More

    ಭಾರತೀಯ ಜನತಾ ಪಕ್ಷದಿಂದ ಆಚರಣೆ ಸಮಾನತೆ, ಏಕತೆ ಸಾರಿದ ಸಂವಿಧಾನ

    ಬಾಗಲಕೋಟೆ: ಸಮಾನತೆ ಮತ್ತು ಏಕತೆಯನ್ನು ಜಗತ್ತಿದೆ ಸಾರಿದ ಸಂವಿಧಾನ ಭಾರತದ್ದು ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

    ನಗರದ ಶಿವಾನಂದ ಜಿನ್‌ನಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡ ಸಂವಿಧಾನ ದಿನಾಚರಣೆ, ಒನಕೆ ಓಬವ್ವ ಜಯಂತಿ ಮತ್ತು ಬುಡಕಟ್ಟು ಜನಾಂಗದ ಹೋರಾಟಗಾರ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    1949 ನವೆಂಬರ್ 26 ರಂದು ಭಾರತೀಯ ಸಂವಿಧಾನವನ್ನು ಸಂವಿಧಾನ ಸಭೆ ಅಂಗೀಕರಿಸಿತು. ಭಾರತ ಸಂವಿಧಾನ 1956ರ ಜನವರಿ 26 ರಂದು ಜಾರಿಗೆ ಬಂದರೂ 2015ರಲ್ಲಿ ಸಮಾನತೆಯ ಪ್ರತಿಮೆ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ನವೆಂಬರ್ 26 ಸಂವಿಧಾನ ದಿನ ಎಂದು ಘೋಷಿಸಿದರು.

    ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಡಾ.ಎಂ.ಎಸ್.ದಡ್ಡೇನವರ, ನಗರ ಮಂಡಲದ ಅಧ್ಯಕ್ಷ ಸದಾನಂದ ನಾರಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ರಾಜ್ಯ ಎಸ್‌ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಶಿವಾನಂದ ಟವಳಿ, ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾರಾಯಣಿ, ಮುಖಂಡರಾದ ಮುತ್ತಣ್ಣ ಬೆಣ್ಣೂರ, ದ್ಯಾವಪ್ಪ ರಾಕುಂಪಿ, ಬಸವರಾಜ ಅವರಾದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts