More

    6ನೇ ವಿಶ್ವ ದಾಖಲೆ ಮುಡಿಗೇರಿಸಿಕೊಂಡ ತನುಶ್ರೀ

    ಉಡುಪಿ: ಯೋಗ ಸಾಧಕಿ ತನುಶ್ರೀ ಪಿತ್ರೋಡಿ ಬ್ಯಾಕ್‌ವರ್ಡ್ ಸ್ಕಿಪ್ ಪ್ರದರ್ಶಿಸುವ ಮೂಲಕ 6ನೇ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ಸೈಂಟ್ ಸಿಸಿಲಿ ಶಾಲೆ ಸಭಾಂಗಣದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿಯ ಸಮ್ಮುಖದಲ್ಲಿ ‘ಮೋಸ್ಟ್ ಬ್ಯಾಕ್‌ವರ್ಡ್ ಬಾಡಿ ಸ್ಕಿಪ್ ಇನ್ ಒನ್ ಮಿನಿಟ್’ ದಾಖಲೆ ನಿರ್ಮಿಸಿದರು.

    ಎರಡು ಕೈಗಳನ್ನು ಕಟ್ಟಿಕೊಂಡು ಬೆನ್ನ ಹಿಂದೆ ತಂದು ಕಾಲಿನ ಅಡಿಯಿಂದ ಕಟ್ಟಿಕೊಂಡ ಕೈಗಳನ್ನು ಮುಂದಕ್ಕೆ ತರುವ ಕ್ಲಿಷ್ಟಕರ ಕ್ರಿಯೆಯನ್ನು ಲೀಲಜಾಲವಾಗಿ ಮಾಡುವ ಮೂಲಕ ತನುಶ್ರೀ ದಾಖಲೆ ಬರೆದರು. ಒಂದು ನಿಮಿಷದಲ್ಲಿ 55 ಸುತ್ತು ಮಾಡುವ ಮೂಲಕ ವಿಶಿಷ್ಟ ದಾಖಲೆ ಪಟ್ಟ ಗಿಟ್ಟಿಸಿಕೊಂಡರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರತಿನಿಧಿ ಡಾ.ಮನೀಷ್ ವಿಶ್ವ ದಾಖಲೆ ಪ್ರಮಾಣಪತ್ರ ವಿತರಿಸಿದರು.
    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಮನೀಷ್, ಈ ಹಿಂದೆ ದುಬೈನಲ್ಲಿ ಯುವಕನೊಬ್ಬ 47 ಬಾರಿ ಫ್ರಂಟ್‌ವರ್ಡ್ ಬಾಡಿ ಸ್ಕಿಪ್ ಇನ್ ಒನ್ ಮಿನಿಟ್ ದಾಖಲೆ ಮಾಡಿದ್ದರು. ಈಗ ತನುಶ್ರೀ ಆ ದಾಖಲೆ ಮೀರಿಸಿದ್ದಾರೆ ಎಂದರು.

    ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾಗರಾಜ್ ರಾವ್, ಉದ್ಯಾವರ ನಾಗೇಶ್ ಕುಮಾರ್, ನಿರುಪಮ ಪ್ರಸಾದ್ ಶೆಟ್ಟಿ, ತನುಶ್ರೀ ಗುರುಗಳಾದ ರಾಮಕೃಷ್ಣ ಕೊಡಂಚ ಉಪಸ್ಥಿತರಿದ್ದು, ಶುಭ ಹಾರೈಸಿದರು. ತನುಶ್ರೀ ಹೆತ್ತವರಾದ ಉದಯಕುಮರ್, ಸಂಧ್ಯಾ ಇದ್ದರು.

    ಸರಣಿ ದಾಖಲೆಯ ಹಿರಿಮೆ
    ಸೇಂಟ್ ಸಿಸಿಲಿಸ್ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ, 11 ವರ್ಷದ ತನುಶ್ರೀ ಹಿಂದೆ 5 ವಿಶ್ವ ದಾಖಲೆ ನಿರ್ಮಿಸಿದ್ದರು. 2017ರಲ್ಲಿ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದರು. 2018ರಲ್ಲಿ ಎದೆಭಾಗವನ್ನು ಸ್ಥಿರವಿರಿಸಿ ದೇಹದ ಉಳಿದ ಭಾಗವನ್ನು ಚಲನೆಗೊಳಿಸುವ ನಿರಾಲಂಬ ಪೂರ್ಣ ಚಕ್ರಾಸನ ಭಂಗಿಯನ್ನು 1 ನಿಮಿಷದಲ್ಲಿ 42 ಬಾರಿ ಮಾಡಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗೆ ಪಾತ್ರರಾಗಿದ್ದರು. 2019ರಲ್ಲಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ (62) ಧನುರಾಸನ ಹಾಕಿ ದಾಖಲೆ ಬರೆದಿದ್ದರು. 2020ರಲ್ಲಿ ಚಕ್ರಾಸನ ರೇಸ್ ವಿಭಾಗದಲ್ಲಿ 1.14 ನಿಮಿಷದಲ್ಲಿ ಅತಿ ವೇಗವಾಗಿ 100 ಬಾರಿ ಉರುಳಿ ಮತ್ತೊಂದು ದಾಖಲೆ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts