More

    ಜನರಲ್ಲಿ ಕಾನೂನು ಅರಿವು ಮೂಡಿಸುವುದೇ ಉದ್ದೇಶ

    ರಬಕವಿ/ಬನಹಟ್ಟಿ: ಗ್ರಾಮೀಣ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಪ್ರತಿ ತಿಂಗಳು ಮೂರು ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ಹಮ್ಮಿಕೊಳ್ಳುತ್ತಿದ್ದು, ಶನಿವಾರ ಯಲ್ಲಟ್ಟಿ ಹಾಗೂ ಯರಗಟ್ಟಿಯಲ್ಲಿ ವಾಸ್ತವ್ಯ ಮಾಡಿದರು.

    ಪಿಎಸ್‌ಐ ಶಾಂತಾ ಹಳ್ಳಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕೊಲೆ, ಮನೆಗಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಸಣ್ಣ ಪುಟ್ಟ ಆಸ್ತಿ ವ್ಯಾಜ್ಯಗಳಿಂದ ಹಲವರು ತೊಂದರೆಯಲ್ಲಿದ್ದಾರೆ. ಪೊಲೀಸರೆಂದರೆ ಹಲವರಿಗೆ ಭಯವಿರುತ್ತದೆ. ಹೀಗಾಗಿ ನ್ಯಾಯ ಕೇಳಲು ಪೊಲೀಸರ ಬಳಿ ಬರುತ್ತಿಲ್ಲ. ಜನರಲ್ಲಿರುವ ಪೊಲೀಸ್ ಭಯ ಹೋಗಲಾಡಿಸಿ ಕಾನೂನು ಅರಿವು ಮೂಡಿಸುವುದೇ ಗ್ರಾಮ ವಾಸ್ತವ್ಯದ ಉದ್ದೇಶ ಎಂದು ತಿಳಿಸಿದರು.

    ಗ್ರಾಮ ವಾಸ್ತವ್ಯದಲ್ಲೇನು?: ಗ್ರಾಮದ ಸರ್ಕಾರಿ ಹಾಸ್ಟೇಲ್, ಶಾಲಾ-ಕಾಲೇಜು ಅಥವಾ ದೇವಾಲಯ ಆವರಣದಲ್ಲಿ ಪೊಲೀಸ್ ತಂಡ ವಾಸ್ತವ್ಯ ಹೂಡಲಿದೆ. ಗ್ರಾಮದಲ್ಲಿನ ಮನೆಗಳಿಗೆ ತೆರಳಿ ಕಾನೂನಿನ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸುತ್ತಾರೆ. ಗ್ರಾಮದಲ್ಲಿನ ಜನರ ಜತೆ ಸೇರಿ ಸಭೆ ನಡೆಸಿ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕೋರುತ್ತಾರೆ. ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದರು.
    ……………………….
    ಜಿಲ್ಲಾ ವರಿಷ್ಠಾಧಿಕಾರಿಗಳ ಆದೇಶದಂತೆ ಪ್ರತಿ ತಿಂಗಳು ಮೂರು ಗ್ರಾಮಗಳಲ್ಲಿ ವಾಸ್ತವ್ಯ ಕಾರ್ಯ ನಡೆಸುತ್ತಿದ್ದೇವೆ. ಇದರಿಂದ ಜನತೆಯ ಸಮಸ್ಯೆಗೆ ಸ್ಪಂದನೆಯಾಗುತ್ತಿದೆ.
    ಶಾಂತಾ ಹಳ್ಳಿ, ಪಿಎಸ್‌ಐ, ಬನಹಟ್ಟಿ.
    ……………………………………..
    ಪೊಲೀಸ್ ಗ್ರಾಮವಾಸ್ತವ್ಯ ಇದೇ ಮೊದಲು. ಗ್ರಾಮದಲ್ಲಿ ಇದೀಗ ಪೊಲೀಸರ ಭಯ ದೂರವಾಗಿದೆ. ಅಪರಾಧ ಹಾಗೂ ಅಕ್ರಮ ಚಟುವಟಿಕೆಯೂ ಗ್ರಾಮಸ್ಥರ ಪರಸ್ಪರ ಸಂಪರ್ಕದಿಂದ ಯಶಸ್ವಿಯಾಗಲಿದೆ.
    ಮಹಾದೇವ ಮೋಪಗಾರ, ಗ್ರಾಪಂ ಅಧ್ಯಕ್ಷ ಯಲ್ಲಟ್ಟಿ.
    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts