More

    ಕೂಲಿ, ವ್ಯಾಪಾರ ಇಲ್ಲದೆ ಅಲೆಮಾರಿಗಳ ಸಂಕಷ್ಟ

    ಹಿರೇಕೆರೂರ: ತಾಲೂಕಿನ ಹಂಸಭಾವಿಯ ಹೊರವಲಯದಲ್ಲಿ ವಾಸವಿರುವ ಅಲೆಮಾರಿ ಜನಾಂಗದವರು ಲಾಕ್​ಡೌನ್ ಹಿನ್ನೆಲೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ತಲುಪಿದ್ದಾರೆ.

    ಗ್ರಾಮದ ತಿಳವಳ್ಳಿ ಕ್ರಾಸ್ ಬಳಿ ಕೆರೆಯ ದಡದ ಸರ್ಕಾರದ ಖಾಲಿ ನಿವೇಶನದಲ್ಲಿ ಅನೇಕ ವರ್ಷಗಳಿಂದ ಅಲೆಮಾರಿ ಜನಾಂಗದ 40 ಕುಟುಂಬಗಳು ವಾಸವಾಗಿವೆ. ನಿತ್ಯ ಜೀವನಕ್ಕಾಗಿ ಕೂದಲು, ಪಿನ್ನು, ಸಣ್ಣ ಪ್ಲಾಸ್ಟಿಕ್ ಸಾಮಾನುಗಳ ವ್ಯಾಪಾರ ಹಾಗೂ ಕೂಲಿ ಮಾಡಿಕೊಂಡಿದ್ದರು. ಆದರೆ, ಈಗ ಲಾಕ್​ಡೌನ್ ಘೊಷಿಸಿರುವುದರಿಂದ ವ್ಯಾಪಾರವೂ ಇಲ್ಲ, ಕೂಲಿಯೂ ಇಲ್ಲ ಎಂಬಂತಾಗಿದೆ.

    ಈ ಕುಟುಂಬಗಳಿಗೆ 2 ತಿಂಗಳ ಪಡಿತರ ಸಿಕ್ಕಿದೆ. ಬರಿ ಇವುಗಳಿಂದ ಬದುಕಲು ಸಾಧ್ಯವಿಲ್ಲ. ಕೇವಲ ಅಕ್ಕಿ, ಗೋಧಿ ಕೊಟ್ಟರೆ ಸಾಲುವುದಿಲ್ಲ. ಉಳಿದ ಸಾಮಗ್ರಿಗಳನ್ನು ಕೊಳ್ಳಲು ಹಣ ಬೇಡವೇ ? ವ್ಯಾಪಾರ ಅಥವಾ ದುಡಿಮೆ ಮಾಡಿದರೆ ಮಾತ್ರ ಹಣ ಸಿಗುತ್ತದೆ ಎನ್ನುತ್ತಾರೆ ಇಲ್ಲಿನ ಅಲೆಮಾರಿಗಳು.

    ಇಲ್ಲಿರುವ ಕೊಳವೆ ಬಾವಿಯಲ್ಲಿ ಶುದ್ಧ ಸಹ ನೀರು ದೊರಕುತ್ತಿಲ್ಲ. ಈ ನೀರು ಕುಡಿದರೆ ನಿತ್ಯ ಆಸ್ಪತ್ರೆಗೆ ಅಲೆಯಬೇಕು ಎಂದು ಅಲೆಮಾರಿ ಕುಟುಂಬದ ಯುವಕ ಖಾಸಿಂ ಕುಂಚಿಕೊರವರ್ ಬೇಸರ ವ್ಯಕ್ತಪಡಿಸಿದರು.

    ಗುಡಿಸಲು ಮತ್ತು ತಗಡಿನ ಶೆಡ್​ಗಳಲ್ಲೇ ನಲವತ್ತು ವರ್ಷಗಳಿಂದ ವಾಸವಾಗಿರುವ ಅಲೆಮಾರಿಗಳು ವಿದ್ಯುತ್, ಕುಡಿಯುವ ನೀರು ಸೇರಿ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ಇದೀಗ ಇವರಿಗೆ ಲಾಕ್​ಡೌನ್ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts