More

    ಟೆಲಿಸ್ಕೋಪ್‌ನಿಂದ ಖಗೋಳ ವಿಸ್ಮಯ ದರ್ಶನ

    ಭದ್ರಾವತಿ: ಆಕಾಶ ಒಂದು ಉಚಿತ ಪ್ರಯೋಗ ಶಾಲೆ. ಯಾವುದೇ ಖರ್ಚಿಲ್ಲದೆ ಕುತೂಹಲದಿಂದ ಆಕಾಶ ವೀಕ್ಷಿಸಿ ಖಗೋಳದ ಅನೇಕ ಮಾಹಿತಿಗಳನ್ನು ತಿಳಿಯಬಹುದಾಗಿದೆ ಎಂದು ಖಗೋಳ ತಜ್ಞ ಹಾಗೂ ಶಾಲಾ ಮುಖ್ಯ ಶಿಕ್ಷಕ ಹರೋನಹಳ್ಳಿಸ್ವಾಮಿ ಹೇಳಿದರು.
    ತಾಲೂಕಿನ ಹಿರಿಯೂರು ಗ್ರಾಮದ ಬಯಲು ರಂಗಮAದಿರದಲ್ಲಿ ಬುಧವಾರ ಆಯೋಜಿಸಿದ್ದ ಬೃಹತ್ ಟೆಲಿಸ್ಕೋಪ್ ಮೂಲಕ ಆಕಾಶಕಾಯಗಳ ದರ್ಶನ ಹಾಗೂ ವಿಶ್ವದ ರಹಸ್ಯ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಬರಿಗಣ್ಣಿನಿಂದಲೆ ಶುಕ್ರ, ಶನಿ, ಮಂಗಳ, ಗುರು ಗ್ರಹಗಳನ್ನು ನೋಡಬಹುದಾಗಿದೆ. ಅಲ್ಲದೆ ಚಂದ್ರನ ಚಲನೆಗಳನ್ನು ಅರಿಯಬಹುದಾಗಿದೆ. ಹಲವು ನಕ್ಷತ್ರ ರಾಶಿಗಳು, ವೈವಿಧ್ಯ ಬಣ್ಣದ ಚಿತ್ತಾರಗಳನ್ನು ಕಾಣಬಹುದು. ಆಕಾಶದಲ್ಲಿ ಅನೇಕ ವಿಸ್ಮಯ ವೈವಿಧ್ಯತೆಗಳನ್ನು ಅರಿತು ಚಿಂತಿಸಿದರೆ ನಾವು ವಿಶ್ವ ಮಾನವ ಚಿಂತನೆಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
    ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದು ಟೆಲಿಸ್ಕೋಪ್ ಮೂಲಕ ಶನಿ ಹಾಗೂ ಅದರ ಸುಂದರ ಬಳೆಗಳು, ಗುರುಗ್ರಹ ಹಾಗೂ ಅದರ ನಾಲ್ಕು ಉಪಗ್ರಹಗಳು, ಚಂದ್ರನ ಕುಳಿಗಳು, ನಕ್ಷತ್ರ ಪುಂಜಗಳನ್ನು ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts