More

    ಕರೊನಾ ವೈರಸ್​ನಿಂದಾಗಿ ಕಾಲೇಜುಗಳಿಗೂ ರಜೆ!: ಕರೊನಾ ವೈರಸ್​ ತಡೆಯಲು ಲಡಾಕ್​ ಸರ್ಕಾರದ ಕ್ರಮ

    ಲಡಾಕ್​: ದೇಶದಲ್ಲಿ ಕರೊನಾ ವೈರಸ್​ ಪೀಡಿತರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಲಡಾಕ್​ನಲ್ಲಿ ಹಲವರಲ್ಲಿ ಸೋಂಕು ಇರಬಹುದು ಎಂದು ಶಂಕಿಸಲಾಗಿದ್ದು ಅಲ್ಲಿನ ಸರ್ಕಾರ ಸೋಂಕು ತಡೆಗೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಇದುವರೆಗೆ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿದ್ದು, ಇಂದು ಕಾಲೇಜುಗಳಿಗೂ ಸಹ ರಜೆ ಘೋಷಣೆ ಮಾಡಲಾಗಿದೆ.

    ಲಡಾಕ್​ನಲ್ಲಿ ಕರೊನಾ ವೈರಸ್​ಗೆ ಮುನ್ನೆಚ್ಚರಿಕಾ ಕ್ರಮವಾಗಿ ಕಳೆದ ವಾರ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು ಇಂದು ಕಾಲೇಜುಗಳಿಗೂ ಸಹ ರಜೆ ಘೋಷಣೆ ಮಾಡಲಾಗಿದೆ. ಮಾರ್ಚ್​ 31ರವರೆಗೆ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡುರುವುದಾಗಿ ಲಡಾಕ್​ನ ಉನ್ನತ ಶಿಕ್ಷಣ ಕಾರ್ಯದರ್ಶಿ ರಿಗ್ಜಿಯಾನ್​ ಸಂಪೀಲ್​ ಆದೇಶ ಹೊರಡಿಸಿದ್ದಾರೆ.

    ಇರಾನ್​ನಿಂದ ಲಡಾಕ್​ಗೆ ಬಂದಿಳಿದಿದ್ದ 76 ವರ್ಷ ವೃದ್ಧ ಮೃತನಾಗಿದ್ದು ಆತನಲ್ಲಿ ಸೋಂಕಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ವೈದ್ಯಕೀಯ ತಪಾಸಣೆಯಲ್ಲಿ ಆತನಲ್ಲಿ ಸೋಂಕಿರುವುದು ಧೃಡವಾಗಿಲ್ಲ. ಒಟ್ಟು 27 ಜನರ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ 11 ಜನರ ವರದಿ ಬಂದಿದೆ. ಆ ಪೈಕಿ ಇಬ್ಬರಲ್ಲಿ ಸೋಂಕಿರುವುದು ಧೃಡವಾಗಿದೆ ಎಂದು ಅವರು ರಿಗ್ಜಿಯಾನ್​ ಸಂಪೀಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಟೆಕ್ಕಿಗಳೇ ಹುಷಾರ್​!: ಬೆಂಗಳೂರಿನ ಎರಡು ಟಾಪ್​ ಟೆಕ್​ ಕಂಪನಿಗಳಲ್ಲೇ ಕರೊನಾ ಕಾಣಿಸಿಕೊಂಡಿದ್ದು

    ಶಂಕಿತ ಕರೊನಾ ವೈರಸ್​ ಸೋಂಕಿನಿಂದ ಮೃತಪಟ್ಟ ವೃದ್ಧನ ಶವವನ್ನು ಅವ್ಯವಸ್ಥಿತವಾಗಿ ಇಟ್ಟಿದ್ದ ಕಲಬುರಗಿ ಆಸ್ಪತ್ರೆ ವಿರುದ್ಧ ಜನರ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts