More

    ಚೀನಾ-ಅರುಣಾಚಲ ಪ್ರದೇಶದ ಗಡಿ ವಿಂಗಡಿಸುವುದು ಎಲ್​ಎಸಿ ಅಲ್ಲ!

    ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್​ಎ) 1962ರಿಂದ ಈಚೆಗೆ ಅತಿಕ್ರಮಿಸಿ ತನ್ನ ವಶದಲ್ಲಿ ಇರಿಸಿಕೊಂಡಿರುವ ಅರುಣಾಚಲ ಪ್ರದೇಶದ ಭೂಭಾಗದ ವ್ಯಾಪ್ತಿ ಅಂದಾಜಿಸುವುದಕ್ಕೆ ಸಮಿತಿಯನ್ನು ರಚಿಸಬೇಕು ಎಂದು ಅಲ್ಲಿನ ಬಿಜೆಪಿ ಸಂಶದ ತಪೀರ್ ಗಾವೋ ಲೋಕಸಭೆಯಲ್ಲಿ ನಿನ್ನೆ ಆಗ್ರಹಿಸಿದ್ದಾರೆ.

    ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಗಾವೋ, ಸ್ಪೀಕರ್ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆಯಾಗಬೇಕು. ಅರುಣಾಚಲ ಪ್ರದೇಶದ ಗಡಿಯಲ್ಲಿ ಈಗ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ ಈಗಿಲ್ಲ. ಅಲ್ಲಿರುವುದು ಮೆಕ್​ಮಹೋನ್ ಲೈನ್​. 1914ರಲ್ಲಿ ಅಂದಿನ ಬ್ರಿಟಿಷ್ ಇಂಡಿಯಾದ ಹೆನ್ರಿ ಮೆಕ್​ಮಹೋನ್ ಮತ್ತು ದಲೈ ಲಾಮಾ ಅವರ ಪ್ರತಿನಿಧಿ ಶಿಮ್ಲಾದಲ್ಲಿ ಏರ್ಪಟ್ಟ ಒಪ್ಪಂದದ ಪ್ರಕಾರ ಇರುವ ರೇಖೆ ಇದು. ಅಂದು ಚೀನಾ ಇರಲಿಲ್ಲ ಎಂದು ಗಾವೋ ವಿವರಿಸಿದರು.

    ಇದನ್ನೂ ಓದಿ: Web Exclusive: ನೆರೆ ಲೋಕೋಪಯೋಗಿ ಇಲಾಖೆಗೆ ಹೊರೆ; ತುರ್ತು ದುರಸ್ತಿ ಕೈಬಿಟ್ಟರೆ ಹೆಚ್ಚುವರಿ ಬರೆ

    ಗಾವೋ ಅವರಿಗೆ ನೀಡಿದ್ದ ಅವಧಿಗಿಂತ ಹೆಚ್ಚು ಮಾತನಾಡಿದ್ದರಿಂದ ಅವರ ಮಾತುಗಳನ್ನು ಅರ್ಧಕ್ಕೇ ಮೊಟಕುಗೊಳಿಸಿ ಮೈಕ್ ಆಫ್ ಮಾಡಲಾಗಿದೆ. ಆದಾಗ್ಯೂ, ಅವರು ಮನವಿ ಮಾಡಿದ ನಂತರ ಮೈಕ್ ಆನ್ ಮಾಡಲಾಗಿತ್ತು. ಆಗ ಅವರು ಸ್ಪೀಕರ್ ಬಿರ್ಲಾ ಅಧ್ಯಕ್ಷತೆಯ ಸಮಿತಿ ರಚನೆಯಾಗಲಿ ಎಂದು ಆಗ್ರಹಿಸಿದರು. (ಏಜೆನ್ಸೀಸ್)

    ರಾಜತಾಂತ್ರಿಕ ಅಧಿಕಾರಿಗೆ ಪಾಕ್​​​ನಿಂದ ವೀಸಾ ನಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts