More

    ಭಾರತದ ಮುಸ್ಲಿಮರು ಅತ್ಯಂತ ಸಂತೃಪ್ತರು…ಸಂತುಷ್ಟರು…

    ನವದೆಹಲಿ: ಜಗತ್ತಿನ ಉಳಿದೆಲ್ಲ ರಾಷ್ಟ್ರಗಳಿಗಿಂತ ಭಾರತದ ಮುಸ್ಲಿಮರು ಅತ್ಯಂತ ಸಂತೃಪ್ತರು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.
    ಹಾಗೇ ಭಾರತದ ಮೂಲತತ್ವಕ್ಕೆ ಧಕ್ಕೆ ಬಂದಾಗ ಎಲ್ಲ ಧರ್ಮದವರೂ ಒಗ್ಗಟ್ಟಾಗಿ ನಿಲ್ಲುತ್ತಾರೆ. ಆದರೆ ತಮ್ಮ ಸ್ವಹಿತಾಸಕ್ತಿಯೇ ಮುಖ್ಯವಾದವರು ಮಾತ್ರ ಈ ದೇಶದಲ್ಲಿ ಧರ್ಮಾಂಧತೆ, ಪ್ರತ್ಯೇಕತೆಯನ್ನು ಪಸರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ದೇಶದ ಸಂಸ್ಕೃತಿ, ತತ್ವದ ಮೇಲೆ ಹೊರಗಿನವರಿಂದ ದಾಳಿ ಆದ ಸಂದರ್ಭದಲ್ಲಿ ನಮ್ಮಲ್ಲಿನ ಎಲ್ಲ ಧರ್ಮದವರೂ ಒಗ್ಗಟ್ಟಾಗಿ ಅವರ ವಿರುದ್ಧ ಹೋರಾಡಿದ ಅನೇಕ ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆ ಎಂದು ಹಿಂದಿ ಮ್ಯಾಗ್​ಜಿನ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: VIDEO| ಆ ಏರಿಯಾ ಪೂರ್ತಿ ಆಕೆಯದ್ದೇ ದರ್ಬಾರ್! ಯಾರಾದ್ರು ಹೋದ್ರೆ ಏನ್​ ಮಾಡ್ತಾಳೆ ಗೊತ್ತಾ?

    ನಮ್ಮ ದೇಶದ ಮೇಲೆ ಆಳ್ವಿಕೆ ಮಾಡಿದ ವಿದೇಶಿ ಧರ್ಮವೊಂದು ಈಗಲೂ ಇಲ್ಲಿ ಉಳಿದಿದೆ ಎಂದರೆ ಆಶ್ಚರ್ಯವೇ ಸರಿ. ಇದೆಲ್ಲ ಭಾರತದಲ್ಲಿ ಮಾತ್ರ ಸಾಧ್ಯ. ಇಡೀ ಜಗತ್ತಿನ ಉಳಿದ ರಾಷ್ಟ್ರಗಳಲ್ಲಿ ಇರುವ ಮುಸ್ಲಿಮರಿಗಿಂತ ನಮ್ಮ ದೇಶದಲ್ಲಿರುವ ಮುಸ್ಲಿಮರು ಸಂತುಷ್ಟರು ಮತ್ತು ತೃಪ್ತರು ಎಂದು ಹೇಳಿದ್ದಾರೆ.

    ಭಾರತದಂತೆ ಪಾಕಿಸ್ತಾನ ಇಲ್ಲ. ಅಲ್ಲಿ ಬೇರೆ ಧರ್ಮದ ಅನುಯಾಯಿಗಳಿಗೆ ಯಾವುದೇ ಹಕ್ಕು ನೀಡಿಲಿಲ್ಲ. ಆದರೆ ನಮ್ಮ ಸಂವಿಧಾನ ವಿಭಿನ್ನ. ಹಿಂದುಗಳು ಮಾತ್ರ ಭಾರತದಲ್ಲಿರಬೇಕು ಎಂದು ಅದರಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ಇದು ಹಿಂದು ರಾಷ್ಟ್ರ…ಹಿಂದುಗಳ ತತ್ವ ಒಪ್ಪಿಕೊಂಡರೆ ಮಾತ್ರ ಬದುಕಬಹುದು ಎಂಬ ನಿಯಮವನ್ನು ತಂದಿಲ್ಲ. ಎಲ್ಲರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದೆ. ಇದು ನಮ್ಮ ದೇಶದ ಸ್ವಭಾವ. ಈ ಅಂತರ್ಗತ ಸ್ವಭಾವವನ್ನೇ ಹಿಂದು ಎಂದು ಕರೆಯಲಾಗುತ್ತದೆ ಎಂದು ಹೇಳಿದರು. (ಏಜೆನ್ಸೀಸ್​)

    ಜನರಿಂದ ಐಡಿಯಾ ಕೇಳಿದ ಪ್ರಧಾನಿ ನರೇಂದ್ರ ಮೋದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts