More

    ಶೀಘ್ರ ವಿವಿಧ ಬೇಡಿಕೆ ಈಡೇರಿಸಿ

    ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಮಹಾವೀರ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ಅಕ್ಷರ ದಾಸೋಹ ನೌಕರರು ಜಿಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಬಳಿಕ ಜಿಪಂ ಸಿಇಒ ಎಂ.ಎಲ್.ವೈಶಾಲಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ನೂತನ ಶಿಕ್ಷಣ ನೀತಿ ಜಾರಿ ಸಂದರ್ಭದಲ್ಲಿ ಬಿಸಿಯೂಟ ಯೋಜನೆಗೆ ಇನ್ನಷ್ಟು ಬಲ ತುಂಬಬೇಕು. ಇದನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು. ಕರೊನಾ ಲಾಕ್​ಡೌನ್ ಅವಧಿಗೆ ಸಂಬಂಧಿಸಿ ಏಪ್ರಿಲ್​ನಿಂದಲೇ ವೇತನ ನೀಡಬೇಕೆಂದು ಒತ್ತಾಯಿಸಿದರು.

    ಪ್ರತಿ ತಿಂಗಳು 5ರೊಳಗೆ ವೇತನ ಪಾವತಿಸಬೇಕು. ಬಿಸಿಯೂಟ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆ ಸಿಬ್ಬಂದಿ ನೇಮಕವಾಗಬೇಕು. ನಿವೃತ್ತಿ ವೇತನ, ಆರೋಗ್ಯ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿ ಅಂಗನವಾಡಿ ನೌಕರರ ಸಹಾಯಕಿಯರ ಸಂಘದ ಜಿಲ್ಲಾಧ್ಯಕ್ಷೆ ಅಕ್ಕಮ್ಮ, ನ.26ರಂದು ದೇಶಾದ್ಯಂತ ಜೆಸಿಟಿಯು ನೇತೃತ್ವದಲ್ಲಿ ಮುಷ್ಕರ ನಡೆಸಲಾಗುವುದು. ಅಂದು ಎಲ್ಲ ಕಾರ್ವಿುಕರು ಕೆಲಸ ಸ್ಥಗಿತಗೊಳಿಸುವ ಮೂಲಕ ಮುಷ್ಕರದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

    ಅಂಗನವಾಡಿ ನೌಕರರ ಸಹಾಯಕಿಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಮ್ಮ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ನಾರಾಯಣ, ಉಪಾಧ್ಯಕ್ಷ ಎಂ.ಅನಂತರಾಮು, ಪ್ರಮುಖರಾದ ತುಳಸಿ ಪ್ರಭಾ, ಜಯಮ್ಮ, ನಾಗರತ್ನಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts