More

    ಅಧ್ಯಕ್ಷಾವಧಿಯಲ್ಲಿ ಡೊನಾಲ್ಡ್​ ಟ್ರಂಪ್ ಹೇಳಿದ ಸುಳ್ಳುಗಳು ಎಷ್ಟೆಂದು ತಿಳಿದ್ರೆ ಹುಬ್ಬೇರಿಸ್ತೀರಾ!

    ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಅಧ್ಯಕ್ಷಾವಧಿಯಲ್ಲಿ 30,573 ಸುಳ್ಳು ಹೇಳಿದ್ದರಂತೆ! ಈ ಪೈಕಿ ದಿನಕ್ಕೆ 39 ಸುಳ್ಳುಗಳನ್ನು ಅವರು ಕೊನೆಯ ವರ್ಷದಲ್ಲೇ ಹೇಳಿದ್ದು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

    ಟ್ರಂಪ್ ಅವರ ದಬ್ಬಾಳಿಕೆ ನಡವಳಿಕೆ ಅಧಿಕಾರ ಚುಕ್ಕಾಣಿ ಹಿಡಿದ ಮೊದಲ ದಿನದಂದೆ ಶುರುವಾಗಿದೆ. ಟೈಮ್ ಮ್ಯಾಗಜಿನ್ ರಕ್ಷಾ ಪುಟದಲ್ಲಿ ಕಾಣಿಸಿಕೊಳ್ಳುವುದರಿಂದ ಶುರುವಾದ ಮಾಯಾ ಲೋಕದ ಕಥೆ ಅವರು ಶ್ವೇತಭವನದಲ್ಲಿ ಇದ್ದ ಕಡೆಯ ದಿನದವರೆಗೂ ಮುಂದುವರಿಯಿತು ಎಂದು ವರದಿ ವಿಶ್ಲೇಷಿಸಿದೆ.

    ಇದನ್ನೂ ಓದಿರಿ: ನೂರು ಮೀಟರ್​ ಅಂತರದಲ್ಲಿ ಎರಡು ಬೈಕ್​ಗೆ ಗುದ್ದಿದ ಕಾರು: ತಾಯಿ-ಮಗ ಸೇರಿ ನಾಲ್ವರು ಸಾವು!

    ಮೊದಲ ವರ್ಷ ಟ್ರಂಪ್ ದಿನಕ್ಕೆ ಆರು ಸುಳ್ಳುಗಳನ್ನು ಹೇಳಿದ್ದರು. ಎರಡನೇ ವರ್ಷ ಈ ಸಂಖ್ಯೆ 16, ಮೂರನೇ ವರ್ಷ 22 ಮತ್ತು ಕೊನೆಯ ವರ್ಷ ದಿನಕ್ಕೆ 39 ಏರಿದೆ. 10,000 ಸುಳ್ಳು ಹೇಳೋದಕ್ಕೆ ಅವರು 27 ತಿಂಗಳು ತಗೊಂಡಿದ್ದರು. ನಂತರದ 14 ತಿಂಗಳಲ್ಲಿ 20,000 ಸುಳ್ಳುಗಳ ಗಡಿ ದಾಟಿದರು. ತದನಂತರದ ಐದೇ ತಿಂಗಳಲ್ಲಿ 30,000 ಸುಳ್ಳುಗಳ ಗಡಿದಾಟಿದ್ದಾರೆ ಎಂದು ವರದಿ ಲೇವಡಿ ಮಾಡಿದೆ.

    ಕಳೆದ 10 ವರ್ಷಕ್ಕೂ ಹೆಚ್ಚು ಸಮಯದಿಂದ ಪತ್ರಿಕೆ ಫ್ಯಾಕ್ಟ್ ಚೆಕ್ಕರ್ ಎಂಬ ಉಪಕ್ರಮದ ಮೂಲಕ ಉಭಯ ಪಕ್ಷಗಳ ರಾಜಕಾರಣಿಗಳ ಹೇಳಿಕೆಗಳನ್ನು ವಿಶ್ಲೇಷಿಸಿ ಸತ್ಯಾಸತ್ಯತೆಯನ್ನು ತೆರೆದಿಡುತ್ತಿದೆ. ಆದರೆ, ಟ್ರಂಪ್ ಅವರ ವಾಸ್ತವಾಂಶ ತಿರುಚಿದ ಹೇಳಿಕೆಗಳು ಹೊಸ ಸವಾಲನ್ನೇ ಸೃಷ್ಟಿಸಿದವು. ಹೀಗಾಗಿ ಅವರ ಹೇಳಿಕೆಗಳ ಸತ್ಯಾಂಶವನ್ನು ಬಹಿರಂಗಪಡಿಸುವ ವಾರದ ಅಂಕಣ ‘ವಾಟ್ ಟ್ರಂಪ್ ಗಾಟ್ ರಾಂಗ್ ಆನ್ ಟ್ವಿಟರ್ ದಿಸ್ ವೀಕ್’ ಶುರುವಾಯಿತು. ಓದುಗರ ಬೇಡಿಕೆ ಹೆಚ್ಚಾದ್ದರಿಂದ ನಾಲ್ಕೂ ವರ್ಷಗಳ ಟ್ರಂಪ್ ಡೇಟಾ ಬೇಸ್ ಹಾಗೆಯೇ ಉಳಿಸಲಾಯಿತು ಎಂದು ಪತ್ರಿಕೆ ತಿಳಿಸಿದೆ. (ಏಜೆನ್ಸೀಸ್​)

    ಅಲ್ಲಿ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಲ್ಲ: ವಿವಾದಕ್ಕೆ ಎಡೆಮಾಡಿಕೊಟ್ಟ ಬಾಂಬೆ ಹೈಕೋರ್ಟ್​ ತೀರ್ಪು!

    ತಿನ್ನುತ್ತಲೇ ಗಂಟೆಗೆ 1700 ರೂ. ಸಂಪಾದಿಸಿ: ಕೆಲಸಕ್ಕೆ ಅರ್ಜಿ ಸಲ್ಲಿಸಲು ಫೆ. 15 ಕೊನೆಯ ದಿನಾಂಕ!

    VIDEO| ಶ್ರುತಿ ಹಾಸನ್​ ಜತೆ ಲಿಪ್‌ಲಾಕ್ ದೃಶ್ಯದಲ್ಲಿ ಗಾಯಕ ಸಂಜಿತ್ ಹೆಗ್ಡೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts