More

    ಕಾರು ಗಂಟೆಗೆ 140 ಕಿ.ಮೀ. ಸ್ಪೀಡ್​ನಲ್ಲಿತ್ತು, ಡ್ರೈವರ್ ಮಲಗಿದ್ದ.. ಮುಂದೇನಾಯ್ತು?

    ಅತ್ಯಾಧುನಿಕ ಐಷಾರಾಮಿ ಕಾರು ಗಂಟೆಗೆ 140 ಕಿ.ಮೀ. ವೇಗದಲ್ಲಿತ್ತು, ಆದರೆ ಅದರ ಚಾಲಕ ಸೆಲ್ಫ್​ ಡ್ರೈವಿಂಗ್ ಮೋಡ್​ನಲ್ಲಿಟ್ಟು ನಿದ್ರಿಸುತ್ತಿದ್ದ. ಇನ್ನೂ ಸ್ವಲ್ಪ ಹೊತ್ತು ಹಾಗೇ ಮುಂದುವರಿದಿದ್ದರೆ ಖಂಡಿತ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

    ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸುವ ಮೊದಲೇ ಅಲ್ಲಿನ ಪೊಲೀಸರು ತಕ್ಷಣ ಕ್ರಮಕೈಗೊಂಡಿದ್ದಾರೆ. ಮಾತ್ರವಲ್ಲ ಚಾಲಕನನ್ನು ವಶಕ್ಕೆ ಪಡೆದು ಆತನ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಿದ್ದಾರೆ.

     

    ಅಂದಹಾಗೆ, ಇಂಥದ್ದೊಂದು ಸನ್ನಿವೇಶ ಉಂಟಾಗಿದ್ದು ದೂರದ ಕೆನಡದ ಅಲ್ಬರ್ಟ ಎಂಬಲ್ಲಿನ ಪೊನೊಕ ಸಮೀಪದ ಹೈವೇಯಲ್ಲಿ. ಈ ಬಗ್ಗೆ ಅಲ್ಲಿನ ಆರ್​ಸಿಎಂಪಿಗೆ ದೂರು ಬಂದಿದ್ದು, ಅವರು ಟೆಸ್ಲಾ ಕಾರು ಚಾಲಕನಿಂದ ಆಗಬಹುದಾಗಿದ್ದ ಅಪಘಾತ-ಅನಾಹುತವನ್ನು ತಪ್ಪಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts