More

    ಬಾಲಕನನ್ನು ಕೊಂದ ಉಗ್ರನನ್ನು ಹೊಡೆದುರುಳಿಸಿದ ಯೋಧರು

    ನವದೆಹಲಿ: ಕಳೆದ ವಾರ ಅನಂತ್‌ನಾಗ್‌ನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಆರು ವರ್ಷದ ಬಾಲಕನನ್ನು ಕೊಂದ ಭಯೋತ್ಪಾದಕನನ್ನು ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ.

    ಶ್ರೀನಗರದ ಹಜರತ್ಬಾಲ್ ದೇವಾಲಯದ ಸಮೀಪವಿರುವ ಮಾಲ್ಬಾಗ್ ಎಂಬಲ್ಲಿ ಗುರುವಾರ ತಡರಾತ್ರಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಜಹೀದ್ ದಾಸ್ ಎಂಬಾತ ಗುಂಡಿನ ದಾಳಿಗೆ ಮೃತಪಟ್ಟಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹೇಳಿದ್ದಾರೆ.

    ಇದನ್ನೂ ಓದಿ: ನೆಪೋಟಿಸಂ ತಡೆಗೆ ನೆಪೋಮೀಟರ್​ ಆ್ಯಪ್​ ಬಿಡುಗಡೆ; ಸಡಕ್​ಗೆ ಸಿಕ್ತು ಬೈಕಾಟ್ ಪಟ್ಟ!

    ಜಹೀದ್ ದಾಸ್ ಜಮ್ಮು ಕಾಶ್ಮೀರ ಇಸ್ಲಾಮಿಕ್ ಸ್ಟೇಟ್‌ಗೆ (ಜೆಕೆಐಎಸ್) ಸೇರಿದವನಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.
    ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಭಯೋತ್ಪಾದಕರು ಏಕಾಏಕಿ ದಾಳಿ ನಡೆಸಿದ್ದರು. ಆ ಸಮಯದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಅಪ್ರಾಪ್ತ ಬಾಲಕ ಮೃತಪಟ್ಟಿದ್ದರು. ಬಾಲಕ ತನ್ನ ತಂದೆಯೊಂದಿಗೆ ಆ ಸಮಯದಲ್ಲಿ ದಾಳಿ ನಡೆಯುವ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ. ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದ ಪಾಡ್‌ಶಾಹಿ ಬಾಗ್ ಸೇತುವೆ ಬಳಿ ಈ ಘಟನೆ ನಡೆದಿತ್ತು. ದಾಳಿಯ ನಂತರ ಭಯೋತ್ಪಾದಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಈತ ಆತನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ತಲೆನೋವಾಗಿರುವ ಶಶಿಕಲಾ ಬಿಡುಗಡೆ- ಫೋನ್‌ಕಾಲ್‌ಗಳಿಗೆ ಪೊಲೀಸರು ಸುಸ್ತೋ ಸುಸ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts