More

    3 ವಾರಗಳಲ್ಲಿ 4446 ಕೋಟಿ ರೂ. ಪಾವತಿಸಲು ಕೋರ್ಟ್ ಆದೇಶ: ಯಾರಿಗೆ, ಏಕೆ?

    ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿಯವರಿಗೆ ಅವರ ಸಹೋದರ ಮುಕೇಶ್ ಅಂಬಾನಿ ಆಗಾಗ ಆರ್ಥಿಕ ಸಹಾಯ ಮಾಡುತ್ತಿದ್ದಾರಾದರೂ ಅನಿಲ್ ಅವರ ಸಮಸ್ಯೆಗಳು ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ.

    ಚೀನಾದ ಮೂರು ಬ್ಯಾಂಕ್‌ಗಳಿಂದ ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ ಪಡೆದ ಸಾಲಕ್ಕೆ ಅನಿಲ್ ವೈಯಕ್ತಿಕ ಗ್ಯಾರಂಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇನ್ನು ಮೂರು ವಾರದೊಳಗೆ 71.7 ಕೋಟಿ ಡಾಲರ್ (4,446 ಕೋಟಿ ರೂ.) ಪಾವತಿಸುವಂತೆ ಅನಿಲ್‌ಗೆ ಲಂಡನ್ ಹೈಕೋರ್ಟ್ ಆದೇಶಿಸಿದೆ.

    ಇದನ್ನೂ ಓದಿರಿ ಡಿಕೆಶಿಗೆ ಮಾತ್ರ ಹೃದಯ ಇದೆಯೇ? ಯಡಿಯೂರಪ್ಪನವರಿಗೆ ಇಲ್ಲವೇ?

    ರಿಲಯನ್ಸ್ ಕಮ್ಯೂನಿಕೇಷನ್ಸ್ 2012ರಲ್ಲಿ 92.52 ಕೋಟಿ ಡಾಲರ್ (₹65 ಸಾವಿರ ಕೋಟಿ) ಸಾಲ ಪಡೆದಿತ್ತು. ಇದಕ್ಕೆ ಅನಿಲ್ ಅಂಬಾನಿ ವೈಯಕ್ತಿಕ ಗ್ಯಾರಂಟಿ ನೀಡಿದ್ದರು. ಆದರೆ 2017ರಿಂದ ಸಂಸ್ಥೆ ಸಾಲ ಪಾವತಿಸಿಲ್ಲವೆಂದು ಇಂಡಸ್ಟ್ರೀಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ ಆ್ ಚೀನಾದ (ಐಸಿಬಿಸಿ) ಮುಂಬೈ ಶಾಖೆ, ಚೀನಾ ಡೆವಲಪ್‌ಮೆಂಟ್ ಬ್ಯಾಂಕ್, ಎಕ್ಸ್‌ಪೋರ್ಟ್-ಇಂಪೋರ್ಟ್ ಬ್ಯಾಂಕ್ ಆಫ್​ ಚೀನಾ ಈ ಮೂರು ಬ್ಯಾಂಕ್‌ಗಳು ಬ್ರಿಟನ್ ನ್ಯಾಯಾಲಯದಲ್ಲಿ ದಾವೆ ಹೂಡಿವೆ.

    ಲಂಡನ್ ಹೈಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಅನಿಲ್ ಅಂಬಾನಿ ವಕ್ತಾರರು, ‘‘ಈ ಕುರಿತು ಕಾನೂನು ಸಲಹೆ ಪಡೆಯುತ್ತಿದ್ದೇವೆ’’ ಎಂದಷ್ಟೇ ತಿಳಿಸಿದ್ದಾರೆ. ಸದ್ಯ ಕೋರ್ಟ್ ನೀಡಿರುವ ಆದೇಶದನ್ವಯ ಚೀನಾ ಬ್ಯಾಂಕ್‌ಗಳು 21 ದಿನಗಳ ಬಳಿಕ ಅನಿಲ್ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದಾಗಿದೆ. ಅನಿಲ್ ಅವರ ವೈಯಕ್ತಿಕ ಆಸ್ತಿಯ ಮುಟ್ಟುಗೋಲಿಗೂ ಈ ಬ್ಯಾಂಕ್‌ಗಳು ಮುಂದಾಗಬಹುದು.

    ಇದನ್ನೂ ಓದಿರಿ ಹೇಮಾವತಿಯನ್ನು ಬಿಜೆಪಿಗೆ ಬರೆದುಕೊಟ್ಟಿದ್ದೀವಾ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts