More

    11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

    ಲಂಡನ್: ಈಗಿನ್ನೂ ಆಟವಾಡಿಕೊಂಡಿದ್ದ ಬಾಲಕಿ ಮಗುವಿಗೆ ಜನ್ಮ ನೀಡಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಕೇವಲ 11 ವರ್ಷಕ್ಕೇ ಬಾಲಕಿ ತಾಯಿಯಾಗಿದ್ದು, ಇದು ಅವರ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ.


    ಬ್ರಿಟನ್​ನ 11 ವರ್ಷದ ಬಾಲಕಿಯೊಬ್ಬಳು ಕಳೆದ ತಿಂಗಳು ಮಗುವಿಗೆ ಜನ್ಮನೀಡಿದ್ದಾಳೆ. ಆಕೆಗೆ ಹೆರಿಗೆ ಆಗುವವರೆಗೂ ಆಕೆಯ ಮನೆಯವರಿಗೆ ಅವಳು ಗರ್ಭಿಣಿ ಎನ್ನುವ ವಿಚಾರವೇ ಗೊತ್ತಿರಲಿಲ್ಲವಂತೆ. ಏಳೂವರೆ ತಿಂಗಳಿಗೆ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆ ಮಗುವಿನ ತಂದೆಯ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲದಿರುವುದಾಗಿ ಹೇಳಲಾಗಿದೆ.


    ಬ್ರಿಟನ್​ನಲ್ಲಿ ಈ ರೀತಿಯ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಅನೇಕರು ಈ ರೀತಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ. ಆದರೆ 11 ವರ್ಷಕ್ಕೆ ತಾಯಿಯಾಗಿರುವ ಘಟನೆ ಇದೇ ಮೊದಲು. ಆಕೆ 10 ವರ್ಷಕ್ಕೇ ಗರ್ಭಿಣಿಯಾಗಿದ್ದಾಳೆ. ಸಾಮಾನ್ಯವಾಗಿ ಬಾಲಕಿಯರು 11ನೇ ವಯಸ್ಸಿಗೆ ಪ್ರೌಢಾವಸ್ಥೆಗೆ ಬರುತ್ತಾರೆ. ಈಗಿನ ವರ್ತಮಾನದಲ್ಲಿ 8ರಿಂದ 14 ವರ್ಷದಲ್ಲಿ ಅವರು ಪ್ರೌಢಾವಸ್ಥೆಗೆ ಬರುತ್ತಿದ್ದಾರೆ. ಹೆಣ್ಣು ಮಕ್ಕಳು ಹೆಚ್ಚು ದಪ್ಪವಾಗಿ ಬೆಳೆಯುತ್ತಿರುವುದರಿಂದ ಬಹು ಬೇಗ ಪ್ರೌಢಾವಸ್ಥೆಗೆ ಬರುತ್ತಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್)

    ಎಕ್ಸ್​ ಬಾಯ್​ಫ್ರೆಂಡ್ ಮದುವೆಯಾಗುವ ಹುಡುಗಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿದ ಮಾಜಿ ಲವರ್!

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts