More

    ಪವಿತ್ರ ಗ್ರಂಥಗಳು ಮನುಕುಲಕ್ಕೆ ದಾರಿದೀಪ; ಹಾಸಿಂಪೀರ ವಾಲಿಕಾರ ಹೇಳಿಕೆ

    ವಿಜಯಪುರ: ಪವಿತ್ರ ಗ್ರಂಥಗಳು ಮಾನವೀಯ ಮೌಲ್ಯಗಳ ಆಗರಗಳು. ಮನುಕುಲಕ್ಕೆ ಉತ್ತಮ ಸಂದೇಶ ನೀಡುವಂಥ ಗ್ರಂಥಗಳು ಹೆಚ್ಚು ಹೆಚ್ಚು ಮುದ್ರಣ ಮತ್ತು ಪ್ರಸಾರಗೊಳ್ಳಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

    ಮನಗೂಳಿ ಗ್ರಾಮದ ಸುರೇಶ ಗೆಜ್ಜಿ ಇವರ ತೋಟದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರೃ ಸಿರಿ ಗ್ರಂಥ ಲೋಕಾರ್ಪಣೆ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮ ಮಟ್ಟದಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಮನೆ ಮನೆಗೆ ಸಾಹಿತ್ಯದ ರಸದೌತಣ ಉಣಬಡಿಸುತ್ತಿದೆ ಎಂದರು.

    ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚಾಣಿ ಸೈನಿಕ ಸಿರಿ ಕೃತಿ ಪರಿಚಯ ಮಾಡುತ್ತಾ, ಲೇಖಕಿ ಮುಖ್ಯ ಅಧ್ಯಾಪಕಿ ಕಮಲಾ ಗೆಜ್ಜಿ (ಮುರಾಳ) ವಿಜ್ಞಾನ ಶಿಕ್ಷಕಿಯಾಗಿದ್ದವರು. ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಗ್ರಂಥಗಳನ್ನು ರಚಿಸುವುದರ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಸ್ವಾತಂತ್ರೃ ಸಿರಿ ಕೃತಿ ತುಂಬ ಉಪಯುಕ್ತ ಗ್ರಂಥವಾಗಿದೆ ಎಂದರು.

    ಕಮಲಾ ಮುರಾಳ ಹಾಗೂ ಸುರೇಶ ಗೆಜ್ಜಿ ಸ್ವಾತಂತ್ರ್ಯ ಯೋಧರಾದ ದಿ.ಚಂದಪ್ಪ ತೋಟಪ್ಪ ಗೆಜ್ಜಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು.
    ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಗೋ ಮಾತೆಯ ಪೂಜೆ ನೆರವೇರಿಸಿದರು. ಕೃಷಿ ಅಧಿಕಾರಿ ಡಾ.ಡಿ.ಡಬ್ಲೂ ರಾಜಶೇಖರ, ಪ್ರಕಾಶ ಚವಾಣ್ ದ್ರಾಕ್ಷಿ ಬೆಳೆಯ ಮಾಹಿತಿ ನೀಡಿದರು. ರೂಪಸಿಂಗ ಲೋಣಾರಿ, ಸಂಗಣ್ಣ ಗೆಜ್ಜಿ, ಸಂಗನಗೌಡ ಬಿರಾದಾರ, ಶಂಕರಗೌಡ ಪಾಟೀಲ ಮತ್ತಿತರರಿದ್ದರು.

    ಲೇಖಕಿ ಕಮಲಾ ಗೆಜ್ಜಿ (ಮುರಾಳ) ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಗೆಜ್ಜಿ ಪ್ರಾರ್ಥಿಸಿದರು. ಈರಣ್ಣಾ ಚಿಮ್ಮಲಗಿ ಸ್ವಾಗತಿಸಿದರು. ಸಂತೋಷ ಬಿರಾದಾರ ನಿರೂಪಿಸಿದರು. ಕಾಶೀನಾಥ ಮುರಾಳ, ಗಣೇಶ ಕಾಂಬಳೆ, ಚಂದ್ರಶೇಖರ ಸಂಗಮ, ರತ್ನಬಾಯಿ ಬೋಮ್ಮನಳ್ಳಿ, ಉದಯ ಯಾಳವಾರ, ಅಣ್ಣುಗೌಡ ಪಾಟೀಲ, ರಾಜಶೇಖರ ಗೆಜ್ಜಿ, ಲತಾ ಗುಂಡಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts