More

    ದಳಪತಿ ವಿಜಯ್​ನ ಒಂದು ಉತ್ತರ ಅಭಿಮಾನಿಗಳಿಗೆ ಸಂತಸ, ತಮಿಳುನಾಡಿನ ರಾಜಕಾರಣಿಗಳಿಗೆ ನಡುಕ!

    ಚೆನೈ: ಕಾಲಿವುಡ್​ನ ಸೂಪರ್ ಸ್ಟಾರ್ ನಟರ ಪಟ್ಟಿಯಲ್ಲಿ ನಟ ದಳಪತಿ ವಿಜಯ್ ಒಬ್ಬರು. ಅವರ ಸಿನಿಮಾಗಳು ಮತ್ತು ಮುತ್ತಿನಂತಹ ಮಾತುಗಳನ್ನು ಕೇಳಲು ಜನ ಕಾಯುತ್ತಿರುತ್ತಾರೆ. ಕಾರಣ, ನಟ ಆಗಾಗ ಕೇವಲ ಕೆಲ ಅಭಿಮಾನಿಗಳ ಕೈಗೆ ಸಿಕ್ಕರೂ, ಮಾಧ್ಯಮದವರಿಗೆ ಅಂತೂ ಸಿಗುವುದೇ ಇಲ್ಲ. ಹಾಗಾಗಿ, ನೆಚ್ಚಿನ ನಟನ ಮಾತು ಕೇಳಲು ಅವರ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅಂತಹ ಅಭಿಮಾನಿಗಳಿಗೆ ಈಗ ಬರೋಬ್ಬರಿ ಹತ್ತು ವರ್ಷದ ಬಳಿಕ ದಳಪತಿ ವಿಜಯ್ ಅವರು ನೀಡಿರುವ ಒಂದು ಸಂದರ್ಶನ ಸಿಕ್ಕಾಪಟ್ಟೆ ಇಷ್ಟವಾಗಿದೆ ಎನ್ನಬಹುದು. ಇದಕ್ಕೆ ಕಾರಣ, ಇಷ್ಟು ವರ್ಷಗಳ ಬಳಿಕ ವಿಜಯ್ ಅವರು ಮಾಧ್ಯಮಗಳ ಜತೆಗೆ ಮಾತಾಡಿರುವುದು ಅಲ್ಲದೇ ಅವರು ಒಂದು ವಿಚಾರದ ಬಗ್ಗೆ ಕೊಟ್ಟ ಹೇಳಿಕೆ ಅಭಿಮಾನಿಗಳನ್ನು ದಿಲ್ ಖುಷ್ ಮಾಡಿದೆ. 
    ಅಂದಹಾಗೆ, ದಳಪತಿ ವಿಜಯ್ ಅವರು ಅಭಿನಯಿಸಿರುವ ಬೀಸ್ಟ್ಸಿನಿಮಾ ನಾಳೆ ರಿಲೀಸ್ ಆಗಲು ರೆಡಿಯಾಗಿದೆ. ಹಾಗಾಗಿ, ಈ ಸಿನಿಮಾದ ಪ್ರಚಾರದ ಅಂಗವಾಗಿ ವಿಜಯ್ ತಮಿಳಿನ ಸನ್ ಟಿವಿ ಅವರಿಗೆ ಒಂದು ಅಪರೂಪದ ಸಂದರ್ಶನ ನೀಡಿದ್ದಾರೆ. ಆದರೆ, 10 ವರ್ಷಗಳ ಬಳಿಕ ನಟ ವಿಜಯ್ ಅವರು ಕೊಟ್ಟ ಈ ಟಿವಿ ಸಂದರ್ಶನದಲ್ಲಿ ಕೇವಲ ಬೀಸ್ಟ್ಬಗ್ಗೆ ಅಲ್ಲದೇ ಅವರ ರಾಜಕೀಯ, ತಮಿಳು ಚಿತ್ರರಂಗ, ತಮ್ಮ ಕುಟುಂಬದ ಬಗ್ಗೆ ಸೇರಿ ಹಲವು ವಿಚಾರಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಇನ್ನು, ನಟನ ಈ ಇಡೀ ಸಂದರ್ಶನ ಎಲ್ಲರ ಗಮನ ಸೆಳೆದರು, ಸದ್ಯ ಅವರ ಅಭಿಮಾನಿಗಳಲ್ಲಿ ಒಂದು ವಿಚಾರದ ಕುರಿತು ಮಾತ್ರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದುವೇ, ನಟನ ರಾಜಕೀಯ ಪ್ರವೇಶ. ಇನ್ನು, ನಟ ವಿಜಯ್ ಅವರ ಈ ಸಂದರ್ಶನಕ್ಕೆ ‘ಬೀಸ್ಟ್​’ ಚಿತ್ರದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಅವರೇ ನಿರೂಪಣೆ ಮಾಡಿದ್ದಾರೆ.
    ದಳಪತಿ ವಿಜಯ್ ಅವರ ಇದುವರೆಗೂ ಯಾವ ರಾಜಕೀಯ ಪಕ್ಷಕ್ಕೂ ಬೆಂಬಲ ನೀಡದಿದ್ದರೂ ಅವರು ಪರೋಕ್ಷವಾಗಿ ತಮಿಳುನಾಡು ರಾಜ್ಯ ರಾಜಕೀಯದ ಮೇಲೆ ಹಲವು ವರ್ಷಗಳಿಂದ ಸಾಕಷ್ಟು ಪ್ರಭಾವ ಬೀರುತ್ತಿದ್ದಾರೆ. ಆದರೆ, ಈಗ ಸ್ವತಃ ದಳಪತಿ ವಿಜಯ್ ಅವರೇ ರಾಜಕೀಯ ಪ್ರವೇಶದ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿದ್ದಾರೆ. ವಿಜಯ್ ಅವರು, ”ಅಭಿಮಾನಿಗಳು ಬಯಸಿದಲ್ಲಿ ರಾಜಕೀಯಕ್ಕೆ ಪ್ರವೇಶಿಸುತ್ತೇನೆಎಂದಿದ್ದಾರೆ. ಮತ್ತೊಂದೆಡೆ, ಅಭಿಮಾನಿಗಳು ಹಲವು ವರ್ಷಗಳಿಂದಲೂ ವಿಜಯ್ ರಾಜಕೀಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಮೂಲಕ ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದು ಬಹುತೇಕ ಪಕ್ಕಾ ಎಂದು ಅರ್ಥವಾಗುತ್ತಿದೆ. ಹೀಗಾಗಿ, ನಟನ ಈ ಸಂದರ್ಶನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ. ಸಂದರ್ಶನದ ವಿಡಿಯೋ ಯೂಟ್ಯೂಬ್​ನಲ್ಲಿ ಬರೋಬ್ಬರಿ 63 ಲಕ್ಷ ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿರುವುದು ವಿಶೇಷ.
    ಇನ್ನು, ನಟನಿಂದ ಇಂತಹ ಉತ್ತರ ಬರುತ್ತಿದ್ದಂತೆ, ಅಭಿಮಾನಿಗಳಲ್ಲಿ ಈಗ ವಿಜಯ್ ಉತ್ತರ ಒಂದು ಕಡೆ ಸಂತಸ ತಂದರೆ ಮತ್ತೊಂದು ಕಡೆ ಅವರು ಯಾವಾಗ ರಾಜಕೀಯಕ್ಕೆ ಬರುತ್ತಾರೆ? ಯಾವ ಪಾರ್ಟಿಯಿಂದ ಸ್ಪರ್ಧಿಸುತ್ತಾರೆ? ಅಥವಾ ತಮ್ಮದೇ ಪರ್ಟಿ ಸ್ಥಾಪಿಸುತ್ತಾರೆ? ಎಂಬ ಹಲವು ಪ್ರಶ್ನೆಗಳು ಕುತೂಹಲ ಕೆರಳಿಸಿವೆ. ಆದರೆ, ತಮಿಳುನಾಡಿನ ಬೇರೆ ರಾಜಕಾರಣಿಗಳಿಗೆ ಮಾತ್ರ ವಿಜಯ್ ಅವರ ರಾಜಕೀಯ ಎಂಟ್ರಿ ಕುರಿತಾದ ಉತ್ತರ ನಡುಕ ಹುಟ್ಟಿಸಿದೆ ಎಂದರೆ ತಪ್ಪಾಗುವುದಿಲ್ಲ. ಅಂದಹಾಗೆ, ಎಲ್ಲಿರಿಗೂ ತಿಳಿದಿರುವ ಹಾಗೆ ಈಗಾಗಲೇ, ವಿಜಯ್‌ ಅವರ ತಂದೆ ವಿಜಯ್‌ ಅವರಿಗಿರುವ ಮಾಸ್ ಅಭಿಮಾನಿ ಬಳಗವನ್ನು ಬಳಸಿಕೊಂಡು ಮಗನ ಹೆಸರಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಆದರೆ, ತಮಗೆ ಆ ಪಕ್ಷದೊಟ್ಟಿಗೆ ಯಾವುದೇ ಸಂಬಂಧ ಇಟ್ಟುಕೊಂಡಿಲ್ಲ ಎಂದು ನಟ ಬಹಿರಂಗವಾಗಿ ಹೇಳಿಕೆ ಬಿಡುಗಡೆ ಮಾಡಿದರು. ಜತೆಗೆ, ತಂದೆಯ ಮೇಲೆ ಕೇಸ್ ಕೂಡಾ ಹಾಕಿದರು.
    ಇದಕ್ಕೆ ಕಾರಣ, ತನ್ನ ಹೆಸರು ದುರ್ಬಳಕೆ ಆಗಬಾರದು ಎಂದು ವಿಜಯ್ ತಿಳಿಸಿದರು. ಆದರೆ, ಬಳಿಕ ಕಳೆದ ವರ್ಷದಲ್ಲಿ ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಜಯ್‌ ತಮ್ಮ ಅಭಿಮಾನಿಗಳ ಒತ್ತಾಯದ ಮೇರೆಗೆ ಅವರ ಚಿತ್ರಗಳನ್ನು ಬಳಸಿ ಚುನಾವಣೆಗೆ ಸ್ಪರ್ಧಿಸಲು ವಿಜಯ್ ಅವರು ಅವಕಾಶ ನೀಡಿದ್ದರು. ಅಷ್ಟೇ, ಹಾಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿಜಯ್ ಅವರು ಚಿತ್ರಗಳನ್ನು ಬಳಸಿ ಸ್ಪರ್ಧಿಸಿದ್ದ ಹಲವು ವಿಜಯ್ ಅಭಿಮಾನಿಗಳು ಗೆದ್ದು ಬೀಗಿದ್ದರು. ಇದು ರಾಜ್ಯದ ಇತರೆ ಪಕ್ಷಗಳಿಗೆ ಆಶ್ಚರ್ಯದ ಜೊತೆಗೆ ಆತಂಕ ತಂದಿತ್ತು. ಇನ್ನು, ಅಂದು ಗೆದ್ದಿದ್ದು ನಟನ ಅಭಿಮಾನಿಗಳು. ಇದೀಗ, ನಟ ದಳಪತಿ ವಿಜಯ್ ಅವರೇ ಫೀಲ್ಡ್ ​ಗಿಳಿದರೇ ತಮಿಳುನಾಡಿನ ಬೇರೆ ರಾಜಕಾರಣಿಗಳ ಗತಿ ಏನು ಎಂದು ಯೋಚಿಸಬೇಕು

    KGF-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ Records ಗೊತ್ತಾ? ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಇರಬಹುದು?

    ತಲೆಗೂದಲನ್ನು ಕತ್ತರಿಸಿಕೊಂಡ ಅನುಪಮಾ ಗೌಡ! ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts