More

    ಬೈದೆಬೆಟ್ಟು ಕಿರು ಸೇತುವೆ ತಡೆಗೋಡೆ ಕುಸಿತ

    ಕೊಕ್ಕರ್ಣೆ: 38ನೇ ಕಳ್ತೂರು ಕೆಂಜೂರು ಗ್ರಾಮ ಪಂಚಾಯಿತಿ ಮತ್ತು ಹೊಸೂರು ಕರ್ಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯಾಪ್ತಿಯ ಬೈದೆಬೆಟ್ಟು ಶಾರದಾ ಹೊಳೆಗೆ ಅಡ್ಡಲಾಗಿ ನಿರ್ಮಿಸಲಾದ ಸಂಪರ್ಕ ಕಿರು ಸೇತುವೆ ಸಹಿತ ಕಿಂಡಿ ಅಣೆಕಟ್ಟು ಅಪಾಯಕಾರಿ ಸ್ಥಿತಿಯಲ್ಲಿದೆ.
    ಎರಡು ಗ್ರಾಮದ ಜನರ ಉಪಯೋಗಕ್ಕಾಗಿ ನಿರ್ಮಿಸಿದ ಈ ಕಿಂಡಿ ಅಣೆಕಟ್ಟು ನೀರಿನಿಂದ ರೈತರು ಭತ್ತ ಇತ್ಯಾದಿ ಕೃಷಿ ಮಾಡುತ್ತಿದ್ದರು. ಇತ್ತೀಚೆಗೆ ಸಮಸ್ಯೆಗಳಿಂದ ಒಂದೇ ಬೆಳೆ ಬೆಳೆಯುತ್ತಿದ್ದಾರೆ. ನಾಲ್ಕು ಸಿಮೆಂಟ್ ಪಿಲ್ಲರ್‌ಗಳನ್ನು ಕಿರು ಸೇತುವೆ ಹೊಂದಿದ್ದು ಎರಡು ಭಾಗಗಳಲ್ಲಿ ಶಿಲೆ ಕಲ್ಲುಗಳಿಂದ ನಿರ್ಮಿಸಿದ ತಡೆಗೋಡೆ ಸಂಪೂರ್ಣ ಕುಸಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಎರಡು ಪಿಲ್ಲರ್ ಮಧ್ಯೆ ಮರಮಟ್ಟು, ಕಸಕಡ್ಡಿ ಸಂಗ್ರಹವಾಗಿದ್ದು ಅದನ್ನು ತೆರವುಗೊಳಿಸದ ಕಾರಣ ನೀರಿನ ಹರಿಯುವಿಕೆ ಕಷ್ಟವಾಗಿದೆ. ಕಿರುಸೇತುವೆ ಶಿಥಿಲಗೊಂಡ ಕಾರಣ ಈ ಭಾಗದ 150ಕ್ಕೂ ಹೆಚ್ಚಿನ ಕುಟುಂಬಗಳಿಗೆ ಸಮಸ್ಯೆಯಾಗಿದೆ.

    ಎರಡು ಗ್ರಾಮದ ಜನರನ್ನು ಸಂಪರ್ಕಿಸಲು ಹಲವಾರು ವರ್ಷಗಳ ಹಿಂದೆ ನಿರ್ಮಿಸಿದ ಈ ಕಿರು ಸೇತುವೆ ಅಪಾಯಕಾರಿ ಸ್ಥಿತಿಯಲ್ಲಿದೆ. ಜನಪ್ರತಿನಿಧಿಗಳು ಗ್ರಾಮ ಪಂಚಾಯಿತಿ, ಇಲಾಖಾ ಅಧಿಕಾರಿಗಳು ಗಮನ ಹರಿಸಬೇಕು. ಶೀಘ್ರ ಸೂಕ್ತ ವ್ಯವಸ್ಥೆ ಮಾಡಬೇಕು.
    ಅಶ್ವಿನ್ ಪೈ ಬೈದೆಬೆಟ್ಟು ಸ್ಥಳೀಯ ನಿವಾಸಿ

    ಎರಡೂ ಗ್ರಾಮದ ಸಂಪರ್ಕ ಕೊಂಡಿಯಾದ ಈ ಕಿರು ಸೇತುವೆಗೆ ಜಿಲ್ಲಾ ಪಂಚಾಯಿತಿಯಿಂದ ಈ ಬಾರಿಯ ಕ್ರಿಯಾಯೋಜನೆ ಮುಗಿದಿದ್ದು ಶಾಸಕರ ಅನುದಾನದಲ್ಲಿ ಈ ಸೇತುವೆಗೆ ಕಾಯಕಲ್ಪ ನೀಡಲು ಶಾಸಕರೊಂದಿಗೆ ಚರ್ಚಿಸುತ್ತೇವೆ.
    ಸುಧಾಕರ ಶೆಟ್ಟಿ ಮೈರ್ಮಾಡಿ ಜಿಲ್ಲಾ ಪಂಚಾಯಿತಿ ಸದಸ್ಯರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts