More

    ದೇವಿಗೆ ಉಡಿ ತುಂಬುವ ಕಾರ್ಯ

    ಗುಳೇದಗುಡ್ಡ: ಪಟ್ಟಣದ ಗೊಂಧಳಿ ಸಮಾಜದ ಆಶ್ರಯದಲ್ಲಿ ಆಷಾಢ ಮಾಸದ ನಿಮಿತ್ತ ಅಂಬಾಭವಾನಿ ದೇವಿಗೆ ಉಡಿತುಂಬುವ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

    ಪಟ್ಟಣದ ಗ್ರಾಮದೇವತೆ ಮೂಕೇಶ್ವರಿ, ದ್ಯಾಮವ್ವ, ದುರ್ಗಮ್ಮ, ಬನಶಂಕರಿ, ಅಂಬರಗೊಳ ದುರ್ಗಮ್ಮ ದೇವಸ್ಥಾನಗಳಿಗೆ ಸಮಾಜದ ಮಹಿಳೆಯರು ಬೆಳಗ್ಗೆ ಹೋಗಿ ಉಡಿ ತುಂಬಿ ನೈವೇದ್ಯ ಅರ್ಪಿಸಿದರು. ನಂತರ ಬಾಗವಾನ ಪೇಟೆಯ ಅಂಬಾಭವಾನಿ ದೇವಸ್ಥಾನಕ್ಕೆ ಬಂದು ದೇವಿಗೆ ಅಭಿಷೇಕ, ಉಡಿ ತುಂಬಿ ಪೂಜೆ ನೆರವೇರಿಸಿದರು.

    ಗುಳೇದಗುಡ್ಡ ವಾಡಿಯ ಗಜೇಂದ್ರಗಡ, ಅಮೀನಗಡ, ಬಾಗಲಕೋಟೆ, ನರಗುಂದ, ಕೊಪ್ಪಳ ಇತರ ಕಡೆಗಳಿಂದ ಸಮಾಜದ ಹಿರಿಯರು ಬಂದು ದೇವಿಗೆ ಉಡಿ ತುಂಬಿದರು. ಭಕ್ತರಿಗೆ ಅನ್ನ ಪ್ರಸಾದ ನಡೆಯಿತು.

    ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಜನ ವಿರೋಧಿ ನೀತಿ

    ಸಮಾಜದ ಮುಖ್ಯಸ್ಥರಾದ ನಾರಾಯಣ ಶಿಂಧೆ, ಹಿರಿಯರಾದ ಶಾಂತವೀರ ಶಿಂಧೆ, ಮಾತಾರೆಪ್ಪ ಪಾಚಂಗಿ, ಡಾ.ಸಿ.ಎಂ. ಜೋಶಿ, ಗಂಗಾರಾಮ ಸುಗತೆ, ಅರವಿಂದ ಗೊಂಧಳೆ, ಸುಭಾಸ ಶಿಂಧೆ, ಅರುಣ ಶಿಂಧೆ, ಕೆಂಚಪ್ಪ ಇಂಗಳೆ, ಲಕ್ಷ್ಮಣ ಚವ್ಹಾಣ, ಸುರೇಶ ಭಾಟ್, ಜಮುನಾ ಸಿಂಗದ, ಪ್ರಕಾಶ ಜೋಶಿ, ಆದಿಶಕ್ತಿ ದುರ್ಗಾದೇವಿ ಗೊಂಧಳಿ ಸಮಾಜ ಸಂಘದ ಅಧ್ಯಕ್ಷ ವಿನಾಯಕ ಶಿಂಧೆ, ರವಿ ಪಾಚಂಗಿ, ಅಭಿಷೇಕ ಗೊಂಧಳೆ, ಆನಂದ ಪಾಚಂಗಿ, ಗಿರೀಶ ಪಾಚಂಗಿ, ಬಸವರಾಜ ಚವ್ಹಾಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts