More

    ಅಪರಿಚಿತ ಶವದ ಸುಳಿವು ಸಿಗದೇ ಕಂಗಾಲಾಗಿದ್ದ ಪೊಲೀಸರಿಗೆ ನೆರವಾಯ್ತು ಸೀರೆ ಸೆರಗಿನ ಗಂಟು!

    ಹೈದರಾಬಾದ್​: ಮಹಿಳೆಯೊಬ್ಬಳ ಮೃತದೇಹ ಇತ್ತೀಚೆಗಷ್ಟೇ ಮೇಡ್ಚಲ್ ಜಿಲ್ಲೆಯ​ ಘಾಟ್ಕೇಸರ್​ ರೈಲ್ವೆ ಹಳಿಯ ಮೇಲೆ ಅರ್ಧ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳದಲ್ಲಿ ಯಾವುದೇ ಫೋನ್​ ಆಗಲಿ, ಪರ್ಸ್​ ಆಗಲಿ ಪತ್ತೆಯಾಗದೇ ಸಾಕ್ಷ್ಯಾಧಾರದ ಕೊರತೆ ಇತ್ತು. ಮಹಿಳೆಗೆ ಸುಮಾರು 50 ವರ್ಷ ಇರಬಹುದು ಎಂದಷ್ಟೇ ಪೊಲೀಸರು ಅಂದಾಜು ಹಾಕಿದ್ದರು. ಸುಳಿವು ಸಿಗದೇ ಕಂಗಾಲಾಗಿದ್ದ ಪೊಲೀಸರಿಗೆ ಮಹಿಳೆಯ ಸೀರೆಯಲ್ಲಿದ್ದ ಪೇಪರ್​ ತುಣುಕೊಂದು ನಿಗೂಢ ಪ್ರಕರಣವನ್ನು ಭೇದಿಸಲು ಸಹಾಯ ಮಾಡಿದೆ.

    ವಿವರಣೆಗೆ ಬರುವುದಾದರೆ, ಜನವರಿ 4ರಂದು ಅರ್ಧ ಬೆಂದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಮೇಡ್ಚಲ್​ ಜಿಲ್ಲೆಯ ಘಾಟ್ಕೇಸರ್​ ಪೊಲೀಸ್​ ಠಾಣಾ ವ್ಯಾಪ್ತಿಯ ರೈಲು ಹಳಿಯ ಮೇಲೆ ಪತ್ತೆಯಾಗಿತ್ತು. ಮಹಿಳೆ ಉಟ್ಟಿದ್ದ ಸೀರೆ ಸೆರಗಿನ ಗಂಟಿನಲ್ಲಿ ಪೇಪರ್​ ತುಣುಕೊಂದು ಪತ್ತೆಯಾಗಿತ್ತು. ಅದರಲ್ಲಿ ಫೋನ್​ ನಂಬರ್​ ಬರೆಯಲಾಗಿತ್ತು. ತಕ್ಷಣ ತನಿಖೆ ಶುರುವಿಟ್ಟುಕೊಂಡ ಪೊಲೀಸರಿಗೆ ಹೈದರಾಬಾದ್​ನ ನರದ್​ಪೇಟ್​ ಮೂಲದ ವ್ಯಕ್ತಿಯೊಬ್ಬನ ನಂಬರ್​ ಎಂಬುದು ತಿಳಿದಿದೆ. ತಕ್ಷಣ ವಿಚಾರಣೆ ನಡೆಸಿದಾಗ ಮಹಿಳೆ ಗೊತ್ತಿರುವುದಾಗಿ ಹೇಳಿದ್ದಾನೆ.

    ಇದನ್ನೂ ಓದಿರಿ: ಭಯದಿಂದಲೇ ಎಸ್​ಬಿಐ ಉದ್ಯೋಗಿ ಆತ್ಮಹತ್ಯೆಗೆ ಶರಣು: ಡೆತ್​ನೋಟ್​ನಲ್ಲಿತ್ತು ನೋವಿನ ನುಡಿ!

    ಮಹಿಳೆಯನ್ನು ವೆಂಕಟಮ್ಮ ಎಂದು ಗುರುತಿಸಲಾಗಿದೆ. ಜುಬಿಲಿ ಹಿಲ್ಸ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ವೆಂಕಟಗಿರಿ ಏರಿಯಾದಲ್ಲಿ ಪತಿ ಅನಂತಯ್ಯ ಜತೆ ನೆಲೆಸಿದ್ದಳು. ಕೆಲ ದಿನಗಳಿಂದ ದಿಢೀರ್​ ಕಾಣೆಯಾದ ಪತ್ನಿ ಬಗ್ಗೆ ಅನಂತಯ್ಯ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದ. ಕೊಲೆ ಎಂದು ಭಾವಿಸಿರುವ ಪೊಲೀಸರು ಕಾರಣ ಏನೆಂಬುದರ ಹುಡುಕಾಟದಲ್ಲಿ ಇದೀಗ ನಿರತರಾಗಿದ್ದಾರೆ.

    ಕಳೆದ ವರ್ಷ ಡಿ. 30ರಂದು ವೆಂಕಟಮ್ಮ ಮನೆ ಬಿಟ್ಟಿದ್ದರು. ಜ. 1ರ ಹೊಸ ವರ್ಷದಂದೇ ಅನಂತಯ್ಯ ದೂರು ದಾಖಲಿಸಿದ್ದ. ತನಿಖೆಯ ನಡುವೆಯೇ ವೆಂಕಟಮ್ಮ ಉಪಯೋಗಿಸುತ್ತಿದ್ದ ಫೋನ್​ ಬೆಗಂಪೇಟೆ ಏರಿಯಾದಲ್ಲಿ ಸ್ವಿಚ್​ಬೋರ್ಡ್​ನಲ್ಲಿ ಪತ್ತೆಯಾಗಿತ್ತು. ಇದೀಗ ಕೊಲೆಯ ಹಿಂದೆ ಅನೈತಿಕ ಸಂಬಂಧದ ಶಂಕೆ ಮೂಡಿದ್ದು, ಕೊನೆಯ ಕಾಲ್​ ಡೀಟೆಲ್ಸ್​ ಅನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

    ಇದನ್ನೂ ಓದಿರಿ: ಬಂಧಿತ ಯುವತಿಯರ ಮೊಬೈಲ್​, ಲ್ಯಾಪ್​ಟಾಪ್​ ತುಂಬಾ ಪೋರ್ನ್​ ವಿಡಿಯೋಗಳು: ಎಫ್​ಎಸ್​ಎಲ್​ ಸ್ಫೋಟಕ ವರದಿ!

    ಇದರೊಂದಿಗೆ ಆಕೆಗೆ ಪರಿಚಯವಿದ್ದವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಾಕಷ್ಟು ಸುಳಿವು ಸಿಕ್ಕಿದ್ದು ಆದಷ್ಟು ಬೇಗೆ ಆರೋಪಿ ಸಿಕ್ಕಿಬೀಳುವ ಸಾಧ್ಯತೆ ಇದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಅಗ್ನಿ ಅವಘಡಕ್ಕೆ 10 ನವಜಾತ ಶಿಶುಗಳ ಸಾವು: ಪ್ರಧಾನಿ ಕಂಬನಿ

    ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಅಗ್ನಿ ಅವಘಡಕ್ಕೆ 10 ನವಜಾತ ಶಿಶುಗಳ ಸಾವು: ಪ್ರಧಾನಿ ಕಂಬನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts