More

    ಕಕ್ಷೆ ಬಿಟ್ಟು ಹೊರನಡೆಯುತ್ತಿದೆ ಮಂಗಳ ಗ್ರಹ! ಭೂಮಿಯಲ್ಲೂ ಕಂಡುಬಂದ ವಿಚಿತ್ರ ಬೆಳವಣಿಗೆ!

    ವಾಷಿಂಗ್ಟನ್​: ಬಾಹ್ಯಾಕಾಶದಲ್ಲಿ ಒಂದು ವಿಶೇಷ ಬೆಳವಣಿಗೆಯನ್ನು ಖಗೋಳ ವಿಜ್ಞಾನಿ ಕಂಡುಹಿಡಿದಿದ್ದಾರೆ. ಮಂಗಳ ಗ್ರಹವು ತನ್ನ ಕಕ್ಷೆಯನ್ನು ಬಿಟ್ಟು ಹೊರ ನಡೆಯುತ್ತಿರುವುದಾಗಿ ತಿಳಿಸಲಾಗಿದೆ. ಈ ಕುರಿತಾಗಿ ಹೆಚ್ಚಿನ ಅಧ್ಯಯನ ನಡೆಸಲು ಇದೀಗ ವಿಜ್ಞಾನಿಗಳು ಸಿದ್ಧವಾಗಿದ್ದಾರೆ.

    ಇದನ್ನೂ ಓದಿ: 32 ಸಿನಿಮಾ ಯೂನಿಯನ್​ಗಳಿಂದ ಬಹಿಷ್ಕಾರಕ್ಕೊಳಗಾದ ರಾಮ್​ ಗೋಪಾಲ್ ವರ್ಮಾ!

    ಕಾರಿನ ಟೈಯರ್​ನಲ್ಲಿ ಏನಾದರೂ ಸಮಸ್ಯೆಯಾದರೆ ಟೈಯರ್​ ತನ್ನ ಹಿಡಿತವನ್ನು ಬಿಟ್ಟು ಅಡ್ಡಾದಿಡ್ಡಿ ಚಲಿಸುವುದನ್ನು ನೀವು ಗಮನಿಸಿರುತ್ತೀರಿ. ಇದೀಗ ಮಂಗಳನಲ್ಲಿಯೂ ಆಗಿರುವುದು ಇದೇ ತರದ ಸಮಸ್ಯೆ. ಮಂಗಳ ಗ್ರಹ ತನ್ನ ಕಕ್ಷೆಯನ್ನು ಬಿಟ್ಟು ಹೊರಗಡೆ ಹೋಗಿದೆ. ಪ್ರತಿ 200 ದಿನಗಳಿಗೊಮ್ಮೆ 4 ಇಂಚುಗಳಷ್ಟು ದೂರ ಹೋಗುತ್ತಿದೆ ಎಂದು ಅಮೆರಿಕನ್​ ಜಿಯೋಫಿಸಿಕಲ್​ ಯೂನಿಯನ್​ ವರದಿ ಮಾಡಿದೆ.

    ಈ ರೀತಿಯ ಕಕ್ಷೆ ಬಿಟಟು ಬೇರೆಡೆ ಹೋಗುತ್ತಿರುವುದು ಇದೇ ಮೊದಲ ಗ್ರಹವಲ್ಲ. ನಾವೆಲ್ಲರು ಜೀವಿಸುತ್ತಿರುವ ಈ ಭೂಮಿಯೂ ಕೂಡ ಅಂತದ್ದೇ ವಿಚಿತ್ರ ಬೆಳವಣಿಗೆಯನ್ನು ತೋರಿಸಿದೆ. ಭೂಮಿ ತನ್ನ ಕಕ್ಷೆಯಿಂದ ಸುಮಾರು 30 ಅಡಿ ದೂರಕ್ಕೆ ಈಗಾಗಲೇ ಹೋಗಿದೆ. ಭೂಮಿಯಲ್ಲಿರುವ ಸಮುದ್ರದಲ್ಲಿನ ಒತ್ತಡ, ಇಲ್ಲಿನ ವಾತಾವರಣ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಭೂಮಿ ಪ್ರತಿ 433 ದಿನಕ್ಕೊಮ್ಮೆ ಕಕ್ಷೆಯಿಂದ ಸ್ವಲ್ಪ ಹೊರಗೆ ನಡೆಯುತ್ತಿರುವುದಾಗಿಯೂ ತಿಳಿಸಲಾಗಿದೆ. ಆದರೆ ಮಂಗಳ ಗ್ರಹದಲ್ಲಿ ಯಾವುದೇ ಸಮುದ್ರವಿಲ್ಲ. ಹಾಗಿದ್ದರೂ ಪ್ರತಿ 200 ದಿನಕ್ಕೆ ಗ್ರಹ ಜರಿದು ಹೋಗುತ್ತಿರುವುದಕ್ಕೆ ಕಾರಣ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.

    ಇದನ್ನೂ ಓದಿ: ಕೃಷಿ ಕಾಯ್ದೆ: ನಿಮ್ಮ ಕೆಲಸ ನೀವು ಮಾಡಿ- ನಮ್ಮ ಕೆಲಸ ನಾವು ಮಾಡುತ್ತೇವೆ ಎಂದ ಸುಪ್ರೀಂಕೋರ್ಟ್​

    ಖಗೋಳದ ಬಗ್ಗೆ ಇರುವ ಅಚ್ಚರಿಗಳಲ್ಲಿ ಇದೂ ಒಂದನ್ನು ಸೇರಿಸಿಕೊಳ್ಳಬಹುದಾಗಿದೆ. ಈ ಪ್ರಕ್ರಿಯೆಯನ್ನು ದಿ ಚಾಂಡ್ಲರ್ ವೊಬಲ್ ಎಂದು ಕರೆಯಲಾಗುತ್ತದೆ. ಇದಕ್ಕೆ ಖಗೋಳ ವಿಜ್ಞಾನಿ ಸೇಥ್ ಕಾರ್ಲೊ ಚಾಂಡ್ಲರ್ ಹೆಸರಿಟ್ಟಿದ್ದಾರೆ. ಅವರು ಸುಮಾರು ಒಂದು ಶತಮಾನದ ಹಿಂದೆ ಈ ಪ್ರಕ್ರಿಯೆಯನ್ನು ಕಂಡುಹಿಡಿದಿದ್ದರು ಎನ್ನಲಾಗಿದೆ. ಇನ್ನೂ ವಿಶೇಷವೆಂದರೆ ಕೆಲ ಕಾಲವಾದ ಮೇಲೆ ಗ್ರಹಗಳು ತನ್ನಿಂತಾನಾಗೇ ಈ ಪ್ರಕ್ರಿಯೆಯಿಂದ ಚೇತರಿಸಿಕೊಂಡು ಸರಿಯಾಗುತ್ತವೆಯಂತೆ. (ಏಜೆನ್ಸೀಸ್​)

    ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ಕೆಲಸದಾಳಿನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಕಸದ ರಾಶಿಯಲ್ಲೇ ಶವವನ್ನು ಹೂತಿಟ್ಟ ಜೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts