More

    ಈ ಒಂದು ವಿಚಾರದಲ್ಲಿ ವಿರಾಟ್​ ಮಗುವಿನಂತೆ ಗಡಗಡ ನಡುಗುತ್ತಾರಂತೆ! ಮೊದಲ ಬಾರಿಗೆ ಬಹಿರಂಗಪಡಿಸಿದ ಕೊಹ್ಲಿ

    ನವದೆಹಲಿ: ಕ್ರಿಕೆಟ್​ ಲೋಕದ ಅಧಿಪತಿ ವಿರಾಟ್ ಕೊಹ್ಲಿಗೆ ಹಲವು ಹೆಸರುಗಳಿವೆ. ರನ್ ಮೆಶಿನ್, ದಾಖಲೆಗಳ ಸರದಾರ ಮತ್ತು ಕಿಂಗ್ ಕೊಹ್ಲಿ ಅಂತೆಲ್ಲಾ ಹೆಸರುಗಳನ್ನು ನೀಡಿದ್ದಾರೆ. ವಾಸ್ತವವಾಗಿ ಕೊಹ್ಲಿ ಮೈದಾನದಲ್ಲಿದ್ದಾರೆ ಅಂದರೆ ರನ್‌ಗಳ ಮಹಾಪೂರವೇ ಹರಿದು ಬರುತ್ತದೆ. ಅದರಲ್ಲೂ ಕೊಹ್ಲಿ ಉತ್ತಮ ಫಾರ್ಮ್​ನಲ್ಲಿದ್ದರೆ, ಆ ಪಂದ್ಯ ವಿಶೇಷ ಗಮನ ಸೆಳೆಯುವುದಂತೂ ಖಚಿತ. ವಿಶ್ವ ದರ್ಜೆಯ ಬೌಲರ್‌ಗಳು ಕೂಡ ಕೊಹ್ಲಿಗೆ ಬೌಲ್ ಮಾಡುವಾಗ ಕೊಂಚ ಹೆದರುತ್ತಾರೆ. ಬ್ಯಾಟಿಂಗ್ ಇರಲಿ, ಫೀಲ್ಡಿಂಗ್ ಇರಲಿ, ವಿರಾಟ್ ಕೊಹ್ಲಿ ವೀರೋಚಿತವಾಗಿ ಹೋರಾಡುತ್ತಾರೆ. ಆದರೆ, ಕೊಹ್ಲಿಗೆ ಈ ಒಂದು ವಿಚಾರದಲ್ಲಿ ತುಂಬಾ ಭಯವಿದೆಯಂತೆ! ಅಷ್ಟಕ್ಕೂ ಕೊಹ್ಲಿಗೆ ಇರುವ ಆ ಭಯ ಯಾವುದು? ಈ ಸಂಗತಿ ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ. ಇದೀಗ ಈ ಸಂಗತಿಯನ್ನು ವಿರಾಟ್ ಕೊಹ್ಲಿ ಇತ್ತೀಚೆಗೆ ನಡೆದ ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.

    ಪ್ರಸಕ್ತ ಐಪಿಎಲ್​ನಲ್ಲಿ ಆರ್‌ಸಿಬಿ ಕಳಪೆ ಪ್ರದರ್ಶನದ ಹೊರತಾಗಿಯೂ, ವಿರಾಟ್ ಕೊಹ್ಲಿ ತಮ್ಮ ಜವಾಬ್ದಾರಿಯುತ ಆಟವನ್ನು ಆಡುತ್ತಿದ್ದಾರೆ. ಆದರೆ, ಯಾರೊಬ್ಬರು ಕೊಹ್ಲಿಗೆ ಸಾಥ್​ ನೀಡುತ್ತಿಲ್ಲ. ಕೊಹ್ಲಿ ಎಷ್ಟೇ ಚೆನ್ನಾಗಿ ಆಡಿದರೂ ಟೀಕೆ ಮಾಡುವವರಿದ್ದಾರೆ. ಆದರೆ, ಅವರನ್ನು ಕಡೆಗಣಿಸಿ ಕೊಹ್ಲಿ ತಮ್ಮ ಆಟದಲ್ಲಿ ದಾಖಲೆ ಮಾಡುತ್ತಾ ಮುನ್ನುಗ್ಗುತ್ತಿದ್ದಾರೆ. ಐಪಿಎಲ್ 2024ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​ಮನ್​ಗಳಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್​ ಕೊಹ್ಲಿ​ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿಗೆ ಯಾರ ಭಯವೂ ಇಲ್ಲ ಅಂತಾ ಅನಿಸಬಹುದು. ಆದರೆ, ಕೊಹ್ಲಿಗೂ ಭಯವಿದೆ. ಈ ಒಂದು ವಿಚಾರದಲ್ಲಿ ವಿರಾಟ್ ಮಗುವಿನಂತೆ ನಡುಗುತ್ತಾರಂತೆ!

    ಆರ್​ಸಿಬಿ ಮ್ಯಾನೇಜ್​ಮೆಂಟ್​ ತಮ್ಮ ಆಟಗಾರರು ಹಾಗೂ ಸಿಬ್ಬಂದಿಯ ಪಾಡ್‌ಕ್ಯಾಸ್ಟ್ ಅನ್ನು ಬಿಡುಗಡೆ ಮಾಡುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಇತ್ತೀಚೆಗಷ್ಟೇ ಆರ್‌ಸಿಬಿ ಪಾಡ್‌ಕಾಸ್ಟ್ ಬಗ್ಗೆ ಪ್ರೋಮೋ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ವಿರಾಟ್ ಕೊಹ್ಲಿ ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅವರು ವಿಶೇಷವಾಗಿ ತಮಗಿರುವ ದೊಡ್ಡ ಭಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ಇದು ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ವಿಷಯಕ್ಕೆ ಸಂಬಂಧಿಸಿದ ಭಯವಲ್ಲ. ವಿರಾಟ್ ಕೊಹ್ಲಿ ಭಯಪಡುವುದು ಆಟಗಾರರಿಗೆ ಅಲ್ಲ, ಆದರೆ, ವಿಮಾನಗಳಿಗೆ. ಹೌದು ವಿರಾಟ್ ಕೊಹ್ಲಿಗೆ ಏರೋಫೋಬಿಯಾ ಇದೆ. ಇದೇ ವಿಷಯವನ್ನು ಕೊಹ್ಲಿ ಇದೀಗ ಬಹಿರಂಗಪಡಿಸಿದ್ದಾರೆ. ಹಾರಾಟದ ವೇಳೆ ಕೊಂಚ ಪ್ರಕ್ಷುಬ್ಧತೆ ಕಂಡರೆ ಪ್ರಾಣ ಭಯ ಕಾಡುತ್ತಿತ್ತು ಎಂದಿದ್ದಾರೆ.

    ನಾನು ವಿಮಾನದಲ್ಲಿ ತುಂಬಾ ಮೂರ್ಖನಾಗಿ ಕಾಣುತ್ತೇನೆ. ವಿಮಾನ ಕೊಂಚ ಅಲುಗಾಡಿದರೂ ನಾನು ತಕ್ಷಣ ನನ್ನ ಸ್ಥಾನವನ್ನು ಹಿಡಿಯುತ್ತೇನೆ. ಪ್ರಾಣ ಭಯ ಕಾಡುತ್ತದೆ ಎಂದು ಕೊಹ್ಲಿ ಪಾಡ್​ಕ್ಯಾಸ್ಟ್​ ಪ್ರೋಮೋದಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಏರೋಫೋಬಿಯಾ ಎಂದು ಕರೆಯಲಾಗುತ್ತದೆ. ಇದರರ್ಥ ವಿಮಾನವು ಪ್ರಕ್ಷುಬ್ಧತೆಯಿಂದ ಅಪಘಾತಕ್ಕೀಡಾಗುತ್ತದೆಯೇ? ನಾನು ಸಾಯಲಿದ್ದೇನೆಯೇ? ಎಂದು ಭಯ ಮತ್ತು ಆತಂಕ ವ್ಯಕ್ತಪಡಿಸುವುದನ್ನು ಏರೋಫೋಬಿಯಾ ಎಂದು ಕರೆಯಲಾಗುತ್ತದೆ.

    ಈ ಪಾಡ್‌ಕ್ಯಾಸ್ಟ್‌ನಲ್ಲಿ ಕೊಹ್ಲಿ ಮೊದಲ ಬಾರಿಗೆ ಈ ಸಮಸ್ಯೆಯನ್ನು ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿಯ ದೊಡ್ಡ ಭಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

    IIT, IIM ವಿದ್ಯಾರ್ಥಿಯಲ್ಲದಿದ್ರೂ ಬೆಂಗ್ಳೂರಿನ ಉನ್ನತ ಕಂಪನಿಯಲ್ಲಿ​ ಕೆಲಸ! ಈಕೆಯ ತಿಂಗಳ ಸಂಬಳ ಕೇಳಿದ್ರೆ ಬೆರಗಾಗ್ತೀರಾ

    2027ರ ಏಕದಿನ ವಿಶ್ವಕಪ್​ಗೆ ಸ್ಥಳ ನಿಗದಿ; ಮಹಾಸಮರಕ್ಕೆ ಆತಿಥ್ಯ ವಹಿಸಲಿದೆ ಈ ದೇಶಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts