More

    ಸರ್ಕಾರಿ ಭೂಮಿ ಮರಳಿ ಪಡೆಯಲು ಶಾಸಕ ಟೆಂಗಿನಕಾಯಿ ಸೂಚನೆ

    ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಪ್ರಗತಿ ಕಾಲನಿಯ 38 ಗುಂಟೆ ಖಾಲಿ ಜಾಗವನ್ನು ಮರಳಿ ಪಡೆದು, ಹಸಿರು ವಲಯವನ್ನಾಗಿ ಘೋಷಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ಸೂಚಿಸಿದ್ದಾರೆ.

    ಪ್ರಗತಿ ಕಾಲನಿ ನಿವಾಸಿಗಳ ಸಂಘ, ಹು-ಧಾ ಮಹಾನಗರ ಪಾಲಿಕೆ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನೋಂದಣಿ ಅಧಿಕಾರಿಗಳೊಂದಿಗೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

    ಈ ಹಿಂದೆ 1979 ರಲ್ಲಿ ಗ್ರೀನ್ ಬೆಲ್ಟ್ ಇದ್ದ ನಿವೇಶನವನ್ನು ಕೆಲ ಖಾಸಗಿ ವ್ಯಕ್ತಿಗಳ ಹೆಸರಿಗೆ ನೋಂದಾಯಿಸುರುವುದು ತಪು್ಪ. ಸ್ಥಳೀಯರು ಸುಮಾರು ವರ್ಷಗಳಿಂದ ಸರ್ಕಾರಿ ಜಾಗೆಯನ್ನು ಪಡೆದುಕೊಳ್ಳಬೇಕೆಂದು ಹೋರಾಟ ನಡೆಸುತ್ತ ಬಂದಿದ್ದಾರೆ. ಇದನ್ನು ಪರಿಗಣಿಸಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ಈ ಭೂಮಿಯನ್ನು ಪಡೆದುಕೊಂಡು ಸರ್ಕಾರಿ ಆಸ್ತಿಯನ್ನು ಪರಬಾರೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

    ಈ ಜಾಗ 1968 ರಲ್ಲಿ ಹಸಿರು ವಲಯವೆಂದು ನಮೂದಿಸಲ್ಪಟ್ಟಿದೆ. ಅದರ ಅನುಸಾರ ಘೊಷಿಸಬೇಕು ಎಂದುಅಧಿಕಾರಿಗಳಿಗೆ ಶಾಸಕ ಟೆಂಗಿನಕಾಯಿ ನಿರ್ದೇಶನ ನೀಡಿದರು.

    ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಎಡಿಆರ್​ಎಲ್ ಅಧಿಕಾರಿ ಮೋಹನ ಶಿವಣ್ಣವರ, ಸಹಾಯಕ ಎಡಿಆರ್​ಎಲ್ ಅಧಿಕಾರಿ ತನ್ವಿನ್ ಢಾಂಗೆ, ಹುಡಾ ಆಯುಕ್ತ ಸಂತೋಷ ಬಿರಾದಾರ, ಪಾಲಿಕೆ ವಲಯ ಸಹಾಯಕ ಆಯುಕ್ತ ಗಿರೀಶ ತಳವಾರ, ಪಾಲಿಕೆ ಸದಸ್ಯ ಕಿಶನ್ ಬೆಳಗಾವಿ, ಪ್ರಗತಿ ಕಾಲನಿ ಸಂಘದ ಸುರೇಶ ಪಾಂಡೆ, ಸುರಜ ಔರಾದಿ, ರವಿ ಮುದರಡ್ಡಿ, ಸತೀಶ ಕಮ್ಮಾರ, ವಿ.ಎಚ್. ಶಿರೋಳ, ರವಿ ನಾಯಕ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts