More

    5 ಗಡಿ ರಸ್ತೆಗಳಲ್ಲಿ ಆ್ಯಂಟಿಜೆನ್ ಟೆಸ್ಟ್

    ಕಾಸರಗೋಡು: ಜಿಲ್ಲೆಗೆ ಇತರ ರಾಜ್ಯಗಳಿಂದ ಪ್ರವೇಶಿಸುವ 17 ಗಡಿ ರಸ್ತೆಗಳಲ್ಲಿ 5 ಗಡಿ ರಸ್ತೆಗಳ ಚೆಕ್‌ಪೋಸ್ಟ್ ವ್ಯವಸ್ಥೆ ಸಜ್ಜುಗೊಳಿಸಲಾಗಿದ್ದು, ಇಲ್ಲಿ ಕೋವಿಡ್ ನೆಗೆಟಿವ್ ಆಗಿರುವ ಸರ್ಟಿಫಿಕೇಟ್ ಇಲ್ಲದ ಮಂದಿಗೆ ಆ್ಯಂಟಿಜೆನ್ ಟೆಸ್ಟ್ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಮಟ್ಟದ ಕರೊನಾ ಕೋರ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

    ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ತಲಪಾಡಿ ಚೆಕ್‌ಪೋಸ್ಟ್ (ಎನ್.ಎಚ್.66), ಅಡ್ಕಸ್ಥಳ, ಅಡ್ಯನಡ್ಕ ರಸ್ತೆ(ಎಸ್.ಎಚ್.55), ಆದೂರು- ಕೊಟ್ಯಾಡಿ- ಸುಳ್ಯ ರಾಜ್ಯ ಹೆದ್ದಾರಿ (ಎಸ್.ಎಚ್.55), ಪಾಣತ್ತೂರು-ಚೆಂಬೇರಿ- ಮಡಿಕೇರಿ (ಎಸ್.ಎಚ್.56), ಮಾಣಿಮೂಲೆ- ಸುಳ್ಯ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ಮಾಡಿ, ಆ್ಯಂಟಿಜೆನ್ ತಪಾಸಣೆ ವ್ಯವಸ್ಥೆ ಮಾಡಲಾಗುವುದು. ಈ ಚೆಕ್‌ಪೋಸ್ಟ್‌ಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಆ್ಯಂಟಿಜೆನ್ ಟೆಸ್ಟ್ ಇರಲಿದೆ. ಸಂಜೆ 6ರ ನಂತರ ಬೆಳಗ್ಗೆ 6ರವರೆಗೆ ಇತರ ರಾಜ್ಯಗಳಿಂದ ಆಗಮಿಸುವ ಯಾತ್ರಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹಾಜರುಪಡಿಸಬೇಕು.

    ತೂಮಿನಾಡ್ ರಸ್ತೆ, ಕೆದಂಪಾಡಿ ಪದವು ರಸ್ತೆ, ಸುಂಕದಕಟ್ಟೆ-ಮುಡಿಪು ರಸ್ತೆ, ಕುರುಡಪದವು ರಸ್ತೆ, ಮುಳಿಗದ್ದೆರಸ್ತೆ, ಬೆರಿಪದವು, ಸ್ವರ್ಗ-ಆರ್ಲಪದವು ರಸ್ತೆ, ಕೊಟ್ಯಾಡಿ- ಪಳ್ಳತ್ತೂರು-ಈಶ್ವರಮಂಗಲ ರಸ್ತೆ, ಕೊಟ್ಯಾಠಡಿ-ಅಡೂರು-ದೇವರಡ್ಕ ರಸ್ತೆ, ಗಾಳಿಮುಖ- ಈಶ್ವರಮಂಗಲ-ದೇಲಂಪಾಡಿ ರಸ್ತೆ, ನಾಟೆಕಲ್ಲು- ಸುಳ್ಯಪದವು ರಸ್ತೆ, ಚೆನ್ನಂಕುಂಡ್-ಚಾಮಕೊಚ್ಚಿ ರಸ್ತೆ ಎಂ. 12 ಪಾಯಿಂಟ್‌ಗಳಲ್ಲಿ ಕರ್ನಾಟಕದಿಂದ ಜಿಲ್ಲೆಗೆ ಪ್ರವೇಶಿಸುವ ಯಾತ್ರಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹಾಜರುಪಡಿಸಬೇಕು. ಒಂದೇ ದಿನ ಆಗಮಿಸಿ ಮರಳುವ, ದಿನನಿತ್ಯ ಪ್ರಯಾಣ ನಡೆಸುವವರು ನೆಗೆಟಿವ್ ಸರ್ಟಿಫಿಕೇಟ್ ಹಾಜರುಪಡಿಸಬೇಕಿಲ್ಲ. ಗಡಿಪ್ರದೇಶದ ಆ್ಯಂಟಿಜೆನ್ ಟೆಸ್ಟನ್ನೂ ಮಾಡಿಸಬೇಕಿಲ್ಲ. ಕರ್ನಾಟಕದ ಸಮೀಪದ ಗ್ರಾಮ ಪಂಚಾಯಿತಿಗಳಿಗಳಲ್ಲಿ ವಾಸವಾಗಿರುವವರು ಗಡಿ ಮೀರಿ ಸಂಚರಿಸುವುದಿಲ್ಲ ಎಂದು ಗ್ರಾಪಂನಿಂದ ದೃಢೀಕರಣ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts