More

    ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಅಡ್ಡಲಾಗಿ ನಿಂತ ಲಾರಿ; ಐದು ತಾಸು ಸಂಚಾರ ಅಸ್ತವ್ಯಸ್ತ

    ರಿಪ್ಪನ್‌ಪೇಟೆ: ಸಮೀಪದ ಸೂಡೂರು ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮರಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಅಡ್ಡಲಾಗಿ ತಿರುಗಿನಿಂತ ಪರಿಣಾಮ ಆಯನೂರು-ರಿಪ್ಪನ್‌ಪೇಟೆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಕಿಮೀಗೂ ಅಧಿಕ ದೂರ ಸಂಚಾರ ದಟ್ಟಣೆ ಉಂಟಾಗಿತ್ತು.

    ಮಂಗಳೂರು ಬಂದರಿನಿಂದ ಕಲ್ಲಿದ್ದಲು ತುಂಬಿಕೊಂಡು ಬಳ್ಳಾರಿಗೆ ಹೊರಟ್ಟಿದ್ದ ಲಾರಿ ಶನಿವಾರ ಮುಂಜಾನೆ ಐದರ ವೇಳೆಗೆ ಸೂಡೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಗುದ್ದಿದೆ. ಪರಿಣಾಮ ಲಾರಿಯ ಮುಂಭಾಗ ಜಖಂಗೊಂಡಿದ್ದು ಚಾಲಕ ಹಾಗೂ ನಿರ್ವಾಹಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
    ಈ ಸಂದರ್ಭದಲ್ಲಿ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್‌ನ ಚಾಲಕ ಅಪಘಾತವನ್ನು ಗಮನಿಸಿ ತಕ್ಷಣ ಬ್ರೇಕ್ ಹಾಕಿದ ಕಾರಣ ಬಸ್ ರಸ್ತೆ ಬದಿಯ ಚರಂಡಿಗೆ ನುಗ್ಗಿದೆ. ಇದರಿಂದಾಗಿ ಆಗಬಹುದಾಗಿದ್ದ ಮತ್ತೊಂದು ಅಪಘಾತ ತಪ್ಪಿದೆ. ಲಾರಿಯನ್ನು ತೆರವುಗೊಳಿಸಲು, ಖಾಸಗಿ ಬಸ್ ಅಡ್ಡಿಯಾದ ಕಾರಣ ಸತತ ಐದು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
    ತಾತ್ಕಾಲಿಕವಾಗಿ ವಾಹನಗಳು ಆಯನೂರು-ಚೋರಡಿ-ಆನಂದಪುರ-ರಿಪ್ಪನ್‌ಪೇಟೆ ಹಾಗೂ ಕುರಂಬಳ್ಳಿ-ಬಸವಾಪುರ-ಹಾರೋಹಿತ್ತಲು-ಅರಸಾಳು-ರಿಪ್ಪನ್‌ಪೇಟೆ ಮಾರ್ಗವಾಗಿ ಸಂಚರಿಸಿದವು. ಸ್ಥಳಕ್ಕೆ ಆಗಮಿಸಿದ ಕುಂಸಿ ಠಾಣೆಯ ಪೊಲೀಸರು ಕ್ರೇನ್ ಮೂಲಕ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts