More

    ಸಂಗೀತಧಾಮ 20ನೇ ಸಂಭ್ರಮ; ಕಾವ್ಯಕೌಸ್ತುಭ ಪ್ರಶಸ್ತಿ ಪ್ರದಾನ

    ಬೆಂಗಳೂರು: ಮೃತ್ಯುಂಜಯ ದೊಡ್ಡವಾಡರ ನೇತೃತ್ವದ ಸಂಗೀತಧಾಮ ಸಂಸ್ಥೆಯ 20ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಸಡಗರ, ಸಂಭ್ರಮದಿಂದ ನಡೆಯಿತು. ಬಸವನಗುಡಿ ನ್ಯಾಷನಲ್ ಕಾಲೇಜಿನ ಗಾಂಧಿ-ನೆಹರು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಗೀತೆ ರಚನೆಕಾರ ಪ್ರೊ.ದೊಡ್ಡರಂಗೇಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

    ಸಮಾರಂಭದ ಮೊದಲಿಗೆ ಮೃತ್ಯುಂಜಯ ದೊಡ್ಡವಾಡರ ಮಾರ್ಗದರ್ಶನದಲ್ಲಿ ಪುಟ್ಟಮಕ್ಕಳು ಗಣಪತಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸರಸ್ವತಿ ಸ್ತುತಿಯೊಂದಿಗೆ ಮುಂದುವರೆದ ಕಾರ್ಯಕ್ರಮದಲ್ಲಿ ಪ್ರಸನ್ನಮೂರ್ತಿಯವರ ಮಾರ್ಗದರ್ಶನದಲ್ಲಿ ಪುರಂದರದಾಸರ ಪಿಳ್ಳಾರಿಗೀತೆ ಹಾಗೂ ಬ್ರಹ್ಮಮುರಾರಿ ಗೀತೆಗೆ ವಿದ್ಯಾರ್ಥಿಗಳು ನುಡಿಸಿದ ವೈಲಿನ್ ವಾದನ ಸಭಿಕರ ಮೆಚ್ಚುಗೆ ಗಳಿಸಿತು. ಗೌತಮ್ ನೇತೃತ್ವದಲ್ಲಿ ಅದ್ವಿತೀಯ ತಬಲಾ ಪ್ರದರ್ಶನ, ಕಿಬೋರ್ಡ್ ವಾದ್ಯ ವೈಭವದಲ್ಲಿ ರಘುಪತಿ ರಾಘವ ರಾಜಾರಾಮ್ ಗೀತೆಯು ಪ್ರೇಕ್ಷಕರ ಗಮನ ಸೆಳೆಯಿತು.

    ಮೃತ್ಯಂಜಯ ಅವರ ರಾಗ ಸಂಯೋಜನೆಯಲ್ಲಿ ಪ್ರಸಿದ್ಧವಾಗಿರುವ ಆನಂದಕಂದರ ಗಿರಿಜಾತನುಜಾ ಗೀತೆಗೆ ಮಕ್ಕಳ ನೃತ್ಯವೈಭವ ಹಾಗೂ ಕರ್ನಾಟಕ ಸಂಗೀತ ವಿಭಾಗದ ವಿದ್ಯಾರ್ಥಿಗಳಿಂದ ವಿಷ್ಣುಸಹಸ್ರನಾಮ ಪ್ರಸ್ತುತಿ ಪಡಿಸಲಾಯಿತು. ಹಲವಾರು ವಿದ್ಯಾರ್ಥಿಗಳು ವಿಭಿನ್ನ ಪ್ರಕಾರದ ವಿವಿಧ ಸಂಗೀತ ಪ್ರದರ್ಶನವನ್ನು ಮಾಡಿದರು. ಸಂಗೀತಧಾಮದ ಶೀರ್ಷಿಕೆ ಗೀತೆಯು ಇಡೀ ಕಾರ್ಯಕ್ರಮದಲ್ಲಿ ಆಕರ್ಷಕವಾಗಿ ಮೂಡಿಬಂತು.

    ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ರೈತಮುಖಂಡ ಎ.ಬಾಲಕೃಷ್ಣ, ಯಶೋಮತಿ ಬೆಳಗೆರೆ ಮತ್ತಿತರರು ಪಾಲ್ಗೊಂಡಿದ್ದರು. 20 ವರ್ಷದ ಸಂಸ್ಥೆಯ ಹಿನ್ನೋಟ ಕುರಿತು ಮೃತ್ಯುಂಜಯ ದೊಡ್ಡವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರೊ.ದೊಡ್ಡರಂಗೇಗೌಡರು ಸಂಸ್ಥೆಯ ಸೇವೆ ಮತ್ತು ಸಾಧನೆಯನ್ನು ಶ್ಲಾಸಿದರು. ಕಾರ್ಯಕ್ರಮದಲ್ಲಿ ಸಿದ್ಧರಾಜು ಪೂಜಾರಿಯವರಿಗೆ ಕಾವ್ಯಕೌಸ್ತುಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts