ಮೋದಿಯನ್ನು ತೆಗಳಿದಷ್ಟೂ ಕಮಲ ಅರಳಿದೆ, ರಾಹುಲ್ ಉದ್ಧಾರ ಆಗಲ್ಲ: ಅಮಿತ್ ಷಾ

Amit Shah (1)
Published on

ಗದಗ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತೆಗಳಿದಷ್ಟೂ ಕಮಲ ಅರಳಿದೆ ಎನ್ನುವ ಮೂಲಕ ಎಲ್ಲ ಟೀಕೆಗಳಿಗೆ ಕೇಂದ್ರ ಸಚಿವ ಅಮಿತ್ ಷಾ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಗದಗದ ಲಕ್ಷ್ಮೇಶ್ವರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು ಈ ವಿಷಯ ಹೇಳಿದರು.

ಮೋದಿಯನ್ನು ಮುಟ್ಟಿದರೆ ವಿಷ ಎನ್ನುತ್ತಾರೆ. ಬಡವರ ಕಷ್ಟ ಹರಣ ಮಾಡಿದ ಮೋದಿ ವಿಷದ ಹಾವು ಎನ್ನುತ್ತಾರೆ. ಆದರೆ ಮೋದಿಯವರನ್ನು ತೆಗಳಿದಷ್ಟೂ ಕಮಲ ಅರಳಿದೆ ಎಂದು ಅಮಿತ್ ಷಾ ಹೇಳಿದ್ದಾರೆ. ಭ್ರಷ್ಟಾಚಾರ ಬಂದ್ ಮಾಡಿದರಷ್ಟೇ ಉದ್ಧಾರ ಎಂದ ಷಾ, ರಾಹುಲ್ ಗಾಂಧಿ ಉದ್ಧಾರ ಆಗಲ್ಲ ಎಂದರು.

ಒಂದು ರೂಪಾಯಿ ಕೊಟ್ಟರೆ 25 ಪೈಸೆ ಮಾತ್ರ ಜನರಿಗೆ ಸೇರುತ್ತಿದೆ ಎಂದು ರಾಹುಲ್ ಗಾಂಧಿಯ ತಂದೆ ಹೇಳುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ ಅಮಿತ್ ಷಾ, ಉಳಿದ ಹಣವನ್ನು ಯಾರು ತಿನ್ನುತ್ತಿದ್ದರು ಪ್ರಶ್ನೆ ಮಾಡಿದರು.

ರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾದ ಮಂದಿರ ಶೀಘ್ರ ಉದ್ಘಾಟನೆ ಆಗಲಿದೆ ಎಂದ ಅಮಿತ್ ಷಾ, ಲಿಂಗಾಯತ ವಿಚಾರವನ್ನೂ ಪ್ರಸ್ತಾಪಿಸಿದರು. ಲಿಂಗಾಯತ ಮುಖ್ಯಮಂತ್ರಿಯನ್ನು ಅಪಮಾನ ಮಾಡಿ ಕೆಳಗಿಸಿದ್ದು ಕಾಂಗ್ರೆಸ್, ಈಗ ಲಿಂಗಾಯತರು ಬಿಜೆಪಿಯಿಂದ ಮುನಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಎಂದು ಷಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net