More

    ಕುಡಿಯುವ ನೀರು ಸಮಸ್ಯೆ ನಿವಾರಿಸಿ

    ಸಿಂದಗಿ: ಮತಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆಗಳನ್ನು ಅರಿಯಲು ಹಾಗೂ ಅದರ ನಿವಾರಣೆಗೆ ಪ್ರತಿ ಶುಕ್ರವಾರ ಸಭೆ ನಡೆಸಿ ಪರಿಹರಿಸಲು ಕ್ರಮ ವಹಿಸಲು ತಾಲೂಕು ಅಧಿಕಾರಿಗಳಿಗೆ ಶಾಸಕ ಅಶೋಕ ಮನಗೂಳಿ ಸೂಚಿಸಿದರು.
    ಶನಿವಾರ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮತಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ನಿವಾರಿಸಲು ಸ್ಥಳೀಯ ಸಂಸ್ಥೆ ಹಾಗೂ ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಣಾಧಿಕಾರಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರಿಗೆ ಸೂಚಿಸಿದರು.
    ಮುಂಬರುವ ಬೇಸಿಗೆ ತಿಂಗಳಲ್ಲಿ ಗಣಿಹಾರ, ಬೆನಕೊಟಗಿ ಎಲ್.ಟಿ, ಕೊಕಟನೂರ, ಕೊಕಟನೂರ, ಬಂದಾಳ, ಯಂಕಂಚಿ, ಗೋಲಗೇರಿ, ಹಂದಿಗನೂರ ಎಲ್.ಟಿ., ಬೋರಗಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಾರದಂತೆ ಮುಂಜಾಗ್ರತೆಯಾಗಿ ಸೂಕ್ತ ವ್ಯವಸ್ಥೆಯನ್ನುಕಲ್ಪಿಸಬೇಕು. ಹಂದಿಗನೂರ ಗ್ರಾಮದ ಕೆರೆಗೆ ನೀರು ಹರಿಸಬೇಕು. ಪ್ರಗತಿಯಲ್ಲಿರುವ ಕ್ಷೇತ್ರದಲ್ಲಿನ ಜಲಜೀವನ ಮಿಷನ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಪುರದಾಳ ಹಾಗೂ ಯಂಕಂಚಿ ಕೆರೆಗಳಿಗೆ ಕಾಲುವೆ ಮುಖಾಂತರ ನೀರು ತುಂಬಿಸಬೇಕು ಎಂದು ತಿಳಿಸಿದರು.
    ಪಟ್ಟಣದಲ್ಲಿನ ಪ್ರತಿ ವಾರ್ಡ್‌ಗಳಿಗೆ ಮೂರು ದಿವಸಕ್ಕೊಮ್ಮೆ ನೀರು ಪೂರೈಸಲು ಪುರಸಭೆ ಮುಖ್ಯಾಧಿಕಾರಿಗೆ, ಜಾನುವಾರುಗಳಿಗೆ ಮೇವು ಹಾಗೂ ಮೇವಿನ ಬೀಜಗಳ ಕೊರತೆಯಾಗದಂತೆ ಎಚ್ಚರ ವಹಿಸಲು ಪಶು ವೈದ್ಯಾಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.
    ಸಭೆಯಲ್ಲಿ ತಹಸೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ತಾಪಂ ಇಒ ರಾಮು ಅಗ್ನಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರ ಮಂಜುನಾಥ ಸ್ವಾಮಿ, ಪಿಆರ್‌ಇಡಿ ಎಇಇ ಜಿ.ವೈ. ಮುರಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts