು ಬೇಸರ ಉಂಟು ಮಾಡಿದೆ. ನ್ಯಾಯ ಸಿಗದಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಗ್ರಾಪಂ ಎದುರು ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಜಿಪಂ ಸದಸ್ಯೆ ಸುಮಿತ್ರಾ ಉಗಳೆ ಮಾತನಾಡಿ, ಸದಸ್ಯೆಯರನ್ನು ಗಾವಡೆ ಅವಮಾನಿಸಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ರಾತ್ರಿ 3 ಗಂಟೆವರೆಗೂ ಕಾದು ದೂರು ದಾಖಲಿಸಲು ಹೋದರೆ ಪೊಲೀಸರು ಸ್ಪಂದಿಸದಿರುವುದು ಖೇದಕರ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.
    ಗ್ರಾಪಂ ಅಧ್ಯಕ್ಷ ಸುದೀಪ ಉಗಳೆ, ಗ್ರಾಪಂ ಉಪಾಧ್ಯಕ್ಷೆ ರಶೀದಾ ಪಟೇಲ್, ಸದಸ್ಯೆ ವೀರಶ್ರೀ ಕಿಚಡೆ, ಮಹಾದೇವಿ ಖೋತ, ಮಂಗಲ ನಾಯಿಕ್, ಸ್ವಾತಿ ಕಾಂಬಳೆ, ಸವಿತಾ ಕಾಂಬಳೆ, ಸುಜಾತಾ ಕುರಡೆ, ರಾಹುಲ್ ರತ್ನಾಕರ, ಸುಭಾಷ ಠಕಣೆ, ವಿಲಾಸ ಕಾಂಬಳೆ, ಪ್ರತೀಕ ಕಾಂಬಳೆ, ಅಪ್ಪಾಸಾಬ ಖೋತ, ದತ್ತಾ ಘುಣಕೆ, ದಿಲೀಪ ಖೋತ, ಕುಮರ ಧರಣಗುತ್ತೆ, ಬಾಬಾಸಾಬ ಮಾಣಗಾವೆ, ಢೋಂಡಿರಾಮ ಕಾಶೀದ್ ಇದ್ದರು.

    ದೂರು ದಾಖಲಾಗಿರುವ ಕುರಿತು ಸಂಬಂಧಿಸಿದವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಲಾಗಿದೆ. ಮಹಿಳೆಯರಿಗೆ ಅನ್ಯಾಯ ಮಾಡಿಲ್ಲ ಎಂದು ಪೊಲೀಸ್ ಅಧಿಕಾರಿ ಆರ್.ವೈ.ಬೀಳಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts