More

    ನಾಯಕರು ಕೈಬಿಟ್ಟರೂ ಶಿಕ್ಷಕರು ಬಿಡಲಿಲ್ಲ!

    ಹಿರೆಕೆರೂರ: ನಾನು ನಂಬಿದ ನಾಯಕರು ನನ್ನನ್ನು ಕೈಬಿಟ್ಟರೂ ಶಿಕ್ಷಕರು ನನ್ನ ಕೈಬಿಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

    ಬಸವರಾಜ ಹೊರಟ್ಟಿಯವರು ವಿಧಾನ ಪರಿಷತ್ ಪ್ರವೇಶಿಸಿ ಇಂದಿಗೆ 40 ವರ್ಷವಾದ್ದರಿಂದ ಪಟ್ಟಣದ ಸಿ.ಇ.ಎಸ್. ವಿದ್ಯಾಸಂಸ್ಥೆಯ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಭವನದಲ್ಲಿ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ಹುಬ್ಬಳ್ಳಿ ಘಟಕ, ಜಿಲ್ಲಾ ಘಟಕ ಹಾವೇರಿ ಮತ್ತು ತಾಲೂಕು ಘಟಕಗಳ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಎಪ್ಪತ್ತರ ದಶಕಗಳಲ್ಲಿ ಕೆಲವೊಂದು ಆಡಳಿತ ಮಂಡಳಿಗಳು ಶಿಕ್ಷಕರಿಗೆ ನೆಮ್ಮದಿಯ ಜೀವನ ಮಾಡಲು ಬಿಡದೇ ಮಕ್ಕಳಿಗೆ ಸರಿಯಾಗಿ ಪಾಠ ಮಾಡದಂಥ ಸ್ಥಿತಿ ಇತ್ತು. ಆ ಸಮಯದಲ್ಲಿ ನೋವು ಉಂಡ ಶಿಕ್ಷಕರ ಧ್ವನಿಗಾಗಿ ಹೋರಾಡಿದ ಫಲವೇ 40 ವರ್ಷಗಳ ಕಾಲ ಶಾಸಕ ಸ್ಥಾನ ಹೊಂದಲು ಸಾಧ್ಯವಾಯಿತು ಎಂದು ಭಾವುಕರಾಗಿ ಹೇಳಿದರು.

    ನನ್ನ ರಾಜಕೀಯ ಜೀವನದಲ್ಲಿ ನಿಷ್ಕಳಂಕ ಮತ್ತು ಯಾವುದೇ ಒಳ ರಾಜಕಾರಣಕ್ಕೆ ರಾಜಿ ಮಾಡಿಕೊಂಡವನಲ್ಲ. ಸಂಸಾರದಲ್ಲಿದ್ದರೂ ನನ್ನ ನಂಬಿದ ಶಿಕ್ಷಕರಿಗೋಸ್ಕರ ಸನ್ಯಾಸಿಯಂತೆ ಸೇವೆ ಮಾಡಿದ್ದೇನೆ. ಏನು ಮಾಡುವುದು ನಾನು ನಂಬಿದವರು ನನ್ನ ಕೈ ಬಿಟ್ಟರೂ ನನ್ನ ಶಿಕ್ಷಕರು ಏಂದಿಗೂ ನನ್ನ ಕೈ ಬಿಡಲಾರರು ಎಂದು ಮಾರ್ವಿುಕವಾಗಿ ಹೇಳಿದರು. ತಮ್ಮ ಹೊರಾಟದ ಹಾದಿಗಳನ್ನು ಸ್ಮರಿಸಿದ ಅವರು, ಇಂದಿನ ಯುವ ಪೀಳಿಗೆಯ ಶಿಕ್ಷಕರು ಕಾಯಕ ನಿಷ್ಠೆ ಮತ್ತು ಸಂಘಟನಾ ಶಕ್ತಿ ದೊಡ್ಡದು ಎಂಬುದನ್ನು ಅರಿಯಬೇಕು ಎಂದು ಕಿವಿ ಮಾತು ಹೇಳಿದರು.

    ತಾಲೂಕು ಮಾಧ್ಯಮಿಕ ಶಾಲಾ ಶಿಕ್ಷಕ ನೌಕರರ ಸಂಘದ ಅಧ್ಯಕ್ಷ ರಾಜು ಬೆಟ್ಟಳ್ಳೇರ, ಜಿಲ್ಲಾ ಅಧ್ಯಕ್ಷ ಎಚ್.ಬಿ. ಬಣಕಾರ, ನಿವೃತ್ತ ಶಿಕ್ಷಕ ಎಂ.ಬಿ. ಸಾವಜ್ಜಿಯವರ ಹಾಗೂ ಮುಖ್ಯ ಶಿಕ್ಷಕರಾದ ಎಂ.ಎಂ. ಕೆರೂರ, ಆರ್.ಎಚ್. ದೊಡ್ಮನಿ, ಸಿ.ಆರ್. ಹುಲ್ಲತ್ತಿ, ಎನ್. ಸುರೇಶಕುಮಾರ, ರೇಣುಕಾ ಪೂಜಾರ ಹಾಗೂ ತಾಲೂಕಿನ ಎಲ್ಲ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹೊರಟ್ಟಿಯವರ ಅಭಿಮಾನಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts