More

    ತಣ್ಣಗಾಗದ ಉದ್ವಿಗ್ನತೆ; ಮುಂದುವರಿದ ಸೈನಿಕರ ಜಮಾವಣೆ

    ನವದೆಹಲಿ: ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಿ ಪಡೆಗಳ ನಡುವೆ ಸುಮಾರು ಒಂದು ತಿಂಗಳಿಂದ ಉಂಟಾಗಿರುವ ಬಿಗುವಿನ ಪರಿಸ್ಥಿತಿ ಶಮನವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಭಾರತದ ಭೂಸೇನೆ ಉನ್ನತ ಅಧಿಕಾರಿಗಳು ‘ವಾಸ್ತವ ಪರಿಸ್ಥಿತಿ’ ಅವಲೋಕನ ನಡೆಸಿದ್ದು ಮಿಲಿಟರಿ ಕಾರ್ಯಾಚರಣೆಗಳು ಮತ್ತು ಬೇಹುಗಾರಿಕೆ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

    ಪೂರ್ವ ಲಡಾಖ್​ನ ಹೆಚ್ಚು ಎತ್ತರದ ಪ್ರದೇಶದಲ್ಲಿ ಕಾರ್ಯಾ ಚರಿಸಲು ಸಮರ್ಥವಾದ ಹಾಗೂ ಅಂಥ ವಾತಾವರಣಕ್ಕೆ ಒಗ್ಗಿಕೊಂಡ ಪಡೆಗಳು ಭಾರತದಲ್ಲಿವೆ. 3488 ಕಿಮೀ ಉದ್ದದ ನೈಜ ನಿಯಂತ್ರಣ ರೇಖೆಗುಂಟ (ಎಲ್​ಎಸಿ) ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಂಥ ಸೆಕ್ಟರ್​ಗಳಲ್ಲಿ ತುಕಡಿಗಳನ್ನು ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ಹೇಳಿವೆ.

    ಶಸ್ತ್ರಾಸ್ತ್ರ ದಾಸ್ತಾನು ಕುರಿತೂ ಚರ್ಚೆ: ಭೂಸೇನೆಯ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ನೇತೃತ್ವದಲ್ಲಿ ಕಮಾಂಡರ್​ಗಳ ಸಭೆ ನಡೆದಿದ್ದು, ಆರು ಕಾರ್ಯಾಚರಣೆ ವಿಭಾಗಗಳು ಮತ್ತು ಒಂದು ತರಬೇತಿ ವಿಭಾಗದ ಮುಖ್ಯಸ್ಥರು ಇದರಲ್ಲಿ ಭಾಗಿಯಾಗಿದ್ದಾರೆ. ಸೇನಾ ಪಡೆ ಉನ್ನತ ಅಧಿಕಾರಿಗಳು, ಶಸ್ತ್ರಾಸ್ತ್ರ, ಮದ್ದುಗುಂಡಿನ ದಾಸ್ತಾನು ಮತ್ತು ಕಾರ್ಯಾಚರಣೆ ವಾಹನಗಳ ಕುರಿತೂ ರ್ಚಚಿಸಿದರು ಎನ್ನಲಾಗಿದೆ.

    ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್ ಟಾಸ್ ಕೇಳುವಾಗ ಧೋನಿ ಗೊಂದಲಕ್ಕೆ ಕಾರಣವೇನು..?

    3 ಪ್ರದೇಶಗಳಲ್ಲಿ ಸೇನೆ ಮುಖಾಮುಖಿ: ಚುಶುಲ್ ಮತ್ತು ದೌಲತ್ ಬೇಗ್ ಓಲ್ಡೀ (ಡಿಬಿಓ)ಯಲ್ಲಿ ಭಾರತ ನಡೆಸುತ್ತಿರುವ ರಸ್ತೆ ಮತ್ತು ಸೇತುವೆ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂಬುದು ಚೀನಾ ಸೇನೆಯ ಬೇಡಿಕೆ. ಆದರೆ ಚೀನಿಯರ ಬೇಡಿಕೆಗೆ ಮಣಿಯದೇ ಅವರನ್ನು ಹಿಮ್ಮೆಟ್ಟಿಸಿ, ಗಡಿಯಲ್ಲಿ ಯಥಾಸ್ಥಿತಿ ಕಾಪಾಡುವುದು ಭಾರತದ ತಂತ್ರವಾಗಿದೆ. ಹೀಗಾಗಿ ಭಾರತ ಮತ್ತು ಚೀನಿ ಪಡೆಗಳು ಗಲ್ವಾನ್ ಕಣಿವೆ ಪ್ರದೇಶದ ಮೂರು ಜಾಗಗಳಲ್ಲಿ (ಅಂದರೆ ಕಾವಲು ಪಾಯಿಂಟ್ 14 ಹಾಗೂ 15 ಮತ್ತು ಗಂಗಾ ಪೋಸ್ಟ್) ಮುಖಾಮುಖಿಯಾಗಿ ನಿಂತಿವೆ. ಪಾಂಗಾಂಗ್ ತ್ಸೊದ ಉತ್ತರ ದಂಡೆ ಮತ್ತು ಡೆಮ್ೊಕ್​ಗಳಲ್ಲಿ ಕೂಡ ಉಭಯ ಕಡೆಗಳ ಸೈನಿಕರು ಸಜ್ಜಾಗಿ ನಿಂತಿದ್ದಾರೆ. ಭಾರತದ ಭೂಭಾಗದ ಒಂದರಿಂದ 3 ಕಿಲೋಮೀಟರ್ ಒಳಗೆ ಈ ಎರಡು ಜಾಗಗಳಿವೆ.

    ಹೆಚ್ಚುವರಿ ಪಡೆಗಳು: ಯೋಧರಿಗೆ ಬೆಂಬಲ ನೀಡುವ ಸಲುವಾಗಿ ಉಭಯ ಕಡೆಗಳು ಹೆಚ್ಚುವರಿ ಪಡೆಗಳನ್ನು ರವಾನಿಸಿವೆ. ಭಾರಿ ವಾಹನಗಳು, ನಿಗಾ ಉಪಕರಣಗಳನ್ನು ಕೂಡ ಸಾಗಿಸಲಾಗಿದೆ.

    ಸಕಾಲಿಕ ಕ್ರಮ: ಮೇ ತಿಂಗಳ ಮೊದಲ ವಾರದಲ್ಲಿ ಭಾರತದ ಪ್ರದೇಶದ ಒಳಗೆ ನುಸುಳಿ ಅತಿಕ್ರಮಿಸಲು ಚೀನಿ ಸೇನೆ ಸಜ್ಜಾಗಿದ್ದವು. ಆದರೆ ಹೆಚ್ಚುವರಿ ಪಡೆಗಳನ್ನು ಅಲ್ಲಿಗೆ ಕಳಿಸಿ ಅವರ ಪ್ರಯತ್ನಗಳನ್ನು ವಿಫಲಗೊಳಿಸಲಾಯಿತು. ಸಂಘರ್ಷದ ಸ್ಥಳಗಳಲ್ಲಿ ಸುಮಾರು 1200- 1500 ಯೋಧರು ತಾತ್ಕಾಲಿಕ ಬಂಕರ್​ಗಳನ್ನು ರಚಿಸಿದ್ದಾರೆ. ಸುಮಾರು 5000 ಯೋಧರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

    ಇದನ್ನೂ ಓದಿ: ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಇಡೀ ಅಮೆರಿಕವೇ ತಿರುಗಿ ಬಿದ್ದಿರುವುದೇಕೆ?

    ಟ್ರಂಪ್ ಪ್ರಸ್ತಾಪ ಚೀನಾ ತಿರಸ್ಕಾರ: ಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿದೆ. ನಮ್ಮೊಳಗಿನ ಭಿನ್ನಾಭಿಪ್ರಾಯಗಳ ಪರಿಹಾರಕ್ಕೆ ಮೂರನೆಯವರು ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ಚೀನಾ ಖಂಡತುಂಡವಾಗಿ ಹೇಳಿದೆ. ಉಭಯ ದೇಶಗಳು ಮಾತುಕತೆ, ಸಮಾಲೋಚನೆಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಮರ್ಥರಿದ್ದೇವೆ. ಮೂರನೇ ಪಕ್ಷದವರ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಚೀನಾ ಹೇಳಿದೆ.

    ಹೊರಬರಲು ಹೆದರಿ ಪುಟ್ಟ ಮನೆಯಲ್ಲಿ ಮುದುರಿ ಕುಳಿತಿದ್ದಾರೆ ಇವರು; ಭಯಕ್ಕೆ ಕಾರಣ ಅಳುತ್ತ ಹೇಳಿದ್ದಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts