More

    ರಾಜತಾಂತ್ರಿಕ ಅಧಿಕಾರಿಗೆ ಪಾಕ್​​​ನಿಂದ ವೀಸಾ ನಕಾರ

    ನವದೆಹಲಿ: ಪಾಕಿಸ್ತಾನಕ್ಕೆ ಹೊಸದಾಗಿ ರಾಜತಾಂತ್ರಿಕ ಅಧಿಕಾರಿಯಾಗಿ ನೇಮಕಗೊಂಡಿರುವ ಜಯಂತ್ ಖೋಬ್ರಗಡೆ ಅವರಿಗೆ ವೀಸಾ ನಿರಾಕರಿಸುವ  ಧಾರ್ಷ್ಟ್ಯವನ್ನು ಪಾಕಿಸ್ತಾನ ತೋರಿಸಿದ್ದು ಉಭಯ ದೇಶಗಳ ನಡುವಣ ಸಂಬಂಧ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ. ರಾಜತಾಂತ್ರಿಕರ ನೇಮಕದ ಬಗ್ಗೆ ಮೂಗುತೂರಿಸಬೇಕಿಲ್ಲ ಎಂದು ಪಾಕ್​ಗೆ ಭಾರತ ಖಡಕ್ಕಾಗಿ ಹೇಳಿದೆ.

    ಖೋಬ್ರಗಡೆ ಅವರನ್ನು ಇಸ್ಲಾಮಾಬಾದ್​ನಲ್ಲಿ ಹೊಸ ‘ಚಾರ್ಜ್ ಡಿ ಅಫೇರ್ಸ್’ ಆಗಿ ನೇಮಿಸಿರುವುದನ್ನು ಪಾಕಿಸ್ತಾನ ತಿರಸ್ಕರಿಸಿದೆ. ದೂತಾವಾಸ ಕಚೇರಿಯಲ್ಲಿ ಅರ್ಧದಷ್ಟು ಸಿಬ್ಬಂದಿ ಕಡಿತ ಮಾಡಿರುವುದರಿಂದ ಭಾರತದ ದೂತಾವಾಸ ನಿರ್ವಹಣೆಗೆ ಖೋಬ್ರಗಡೆಯಂಥ ಬಹಳ ಹಿರಿಯ ರಾಜತಾಂತ್ರಿಕರ ಅಗತ್ಯವಿಲ್ಲ ಎನ್ನುವುದು ಪಾಕಿಸ್ತಾನದ ವಾದವಾಗಿದೆ. ಉಭಯ ದೇಶಗಳ ಮಧ್ಯೆ ರಾಜತಾಂತ್ರಿಕ ಸಂಬಂಧ ಬಹಳ ಕನಿಷ್ಠ ಮಟ್ಟದಲ್ಲಿರುವುದರಿಂದ ಅವರ ಅಗತ್ಯವಿಲ್ಲ ಎಂದೂ ಹೇಳಿದೆ. ಪಾಕ್ ಧೋರಣೆಯನ್ನು ಖಂಡಿಸಿರುವ ಭಾರತ, ಯಾರನ್ನು ರಾಜತಾಂತ್ರಿಕರಾಗಿ ನೇಮಿಸಬೇಕೆಂಬುದು ನಮಗೆ ಬಿಟ್ಟ ವಿಚಾರ. ಇದರಲ್ಲಿ ಪಾಕ್ ಹಸ್ತಕ್ಷೇಪ ಅನಗತ್ಯ ಎಂದು ತಿರುಗೇಟು ನೀಡಿದೆ. ಪಾಕಿಸ್ತಾನ ದೂತಾವಾಸ ಕಚೇರಿಯಲ್ಲಿನ ಸಿಬ್ಬಂದಿಗಳನ್ನು ಅರ್ಧದಷ್ಟು ಕಡಿತ ಮಾಡುವ ಮೂಲಕ ಪಾಕ್ ಜತೆಗಿನ ರಾಜತಾಂತ್ರಿಕ ಸಂಬಂಧದ ಮಟ್ಟವನ್ನು ಕಡಿಮೆ ಮಾಡಲು ಭಾರತ ಜೂನ್​ನಲ್ಲಿ ಅಧಿಕೃತವಾಗಿ ನಿರ್ಧರಿಸಿತ್ತು. ಇದನ್ನೂ ಓದಿ: ‘ಥಟ್ಟನೆ ಗುಪ್ತಾಂಗ ತೋರಿಸಿದ್ದಾರೆ …ಬಲವಂತ ಮಾಡಿದ್ದಾರೆ’: ದೊಡ್ಡ ನಟರ ವಿರುದ್ಧ ಕಂಗನಾ ಆರೋಪ

    21 ಅತ್ಯುಗ್ರರಿಗೆ ಪಾಕ್ ರಾಜಾತಿಥ್ಯ

    ಹಣಕಾಸು ಕ್ರಿಯಾ ಕಾರ್ಯ ಪಡೆಯ (ಎಫ್​ಎಟಿಎಫ್) ಉಗ್ರ ಕ್ರಮದ ಕತ್ತಿ ನೆತ್ತಿ ಮೇಲೆ ತೂಗುತ್ತಿದ್ದರೂ ಪಾಕಿಸ್ತಾನ, ದಾವೂದ್ ಇಬ್ರಾಹಿಂ, ಖಲಿಸ್ತಾನ್ ಜಿಂದಾಬಾದ್ ಪಡೆಯ (ಕೆಜಡ್​ಎಫ್) ರಣಜೀತ್ ಸಿಂಗ್ ನೀತಾ ಸಹಿತ 21 ಭಯೋತ್ಪಾದಕರಿಗೆ ಆಶ್ರಯ ಕೊಟ್ಟು ರಾಜಾತಿಥ್ಯ ನೀಡುತ್ತಿದೆ ಎಂಬ ಅಂಶ ಬಯಲಿಗೆ ಬಂದಿದೆ.

    ಉಗ್ರರಿಗೆ ಹಣಕಾಸು ನೆರವು ಒದಗಿಸುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಎಫ್​ಎಟಿಎಫ್ ಪಾಕಿಸ್ತಾನವನ್ನು ಆಗ್ರಹಿಸುತ್ತಿದೆ. ಇಲ್ಲದಿದ್ದರೆ ಬೂದು ಪಟ್ಟಿಯಿಂದ ಕೆಂಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡುತ್ತಾ ಬಂದಿದೆ. ಅಷ್ಟಾದರೂ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಅದು ನಿಲ್ಲಿಸಿಲ್ಲ. ಬಬ್ಬರ್ ಖಾಲ್ಸಾ ಇಂಟರ್​ನ್ಯಾಷನಲ್​ನ ವಾಧ್ವಾ ಸಿಂಗ್, ಇಂಡಿಯನ್ ಮುಜಾಹಿದ್ದೀನ್​ನ ರಿಯಾಜ್ ಭಟ್ಕಳ್, ಮಿರ್ಜಾ ಷಾದಾಬ್ ಬೇಗ್ ಮತ್ತು ಹಸನ್ ಸಿದ್ದಿಬಾಪಾ ಮೊದಲಾದವರು ಈ ಪಟ್ಟಿಯಲ್ಲಿದ್ದಾರೆ.

    ಕಾರು ಗಂಟೆಗೆ 140 ಕಿ.ಮೀ. ಸ್ಪೀಡ್​ನಲ್ಲಿತ್ತು, ಡ್ರೈವರ್ ಮಲಗಿದ್ದ.. ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts