More

    ಸ್ವರ್ಗದ ಬಾಗಿಲು ತೆರೆಯಲು ತಯಾರಿ ಶುರು; ವೈಕುಂಠ ಏಕಾದಶಿಗೆ ಸಜ್ಜಾದ ದೇವಾಲಯಗಳು

    ಬೆಂಗಳೂರು: ಪುಷ್ಯ ಮಾಸದ ಶುಕ್ಲಪಕ್ಷ ಸೋಮವಾರ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದಾದ್ಯಂತ ವೆಂಕಟೇಶ್ವರ ಸ್ವಾಮಿ ದೇವಾಲಯಗಳು ವಿಶೇಷ ಪೂಜೆ ಹಾಗೂ ಉತ್ಸವಗಳಿಗೆ ಸಜ್ಜಾಗಿವೆ. ದೇಗುಲದವರು ವೈಕುಂಠ ದ್ವಾರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರೆ, ಇತ್ತ ಭಕ್ತರು ದೇವರ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿದ್ದಾರೆ.

    ಈ ಶುಭ ದಿನದಂದು ವೈಕುಂಠದ ಉತ್ತರದ ಬಾಗಿಲಿನ ಮೂಲಕ ಶ್ರೀಮನ್ನಾರಾಯಣ ದೇವರು ಮೂರು ಕೋಟಿ ದೇವಾನುದೇವತೆಗಳಿಗೆ ದರುಶನ ನೀಡಿದನು ಎಂಬ ಪ್ರತೀತಿ ಇದೆ. ಹಾಗಾಗಿ ಈ ದಿನದಂದು ವಿಷ್ಣು ದೇವಾಲಯಗಳಲ್ಲಿ ವೈಕುಂಠ ದ್ವಾರವನ್ನು ನಿರ್ಮಿಸಿ, ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

    ನಗರದ ಕೋಟೆ ವೆಂಕಟೇಶ್ವರಸ್ವಾಮಿ ದೇವಾಲಯ, ವೈಯಾಲಿಕಾವಲ್‌ನ ಟಿಟಿಡಿ, ರಾಜಾಜಿನಗರ ಹಾಗೂ ವಸಂತಪುರದ ಇಸ್ಕಾನ್ ದೇವಾಲಯಗಳು, ಮಹಾಲಕ್ಷ್ಮೀ ಲೇಔಟ್‌ನ ಶ್ರೀನಿವಾಸ ದೇವಸ್ಥಾನ, ಶ್ರೀನಿವಾಸನಗರದ ಲಕ್ಷ್ಮೀವೆಂಕಟೇಶ್ವರ ದೇವಾಲಯ, ಜೆ.ಪಿ.ನಗರ ತಿರುಮಲಗಿರಿ ಲಕ್ಷ್ಮೀವೆಂಕಟೇಶ್ವರಸ್ವಾಮಿ ದೇವಸ್ಥಾನ, ಮಾಗಡಿ ರಸ್ತೆಯ ಎಂ.ಜಿ.ರೈಲ್ವೆ ಕಾಲನಿಯ ವೆಂಕಟೇಶ್ವರಸ್ವಾಮಿ ದೇವಸ್ಥಾನ ಸೇರಿ ನಗರದಾದ್ಯಂತ ವಿಷ್ಣು ದೇವಾಲಯಗಳಲ್ಲಿ ಸಿದ್ಧತೆ ಭರದಿಂದ ಸಾಗಿದೆ.

    2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಶೀರ್ವಾದದಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಗೆ ಜನರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, ಜೆಡಿಎಸ್​ ಅಧಿಕಾರ ಹಿಡಿದು ಎಚ್.ಡಿ. ಕುಮಾರಸ್ವಾಮಿ ಮುಂದಿನ ಸಿಎಂ ಆಗಲಿದ್ದಾರೆ.
    | ಟಿ.ಎ. ಶರವಣ, ವಿಧಾನ ಪರಿಷತ್ ಸದಸ್ಯ

    ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವೆಂಕಟೇಶ್ವರ ಸ್ವಾಮಿ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವೈಕುಂಠ ದ್ವಾರದ ಪೂಜೆ, ಅಷ್ಟೋತ್ತರ ಶತನಾಮಾವಳಿ ಸೇವೆ, ಮಂತ್ರ ಪುಷ್ಪ ಸೇವೆ, ಅಷ್ಟಾವಧಾನ ಸೇವೆಗಳನ್ನು ನಡೆಯಲಿದ್ದು, ಕೀರ್ತನೆ, ದೇವರನಾಮ ಗಾಯನ ಸೇರಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

    ಏಕಾದಶಿ ಉಪವಾಸ: ಏಕಾದಶಿಯಂದು ವಿಷ್ಣು ಭಕ್ತರು ಉಪವಾಸ ನಡೆಸುತ್ತಾರೆ. ಇದರಿಂದ ದೇವರ ಅನುಗ್ರಹದೊಂದಿಗೆ ಹೆಚ್ಚು ಪುಣ್ಯ ದೊರೆಯಲಿದೆ ಎಂಬ ನಂಬಿಕೆ ಭಕ್ತರದು. ಕೆಲವರು ಪೂರ್ಣ ಪ್ರಮಾಣದಲ್ಲಿ ಉಪವಾಸ ಮಾಡಿದರೆ, ಆರೋಗ್ಯ ಸಮಸ್ಯೆ ಇರುವವರು ಎಳನೀರು ಮುಂತಾದ ದ್ರವಾಹಾರ ಸೇವಿಸಿ ವ್ರತ ಆಚರಿಸುತ್ತಾರೆ.

    ಒಂದು ಲಕ್ಷ ಲಡ್ಡು ವಿತರಣೆ: ವೈಕುಂಠ ಏಕಾದಶಿಯ ಪ್ರಯುಕ್ತ ಶರವಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ಬಾರಿಯಂತೆ ಈ ವರ್ಷವೂ 1 ಲಕ್ಷ ಲಡ್ಡು ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಶ್ರೀ ಸಾಯಿ ಪಾರ್ಟಿ ಹಾಲ್ ಅವರಣದಲ್ಲಿ ಲಡ್ಡು ತಯಾರಿಸಲಾಗುತ್ತಿದ್ದು ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಲಡ್ಡು ಪ್ರಸಾದದ ಪ್ಯಾಕಿಂಗ್ ವ್ಯವಸ್ಥೆಗೆ ಚಾಲನೆ ನೀಡಿದ ಅವರು, 30 ಬಾಣಸಿಗರು ಕಳೆದ ಒಂದು ವಾರದಿಂದ ಒಂದು ಲಕ್ಷ ಲಡ್ಡು ಪ್ರಸಾದ ತಯಾರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಸಾದದ ಪ್ಯಾಕಿಂಗ್ ಮುಗಿದ ಕೂಡಲೇ ಭಾನುವಾರ ನಗರದ ವೆಂಕಟೇಶ್ವರ ದೇವಾಲಯಗಳಿಗೆ ಕಳುಹಿಸಲಾಗುವುದು ಎಂದು ಹೇಳಿದರು.

    5 ಕೊಲೆ ಮಾಡಿದ್ದವ 28 ವರ್ಷಗಳ ಬಳಿಕ ಸಿಕ್ಕಿಬಿದ್ದ!; 3 ತಿಂಗಳಿಂದ 5 ವರ್ಷದೊಳಗಿನ 4 ಮಕ್ಕಳನ್ನು ಹತ್ಯೆ ಮಾಡಿದ್ದ!

    ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts