More

    ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ; ನ್ಯೂಯಾರ್ಕ್​ ರಾಜಧಾನಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ

    ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಧಾರ್ಮಿಕ ವಿಧಿವಿಧಾನಗಳು ಅರಂಭಗೊಂಡಿವೆ. ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಂಭ್ರಮ ಮನೆ ಮಾಡಿದ್ದು, ಹಬ್ಬದ ವಾತಾವರಣ ಮನೆ ಮಾಡಿದೆ.

    ಇದೀಗ ಅಮೆರಿಕದ ನ್ಯೂಯಾರ್ಕ್ ರಾಜಧಾನಿ ಆಲ್ಬನಿಯದಲ್ಲಿ ನೆಲೆಸಿರುವ ಭಾರತೀಯರು ಅಯೋಧ್ಯೆಯಲ್ಲಿ ನಡೆಯಲಿರುವ ಐತಿಹಾಸಿಕ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ವಿಜೃಂಭಣೆಯಿಂದ ಎರಡು ದಿವಸಗಳ ಕಾಲ ಆಚರಿಸಲಿದ್ದಾರೆ.

    ಆಲ್ಬನಿ ಹಿಂದೂ ದೇವಾಲಯದಲ್ಲಿ ಜನವರಿ 20 ಹಾಗೂ 21ರಂದು ಕಾರ್ಯಕಮ ನಡೆಯಲಿದ್ದು, ರಾಮಾಯಣ ವಾಚನ, ಭಜನೆಗಳು, ನೃತ್ಯ, ಪಟ್ಟಾಭಿಷೇಕ ಮತ್ತು ಪಟಾಕಿಯನ್ನು ಸಿಡಿಸುವ ಮೂಲಕ ಕಾರ್ಯಕ್ರಮದ ಸಮಾರೋಪ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts