More

    ಹನಗಂಡಿ ಶಾಲೆಯಲ್ಲಿ ಮಕ್ಕಳ ರಕ್ತ ಪರೀಕ್ಷೆ

    ತೇರದಾಳ: ಸಮೀಪದ ಹನಗಂಡಿ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಬಾಲ ಸ್ವಾಸ್ಥೃ ಕಾರ್ಯಕ್ರಮದಡಿ ಆರೋಗ್ಯ ಇಲಾಖೆ ವತಿಯಿಂದ ಮಕ್ಕಳ ರಕ್ತ ಪರಿಶೀಲನೆ ಕಾರ್ಯ ಶುಕ್ರವಾರ ನಡೆಯಿತು.

    ರಾಷ್ಟ್ರೀಯ ಅಭಿಯಾನದ ಅಂಗವಾಗಿ ತೇರದಾಳ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಎಂಟು ಸಿಬ್ಬಂದಿ ಇರುವ ಎರಡು ತಂಡಗಳನ್ನು ರಚಿಸಲಾಗಿದ್ದು, ಇಬ್ಬರು ಲ್ಯಾಬ್ ವೈದ್ಯರು, ನಾಲ್ಕು ಮಹಿಳಾ ಸಹಾಯಕಿಯರು ಮತ್ತು ಇಬ್ಬರು ಸ್ಥಳೀಯ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

    ಈಗಾಗಲೇ ಸರ್ಕಾರಿ, ಅನುದಾನಿತ ಶಾಲೆಗಳ 5-10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು ಎರಡು ಸಾವಿರ ಮಕ್ಕಳ ರಕ್ತ ಪರೀಕ್ಷೆ ಮಾಡಲಾಗಿದ್ದು, ಶುಕ್ರವಾರ ಹನಗಂಡಿ ಗ್ರಾಮದ ಶಾಲೆಗಳಲ್ಲಿ ಕಾರ್ಯಕ್ರಮ ನಡೆಯಿತು. ಜ್ವರ, ಕೆಮ್ಮು ಕಂಡು ಬಂದ ಮಕ್ಕಳಿಗೆ ಮಾಸ್ಕ್ ಬಳಸುವಂತೆ ತಿಳಿವಳಿಕೆ ಮೂಡಿಸಲಾಯಿತು.

    ಲ್ಯಾಬ್ ಟೆಕ್ನಿಷಿಯನ್ ತಂಡದ ಮುಖ್ಯಸ್ಥ ಎಂ.ಆರ್.ದಮಾನಿ ಮಾತನಾಡಿ, ಈಗಾಗಲೇ ತೇರದಾಳ, ಹನಗಂಡಿ ಶಾಲೆಗಳಲ್ಲಿ ತಪಾಸಣೆ ಕಾರ್ಯ ಮುಗಿದಿದೆ. ಇನ್ನೆರಡು ದಿನಗಳಲ್ಲಿ ಉಳಿದ ಗ್ರಾಮಗಳ ಶಾಲೆಗಳಲ್ಲಿಯೂ ನಮ್ಮ ತಂಡ ರಕ್ತ ಪರಿಶೀಲನೆ ನಡೆಸಲಿದೆ ಎಂದು ತಿಳಿಸಿದರು.
    ಎ.ಎಸ್. ಚೌಕದಾರ, ಸಿಬ್ಬಂದಿ ಬಿಸ್ಮಿಲ್ಲಾ ಕಡ್ಲಿಮಟ್ಟಿ, ಅಮೀನಸಾಬ ನದ್ಾ, ಸರ್ಕಾರಿ ಉರ್ದು ಶಾಲಾ ಶಿಕ್ಷಕಿ ಎ.ಎಂ.ಪಟೇಲ್, ಆಶಾ ಕಾರ್ಯಕರ್ತೆಯರು ಇದ್ದರು.

    ರಾಷ್ಟ್ರೀಯ ಅಭಿಯಾನದಡಿ ಸರ್ಕಾರಿ ಶಾಲೆ ಮಕ್ಕಳ ರಕ್ತ ತಪಾಸಣೆ ಮಾಡಲಾಗುತ್ತಿದೆ. ಇದು ಯಾವುದೇ ರೋಗ ಪರಿಶೀಲನೆ ಕಾರ್ಯವಲ್ಲ. ಮಕ್ಕಳ ರಕ್ತದ ಗುಂಪು ತಿಳಿಯುವುದಾಗಿದೆ.
    ಜಿ.ಎಸ್. ಗಲಗಲಿ ತಾಲೂಕು ವೈದ್ಯಾಧಿಕಾರಿ ಜಮಖಂಡಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts