More

    ಒಂದೇ ದಿನಕ್ಕೆ 1.19 ಲಕ್ಷ ಕೋಟಿ ರೂ. ಕಳೆದುಕೊಂಡ ಎಲಾನ್​ ಮಸ್ಕ್​; ಟೆಸ್ಲಾ ಒಡೆಯನ ಎಡವಟ್ಟೇನು?

    ನ್ಯೂಯಾರ್ಕ್​: ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಎಲಾನ್​ ಮಸ್ಕ್​ ಒಂದೇ ದಿನ ಬರೋಬ್ಬರಿ 1.19 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ….!

    ಬ್ಲೂಮ್​ಬರ್ಗ್ಸ್​ ಬಿಲಿಯನೇರ್​ಗಳ ಪಟ್ಟಿಯಲ್ಲಿ ಒಂದೇ ದಿನ 16.3 ಬಿಲಿಯನ್​ ಡಾಲರ್​ ( ಅಂದಾಜು 1.19 ಲಕ್ಷ ಕೋಟಿ ರೂ.) ಗಳಷ್ಟು ಬಡವರಾಗಿದ್ದಾರೆ. ಬ್ಲೂಮ್​ಬರ್ಗ್ಸ್​ನ ಇತಿಹಾಸದಲ್ಲಿಯೇ ಇದು ಅತಿದೊಡ್ಡ ಕುಸಿತವಾಗಿದೆ.

    ಇದನ್ನೂ ಓದಿ; ಎಲಾನ್​ ಮಸ್ಕ್​ ಕಂಪನಿಯಿಂದ ಹಂದಿ ಮಿದುಳಿನಲ್ಲಿ ಕಂಪ್ಯೂಟರ್​ ಚಿಪ್​; ಶೀಘ್ರದಲ್ಲಿ ಮಾನವರಿಗೂ ಅಳವಡಿಕೆ

    ಇಷ್ಟಕ್ಕೂ ಈ ಕುಸಿತಕ್ಕೆ ಕಾರಣವೆಂದರೆ, ಎಲಾನ್​ ಮಸ್ಕ್​ ಒಡೆತನದ ಎಲೆಕ್ಟ್ರಿಕ್​ ಕಾರುಗಳ ಒಡೆತನದ ಕಂಪನಿ ಟೆಸ್ಲಾ ಕಂಪನಿಯ ಷೇರುಗಳು ಶೇ.21ರಷ್ಟು ಕುಸಿತ ಕಂಡಿವೆ. ಈ ಕ್ಷೇತ್ರದಲ್ಲಿ ಟೆಸ್ಲಾಗೆ ಎದುರಾಳಿಗಳಾಗಿರುವ ನಿಕೊಲಾ ಕಾರ್ಪ್​ ಹಾಗೂ ಜನರಲ್​ ಮೋಟರ್ಸ್​ ಜತೆಗೆ ಪಾಲುದಾರಿಕೆಗೆ ಮುಂದಾಗಿರುವುದು.

    ಕಳೆದೊಂದು ವಾರದಿಂದ ಇಂಥದ್ದೊಂದು ಸುದ್ದಿ ಹರಿದಾಡುತ್ತಿದ್ದಂತೆ ಕಂಪನಿ ಷೇರು ಮಾರಾಟ ತೀವ್ರವಾಗಿತ್ತು. ಇದೀಗ ನ್ಯೂಯಾರ್ಕ್​ ಷೇರು ಮಾರುಕಟ್ಟೆಯಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದಲ್ಲದೇ ಎಸ್​ ಆ್ಯಂಡ್​ ಪಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಕ್ಕೂ ಹೂಡಿಕೆದಾರರಲ್ಲಿ ಅಸಮಾಧಾನವಿತ್ತು.

    ಇದನ್ನೂ ಓದಿ; ಒಂದು ಟ್ವಿಟ್​ನಿಂದಾಗಿ ಆತ ಕಳೆದುಕೊಂಡ ಮೊತ್ತ 22 ಸಾವಿರ ಕೋಟಿ…! 

    ಎಲಾನ್​ ಮಸ್ಕ್​ ಮಾತ್ರವಲ್ಲ, ಜಗತ್ತಿನ ಅತಿ ಶ್ರೀಮಂತ್​ ವ್ಯಕ್ತಿ ಅಮೆಜಾನ್​ ಸಂಸ್ಥಾಪಕ ಜೆಫ್​ ಬಿಜೋಸ್​ ಕೂಡ 58 ಸಾವಿರ ಕೋಟಿ ರೂ. ಕಳೆದುಕೊಂಡಿದ್ದಾರೆ. ಇನ್ನೊಂದೆಡೆ, ಷೇರು ಮಾರುಕಟ್ಟೆಯಲ್ಲಿ ಐಪಿಒಗೆ ದೊರೆತ ಅದ್ಭುತ ಪ್ರತಿಕ್ರಿಯೆಯಿಂದಾಗಿ ಚೀನಾದ ಜಾಂಗ್​ ಶಾನ್​ಶಾನ್​ 2.20 ಲಕ್ಷ ಕೋಟಿ ಆದಾಯ ಪಡೆದುಕೊಂಡು ಚೀನಾದ ಶ್ರೀಮಂತರಲ್ಲಿ ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ಈ ಹಿಂದೆಯೂ ಎಲಾನ್​ ಮಸ್ಕ್​ ಒಂದೇ ಒಂದು ಟ್ವಿಟ್​ನಿಂದಾಗಿ 22,000 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದರು.

    ರೇಷ್ಮೆ ಬೆಳೆಗಾರರಿಗೆ ಸಿಹಿ ಸುದ್ದಿ; ಚೀನಾ ಸಿಲ್ಕ್​ ಬ್ಯಾನ್​…? ಸ್ವಾವಲಂಬನೆಗೆ ಸೂತ್ರ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts