More

    ನೆಟ್‌ಫ್ಲಿಕ್ಸ್, ಅಮೆಜಾನ್ ಎರಡಕ್ಕೂ ‘ತಲೈವಿ’ ಮಾರಾಟ … ಇದು ಹೇಗೆ ಸಾಧ್ಯ?

    ಕಂಗನಾ ರಣೌತ್ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರವೆಂದರೆ ಅದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕುರಿತಾದ ‘ತಲೈವಿ’ ಚಿತ್ರ. ಈಗಾಗಲೇ ಶೂಟಿಂಗ್ ಮುಗಿದಿರುವ ಈ ಚಿತ್ರ, ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ.

    ಇದನ್ನೂ ಓದಿ: ಫೋರ್ಬ್ಸ್ ಪಟ್ಟಿಯಲ್ಲಿ ಏಕೈಕ ಭಾರತೀಯ ಅಕ್ಷಯ್ … ಕಳೆದ ವರ್ಷದ ಸಂಪಾದನೆ ಎಷ್ಟು?

    ಈ ಮಧ್ಯೆ ಚಿತ್ರವು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ಗೆ ಮಾರಾಟವಾಗಿದೆ. ಒಂದು ಚಿತ್ರ, ಯಾವುದಾದರೂ ಒಂದು ಓವರ್ ದಿ ಟಾಪ್ (ಓಟಿಟಿ) ಡಿಜಿಟಲ್ ಫ್ಲಾಟ್​ಫಾಮ್​ರ್ನಲ್ಲಿ ಬಿಡುಗಡೆಯಾಗುತ್ತದೆ. ಹಾಗಿರುವಾಗ, ‘ತಲೈವಿ’ ಮಾತ್ರ ಎರಡು ಓಟಿಟಿಗೆ ಹೇಗೆ ಮಾರಾಟವಾಯಿತು ಎಂಬ ಪ್ರಶ್ನೆ ಸಹಜವೇ.

    ವಿಷಯವೇನೆಂದರೆ, ‘ತಲೈವಿ’ ದ್ವಿಭಾಷಾ ಚಿತ್ರ. ಈ ಚಿತ್ರ ಹಿಂದಿ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಹಾಗಾಗಿ ಒಂದೊಂದು ಅವತರಣಿಕೆ ಒಂದೊಂದು ಓಟಿಟಿಗೆ ಮಾರಾಟವಾಗುತ್ತಿದೆ. ಹಿಂದಿ ಅವತರಣಿಕೆ ನೆಟ್‌ಫ್ಲಿಕ್ಸ್‌ಗೆ ಮಾರಾಟವಾದರೆ, ತಮಿಳಿನದ್ದು ಅಮೇಜಾನ್‌ಗೆ ಹೋಗಿದೆ ಎಂಬ ಸುದ್ದಿ ಇದೆ. ಏನೇ ಇರಲಿ, ಈ ಎರಡೂ ಭಾಷೆಗಳ ಡಿಜಿಟಲ್ ಹಕ್ಕುಗಳ ಮಾರಾಟದಿಂದ ನಿರ್ಮಾಪಕರಿಗೆ ಸಿಕ್ಕ ಮೊತ್ತ ಎಷ್ಟು ಗೊತ್ತಾ? 55 ಕೋಟಿ ರೂಪಾಯಿಗಳು. ಅಲ್ಲಿಗೆ, ‘ತಲೈವಿ’ ಚಿತ್ರ ಬಿಡುಗಡೆಯಾಗುವುದಕ್ಕಿಂತ ಮುನ್ನವೇ ಬಹಳಷ್ಟು ಸೇಫ್​ ಆಗಿದೆ ಎನ್ನುವುದು ವಿಶೇಷ.

    ಇದನ್ನೂ ಓದಿ: ಪ್ರೇಕ್ಷಕರ ಕ್ಷಮೆ ಕೇಳಿದ ನಿರ್ದೇಶಕ ರಘುರಾಮ್!

    ಇನ್ನು ಚಿತ್ರದ ಡಿಜಿಟಲ್ ಹಕ್ಕುಗಳು ನೆಟ್‌ಫ್ಲಿಕ್ಸ್ ಮತ್ತು ಅಮೇಜಾನ್‌ಗೆ ಮಾರಾಟವಾಗಿದ್ದರೂ, ಚಿತ್ರ ಮೊದಲು ಅಲ್ಲಿ ಬಿಡುಗಡೆಯಾಗುವುದಿಲ್ಲವಂತೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಓಟಿಟಿನಲ್ಲಿ ಈ ಚಿತ್ರಗಳು ಪ್ರೀಮಿಯರ್ ಆಗಲಿವೆ.

    ಈ ಕುರಿತು ಮಾತನಾಡಿರುವ ಕಂಗನಾ ರಣೌತ್, ‘ಮಾರಾಟವಾಯ್ತು ಎಂಬ ಕಾರಣಕ್ಕೆ ಬರೀ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ, ಇದೊಂದು ದೊಡ್ಡ ಬಜೆಟ್‌ನ ಚಿತ್ರ. ಹಾಗಾಗಿ ಬರೀ ಡಿಜಿಟಲ್ ಹಕ್ಕುಗಳ ಮಾರಾಟವನ್ನು ಮಾತ್ರ ನಂಬಿಕ್ಕೊಳ್ಳುವುದಕ್ಕೆ ಸಾಧ್ಯವಿಲ್ಲ. ಮೊದಲಿಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕು, ಆ ನಂತರ ಇದು ಡಿಜಿಟಲ್ ವೇದಿಕೆಯಲ್ಲಿ ನೋಡಬಹುದು’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಕಂಗನಾ.

    PHOTO GALLERY| ಪಾರುಲ್​ಗೆ ಬರ್ತಡೇ ಖುಷಿ​: ಬಚ್ಚನ್​ ಬ್ಯೂಟಿಯ ಹಾಟ್​ ಫೋಟೋ ನೋಡಿದ್ರೆ ಪ್ಯಾರ್​ಗೆ ಆಗ್ಬಿಡುತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts