More

    ಪಾಪ, ಅನಿಲ್ ಅಂಬಾನಿ ಅದೃಷ್ಟವೇ ಚೆನ್ನಾಗಿಲ್ಲ, ಗಾಯದ ಮೇಲೆ ಬರೆ ಎಳೀತು ಕೇಂದ್ರ!

    ನವದೆಹಲಿ: ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ ದಿನೇ ದಿನೆ ಶ್ರೀಮಂತರಾಗುತ್ತ ಸಾಗುತ್ತಿದ್ದರೆ, ಅವರ ಸೋದರ ಅನಿಲ್ ಅಂಬಾನಿ ಆರ್ಥಿಕವಾಗಿ ದುರ್ಬಲರಾಗುತ್ತ ಹೋಗುತ್ತಿದ್ದಾರೆ. ಬ್ಯಾಂಕ್‌ಗಳ ಸಾಲಗಳನ್ನು ಮರುಪಾವತಿಸಲು ತಮ್ಮ ಆಭರಣಗಳು ಹಾಗೂ ಆಸ್ತಿಗಳನ್ನೆಲ್ಲ ಮಾರಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಇದೀಗ ಅನಿಲ್ ಮೇಲೆ ಮತ್ತೊಂದು ಆರ್ಥಿಕ ಹೊಡೆತ ಬಿದ್ದಿದೆ.

    ನಷ್ಟದ ಸುಳಿಯಲ್ಲಿ ಸಿಲುಕಿ ಬಳಲಿ ಬೆಂಡಾಗಿರುವ ಅನಿಲ್ ಅಂಬಾನಿಗೆ ಮೇಲಿಂದ ಮೇಲೆ ಆರ್ಥಿಕ ಹೊಡೆತಗಳು ಬೀಳುತ್ತಿದ್ದು, ಈಗ ರಿಲಯನ್ಸ್ ನೇವಲ್ ಆ್ಯಂಡ್ ಇಂಜಿನಿಯರಿಂಗ್ ಲಿಮಿಟೆಡ್ (ಆರ್‌ಎನ್‌ಇಎಲ್) ಜತೆ ಮಾಡಿಕೊಂಡಿದ್ದ 2,500 ಕೋಟಿ ರೂ.ಗಳ ಒಪ್ಪಂದವನ್ನು ರಕ್ಷಣಾ ಸಚಿವಾಲಯ ರದ್ದುಗೊಳಿಸಿದೆ. ಇದನ್ನೂ ಓದಿ: 1,200 ಕಿ.ಮೀ. ಚೇಸ್ ಮಾಡಿ ಕರ್ನಾಟಕದಲ್ಲಿ ಅರೆಸ್ಟ್​ ಮಾಡಿದ್ರು ಮುಂಬಯಿ ಪೊಲೀಸ್

    ಅನಿಲ್ ನೇತೃತ್ವದ ರಿಲಯನ್ಸ್ ಗ್ರೂಪ್‌ನವರು ಭಾರತೀಯ ನೌಕಾಪಡೆಗೆ ಐದು ಗಸ್ತು ಹಡಗುಗಳನ್ನು ತಯಾರಿಸಿಕೊಡಲು 2011ರಲ್ಲಿ ರಕ್ಷಣಾ ಸಚಿವಾಲಯದ ಜತೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಸಕಾಲಕ್ಕೆ ಹಡಗುಗಳನ್ನು ತಯಾರಿಸಿ ಪೂರೈಸುವುದು ರಿಲಯನ್ಸ್ ಕಂಪನಿಗೆ ಸಾಧ್ಯವಾಗಲಿಲ್ಲ. ಇದರಿಂದ ಬೇಸತ್ತ ರಕ್ಷಣಾ ಸಚಿವಾಲಯ ಒಪ್ಪಂದವನ್ನು ರದ್ದುಪಡಿಸಿದೆ.

    ಅನಿಲ್ ಅವರ ಕಂಪನಿ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಅಹಮದಾಬಾದ್ ಪೀಠದಲ್ಲಿ ಈಗಾಗಲೇ ದಿವಾಳಿ ಪ್ರಕ್ರಿಯೆ ನಡೆಯುತ್ತಿದೆ. ಕಂಪನಿಯನ್ನು ಖರೀದಿಸಲು ವಿಶ್ವದ ಸುಮಾರು 12 ಕಂಪನಿಗಳು ಮುಂದಾಗಿವೆ ಎಂದು ವರದಿಯಾಗಿದೆಯಾದರೂ ಅದಿನ್ನೂ ದೃಢಪಟ್ಟಿಲ್ಲ.

    ಭಾರತದ ಮುಸ್ಲಿಮರು ಅತ್ಯಂತ ಸಂತೃಪ್ತರು…ಸಂತುಷ್ಟರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts