More

    ಮೊದಲ ದಿನದ ಆನೆಗಣತಿ ಯಶಸ್ವಿ

    ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜನೆಗೊಂಡಿದ್ದ ಮೊದಲ ದಿನದ ಗಣತಿಕಾರ್ಯ ಗುರುವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.
    ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಗಡಿಪ್ರದೇಶಗಳಲ್ಲಿ ಮಾನವ ಆನೆ ಸಂಘರ್ಷ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಮೂರು ರಾಜ್ಯಗಳ ಪ್ರತಿನಧಿಗಳನ್ನು ಒಳಗೊಂಡಂತೆ ಅಂತಾರಾಜ್ಯ ಸಮನ್ವಯ ಸಮಿತಿ ರಚಿಸಿ ಏಕಕಾಲದಲ್ಲಿ ಮೂರು ರಾಜ್ಯಗಳಲ್ಲಿ ಆನೆಗಣತಿ ಕಾರ್ ಆರಂಭಿಸಲಾಗಿದೆ.

    ಅದರಂತೆ ಮೊದಲ ದಿನ ಬ್ಲಾಕ್ ಸ್ಯಾಂಪ್ಲಿಂಗ್ ಚಟುವಟಿಕೆಗಳನ್ನು ನಡೆಸಲಾಯಿತು. ಬ್ಲಾಕ್ ಸ್ಯಾಂಪ್ಲಿಂಗ್ ಚಟುವಟಿಕೆಯಲ್ಲಿ ಪ್ರತಿ 5 ಚದರ ಕಿ.ಮೀ. ಅಳತೆಯ ಮಾದರಿ ಬ್ಲಾಕ್‌ಗಳನ್ನು ರಚಿಸಿಕೊಂಡು ಮೂರುಜನ ಸಿಬ್ಬಂದಿ ಒಳಗೊಂಡ ತಂಡ ಗಸ್ತಿನಲ್ಲಿ ಕನಿಷ್ಠ 15 ಕಿ.ಮೀ.ಕಾಲ್ನಡಿಗೆಯಲ್ಲಿ ನಡೆದು ನೇರ ವೀಕ್ಷಣೆಯಾಗುವ ಆನೆಗಳನ್ನು ಗುರುತಿಸಿ ತಮಗೆ ಒದಗಿಸಿರುವ ದಾಖಲೆ ಹಾಳೆಯಲಿ ದಾಖಲಿಸಿಕೊಳ್ಳಲಾಯಿತು. ಗುಂಪಿನಲ್ಲಿರುವ ಒಟ್ಟು ಆನೆಳ ಸಂಖ್ಯೆ, ಗಂಡಾನೆಗಳು, ಹೆಣ್ಣಾನೆಗಳ ಸಂಖ್ಯೆ, ಮಕನಾ ಆನೆಗಳು, ವಯಸ್ಸಿನ ಆನೆಗಳ ಕುರಿತು ಮಾಹಿತಿ, ವಯಸ್ಕ, ಉಪವಯಸ್ಕ, ತಾರುಣ್ಯ, ಮರಿ ಆನೆಗಳು ಇನ್ನಿತರ ಮಾಹಿತಿಗಳನ್ನು ಸಿಬ್ಬಂದಿ ದಾಖಲಿಸಿದರು. ಉದ್ಯಾನವನ ವ್ಯಾಪ್ತಿಯಲ್ಲಿ ಒಟ್ಟು 300 ಸಿಬ್ಬಂದಿ ಆನೆಗಣತಿ ಕಾರ್ಯದಲ್ಲಿ ನಿರತರಾಗಿದ್ದು, ಮೂರು ದಿನಗಳ ಚಟುವಟಿಕೆಗಳ ವರದಿಯನ್ನು ರಾಜ್ಯಮಟ್ಟದ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts