More

    ಎಳನೀರಿಗೆ ಹೆಚ್ಚಿದ ಬೇಡಿಕೆ; ಬೆಂಗಳೂರಿನಲ್ಲಿ ಏರುತ್ತಲೇ ಇದೆ ಎಳನೀರು ದರ!

    ರಾಮ ಕಿಶನ್​ ಕೆ.ವಿ. ಬೆಂಗಳೂರು
    ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಜನ ಹೈರಾಣಾಗುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ದಣಿವಾರಿಸಿಕೊಳ್ಳಲು ಸಹಜವಾಗಿಯೇ ಜನರು ಎಳನೀರಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ನಗರಕ್ಕೆ ಬೇಡಿಕೆ ಪ್ರಮಾಣದಷ್ಟು ಎಳನೀರು ಪೂರೈಕೆಯಾಗದೆ, ಬೆಲೆ ಗಗನಮುಖಿಯಾಗುತ್ತಿದೆ. ಕೆಲ ಏರಿಯಾಗಳಲ್ಲಿ ಕೇಳಿದಷ್ಟು ಹಣ ಕೊಡುತ್ತೇವೆಂದರೂ ಎಳನೀರು ಸಿಗದ ಪರಿಸ್ಥಿತಿ ಉದ್ಭವಿಸಿದೆ.

    ತುಮಕೂರು, ಹಾಸನ, ಮೈಸೂರು, ಮಂಡ್ಯ, ದಣ ಕನ್ನಡ, ಉಡುಪಿ ಸೇರಿ ಕೆಲ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಿದ್ದರೂ ಬೆಂಗಳೂರಿನಲ್ಲಿ ಎಳನೀರಿನ ಅಭಾವ ಸೃಷ್ಟಿಯಾಗಿದೆ. ಹೀಗಾಗಿ ವಾರದಿಂದ ವಾರಕ್ಕೆ ದರ ಏರಿಕೆಯಾಗುತ್ತಿದೆ. ಇದಕ್ಕೆ ಕಾರಣ, ಮದ್ದೂರು ಎಪಿಎಂಸಿಯಿಂದ ಹೊರರಾಜ್ಯಗಳಿಗೆ ಎಳನೀರು ಸರಬರಾಜಾಗುತ್ತಿರುವುದು. ಹೆಚ್ಚಿನ ಲಾಭ ಮಾಡಿಕೊಳ್ಳುವ ಮಧ್ಯವರ್ತಿಗಳ ದುರಾಸೆಯಿಂದ ಈ ಸ್ಥಿತಿ ಉದ್ಭವಿಸಿದೆ.

    ಉತ್ತರ ಭಾರತದ ರಾಜ್ಯಗಳಲ್ಲಿ ಪ್ರಸಕ್ತ ವರ್ಷ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಮಹಾರಾಷ್ಟ್ರ, ದೆಹಲಿ, ಪುಣೆ, ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ಎಳನೀರಿಗೆ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ಮಧ್ಯವರ್ತಿಗಳು ಹೊರರಾಜ್ಯಗಳಿಗೆ ಮಾರಾಟಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬೆಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ತಲುಪಬೇಕಿದ್ದ ಎಳನೀರು ದೊಡ್ಡ ದೊಡ್ಡ ಲಾರಿಗಳಲ್ಲಿ ಹೊರರಾಜ್ಯಗಳಿಗೆ ಸಾಗಣೆಯಾಗುತ್ತಿದೆ ಎಂದು ನಗರದ ವ್ಯಾಪಾರಿಗಳು ತಿಳಿಸಿದ್ದಾರೆ.

    ಏಪ್ರಿಲ್​ ಮೊದಲ ವಾರದವರೆಗೆ 40-45 ರೂ. ಇದ್ದ ಎಳನೀರು ದರ, ಕಳೆದ ಮೂರ್ನಾಲ್ಕು ದಿನದಿಂದ ಏಕಾಏಕಿ ಏರಿಕೆಯಾಗಿದೆ. ನಗರದ ಬಹುತೇಕ ಭಾಗಗಳಲ್ಲಿ 50-55 ರೂ.ಗೆ ಮಾರಾಟವಾಗುತ್ತಿದೆ.

    ಇಷ್ಟೊಂದು ಬೆಲೆಯಾ?

    ಗ್ರಾಹಕರು ಬಂದೊಡನೆ ‘ಇಷ್ಟೊಂದು ಬೆಲೆಯಾ’ ಎಂದು ಪ್ರಶ್ನಿಸುತ್ತಾರೆ. 30-40 ರೂ. ಆಸುಪಾಸಿನಲ್ಲಿ ನಮಗೆ ಎಳನೀರು ಲಭ್ಯವಾಗುತ್ತಿದೆ. 50 ರೂ.ಗೆ ಮಾರುವುದು ಅನಿವಾರ್ಯವಾಗಿದೆ. ಉಷ್ಣತೆ ಹೆಚ್ಚಿರುವ ಪರಿಣಾಮ ಎಳನೀರು ಬೇಗನೆ ಒಣಗಿಹೋಗುತ್ತದೆ. ಹೀಗಾಗಿ ನಷ್ಟ ಉಂಟಾಗುವುದು ಬೇಡವೆಂಬ ಕಾರಣಕ್ಕೆ ಸಣ್ಣ ಗಾತ್ರ ಹಾಗೂ ಸ್ವಲ್ಪ ಒಣಗಿ ಹೋಗಿರುವ ಎಳನೀರನ್ನು 30-35 ರೂ.ಗೂ ಮಾರುತ್ತಿದ್ದೇವೆ. ಇಂತಹ ಪರಿಸ್ಥಿತಿ ಗ್ರಾಹಕರಿಗೆ ಅರ್ಥವಾಗುತ್ತಿಲ್ಲ ಎಂಬುದು ಕತ್ತರಿಗುಪ್ಪೆ ವ್ಯಾಪಾರಿ ಸೋಮಶೇಖರ್​ ಅಳಲು.

    ಬಾಟಲ್​ನಲ್ಲಿ ಮಾರಾಟ!

    ದೆಹಲಿ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಕಳೆದ ಒಂದು ತಿಂಗಳಿನಿಂದ ಅಧಿಕ ಪ್ರಮಾಣದಲ್ಲಿ ರಾಜ್ಯದ ಎಳನೀರು ರ್ತಾಗುತ್ತಿವೆ. ಇಲ್ಲಿನ ಎಳನೀರಿನ ರುಚಿ ಚೆನ್ನಾಗಿರುವುದರಿಂದ ಬೇಡಿಕೆಯೂ ಹೆಚ್ಚಿದೆ. ಅಲ್ಲಿ 70-100 ರೂ. ವರೆಗೆ ಮಾರಾಟವಾಗುತ್ತಿವೆ. ಅಲ್ಲಿನ ಕೆಲ ವ್ಯಾಪಾರಿಗಳು ಮಧ್ಯವರ್ತಿಗಳಿಂದ ಎಳನೀರನ್ನು ಖರೀದಿಸಿ, ಬಳಿಕ ನೀರನ್ನು 200 ಎಂಎಲ್​ನ ಪ್ಲಾಸ್ಟಿಕ್​ ಬಾಟಲಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದಾರೆ.

    ಹೊರರಾಜ್ಯದ ದಲ್ಲಾಳಿಗಳು

    ಮದ್ದೂರು ಮಂಡಿಯಿಂದ ಎಳನೀರು ಖರೀದಿಸಿ ತರುತ್ತೇನೆ. ಶುಕ್ರವಾರ ಹೋಗಿದ್ದಾಗ ಚಿತ್ರಣವೇ ಬದಲಾಗಿದೆ. ಹೊರರಾಜ್ಯದ ದಲ್ಲಾಳಿಗಳು ಅಲ್ಲೇ ಬೀಡುಬಿಟ್ಟಿದ್ದರು. ರೈತರು ಎಳನೀರು ತಂದು ಹಾಕುತ್ತಿದ್ದಂತೆ, ಕೇಳಿದಷ್ಟು ಹಣ ನೀಡಿ ಲಾರಿಗಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಎಳನೀರು ಸಿಗದಂತಾಗಿದೆ ಎನ್ನುತ್ತಾರೆ ನಾಯಂಡಹಳ್ಳಿ ನಿವಾಸಿ ಪ್ರಕಾಶ್​.

    ಎಳನೀರಿಗೆ ಬೇಡಿಕೆ ಹೆಚ್ಚಿದ್ದು, 50 ರೂ.ಗೆ ಮಾರಾಟವಾಗುತ್ತಿವೆ. ಮದ್ದೂರು ಮಂಡಿಯಿಂದ ಮಹಾರಾಷ್ಟ್ರ, ಹೈದರಾಬಾದ್​, ದೆಹಲಿಗೆ ಪೂರೈಕೆಯಾಗುತ್ತಿದೆ. ನಮಗೆ ಎಳನೀರು ಪೂರೈಕೆ ಸ್ಥಗಿತಗೊಂಡಿರುವುದರಿಂದ ಮೂರು ದಿನದಿಂದ ವ್ಯಾಪಾರ ಸ್ಥಗಿತಗೊಳಿಸಿದ್ದೇವೆ.
    -ರಾಮಣ್ಣ, ಕತ್ತರಿಗುಪ್ಪೆ

    ಚನ್ನರಾಯಪಟ್ಟಣದಲ್ಲಿ ತೆಂಗಿನ ತೋಟವಿದೆ. ಬೇಡಿಕೆ ಹೆಚ್ಚುತ್ತಿದ್ದಂತೆ, ದಲ್ಲಾಳಿಗಳು ಬಂದು 21 ರೂ. ನೀಡಿ ಎಳನೀರು ಕೊಯ್ಯುತ್ತಿದ್ದಾರೆ. ದಲ್ಲಾಳಿಗಳ ಮಾತಿಗೆ ಒಪು$್ಪವ ಬಹುತೇಕ ರೈತರು, ಅವರು ನೀಡಿದಷ್ಟೇ ಹಣ ಪಡೆದುಕೊಳ್ಳುತ್ತಿದ್ದಾರೆ. ನಗರದಲ್ಲಿ ಯಾವ ಮೊತ್ತಕ್ಕೆ ಎಳನೀರು ಮಾರಾಟವಾಗುತ್ತಿದೆ ಎಂಬ ಬಗ್ಗೆ ರೈತರಿಗೆ ಮಾಹಿತಿ ಇಲ್ಲವಾಗಿದೆ.
    -ಬಲರಾಮಗೌಡ, ಗಿರಿನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts