More

    ಬೆಂಗಳೂರು ಜಲಮಂಡಳಿಯಿಂದ 20 ಲಕ್ಷ ರೂ. ದಂಡ ವಸೂಲಿ!

    ಬೆಂಗಳೂರು: ನಗರದಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸಿರುವ ಪ್ರಕರಣಕ್ಕೆ ಸಂಬಂಧಿಸಿ ತಿಂಗಳ ಅವಧಿಯಲ್ಲಿ 407 ಜನರಿಂದ 20.35 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಜಲಮಂಡಳಿ ಮಾ. 10ರಂದು ಆದೇಶ ಹೊರಡಿಸಿತ್ತು. ನಿಯಮ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಿತ್ತು. ಹೀಗಿದ್ದೂ ನಗರದ ವಿವಿಧ ಭಾಗಗಳಲ್ಲಿ ಜನರು ನೀರು ಪೋಲು ಮಾಡುತ್ತಿರುವ ಟನೆ ಮರುಕಳಿಸುತ್ತಿರುವುದು ಕಂಡುಬಂದಿದೆ.

    ಬಹುತೇಕ ಜನರು ವಾಹನ ತೊಳೆಯಲು ಹಾಗೂ ಹೂದೋಟ ನಿರ್ವಹಣೆಗೆ ಕುಡಿಯುವ ನೀರನ್ನು ಬಳಸಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ದಂಡ ವಿಧಿಸಲಾಗಿದೆ. ಮತ್ತೆ ಮತ್ತೆ ನೀರು ಪೋಲು ಮಾಡುವುದು ಮರುಕಳಿಸಿದರೆ 5 ಸಾವಿರ ರೂ. ದಂಡದೊಂದಿಗೆ ಹೆಚ್ಚುವರಿಯಾಗಿ ನಿತ್ಯ 500 ರೂ. ದಂಡ ವಿಧಿಸಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts