More

    ಲಂಡನ್ ಬ್ರಿಜ್ ಇನ್ನು ನೆನಪು ಮಾತ್ರ

    ಕಾರವಾರ: ನಗರವನ್ನು ಜೋಡಿಸಿದ ಐತಿಹಾಸಿಕ ಲಂಡನ್ ಬ್ರಿಜ್ ಇನ್ನು ನೆನಪು ಮಾತ್ರ. ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ನಿರ್ವಣದ ಭಾಗವಾಗಿ ಅದನ್ನು ಒಡೆಯಲಾಗುತ್ತಿದ್ದು, ಮಂಗಳವಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ.

    ಬ್ರಿಟಿಷ್ ಆಡಳಿತದ ಕಾಲದಲ್ಲಿ ಕೋಣೆನಾಲಾಕ್ಕೆ ಅಡ್ಡಲಾಗಿ ಉಕ್ಕಿನಿಂದ ನಿರ್ಮಾಣ ಮಾಡಿದ ಸೇತುವೆ ಇದಾಗಿತ್ತು. ಇದರಿಂದ ಲಂಡನ್ ಬ್ರಿಜ್ ಎಂಬ ಹೆಸರು ಬಂದಿರಬೇಕು ಎನ್ನುತ್ತಾರೆ ಕಾರವಾರದ ಹಿರಿಯರು. ಆದರೆ, ಸೇತುವೆಯನ್ನು ಎಷ್ಟು ವೆಚ್ಚದಲ್ಲಿ ಯಾವಾಗ ನಿರ್ವಿುಸಿದರು ಎಂಬ ಬಗ್ಗೆ ಇಲಾಖೆಗಳ ಬಳಿ ಅಧಿಕೃತ ದಾಖಲೆಗಳು ಉಳಿದುಕೊಂಡಿಲ್ಲ.

    ನಿರ್ವಣದ ನಂತರ ಕೆಲ ಬಾರಿ ಸೇತುವೆಯನ್ನು ನವೀಕರಣ ಮಾಡಿದ ಕುರುಹುಗಳಿವೆ. ಆದರೆ, ಹಳೆಯ ಕಂಬಗಳು, ಕಲ್ಲುಗಳು ಇನ್ನೂ ಸೇತುವೆಯನ್ನು ಘಟ್ಟಿಮುಟ್ಟಾಗಿರಿಸಿದ್ದವು.

    ಕಾರವಾರ ಬಂದರಿನ ವಹಿವಾಟು ಹೆಚ್ಚಿಸಬೇಕು ಎಂಬ ಕಾರಣಕ್ಕೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 1857 ರಿಂದ 1864 ರ ನಡುವೆ ಕಾರವಾರದ ಕೋಣೆ ಪ್ರದೇಶವನ್ನು ಅಭಿವೃದ್ಧಿ ಮಾಡಿ ಇಲ್ಲಿ ನಗರ ನಿರ್ಮಾಣ ಮಾಡುತ್ತದೆ. ಇಲ್ಲಿನ ಹಳೆಯ ಎಸ್​ಪಿ ಕಚೇರಿ ಕಟ್ಟಡವನ್ನು (ಕೆಲ ವರ್ಷಗಳ ಹಿಂದೆ ಒಡೆಯಲಾಗಿದೆ)1864 ರಲ್ಲಿ ನಿರ್ಮಾಣ ಮಾಡಿದ ಬಗ್ಗೆ ಕೆನರಾ ಗೆಜೆಟಿಯರ್ ಹೇಳುತ್ತದೆ. ಅದೇ ಅವಧಿಯಲ್ಲಿ ವಾಣಿಜ್ಯ ಬಂದರು ಇರುವ ಬೈತಖೋಲ್ ಹಾಗೂ ಕಾರವಾರ ಪಟ್ಟಣವನ್ನು ಬೆಸೆಯಬಲ್ಲ ಸಣ್ಣ ಸೇತುವೆಯನ್ನೂ ನಿರ್ಮಾಣ ಮಾಡಿರಬಹುದು ಎನ್ನುತ್ತಾರೆ ಹಿರಿಯರು.

    ಸಮುದ್ರದ ಉಪ್ಪು ನೀರು ಹಾಗೂ ಕೋಣೆನಾಲಾದ ಕೊಳಚೆ ಎರಡನ್ನೂ ತಾಳಿಕೊಂಡು ಸೇತುವೆ ಇಷ್ಟು ವರ್ಷ ಬಾಳಿಕೆ ಬಂದಿದ್ದೇ ಅಚ್ಚರಿ ಮೂಡಿಸಿದೆ. ಈಗ ಲಂಡನ್ ಬ್ರಿಜ್ ಪಕ್ಕವೇ ಹೊಸ ಎರಡು ಸೇತುವೆಗಳು ನಿರ್ವಣವಾಗಿವೆ. ಇದರಿಂದ ಹಳೆಯ ಸೇತುವೆಯನ್ನು ಒಡೆದು ತೆಗೆಯಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts