More

    ದೇವಳ ಖಾಸಗಿ ನಿರ್ವಹಣೆ ಮಾದರಿ

    ಕೋಟ: ರಾಜ್ಯದಲ್ಲಿ 34 ಸಾವಿರಕ್ಕಿಂತಲೂ ಹೆಚ್ಚು ದೇವಸ್ಥಾನಗಳು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿವೆ. ಇವುಗಳಲ್ಲಿ ಕೆಲವು ಕ್ಷೇತ್ರಗಳು ಸ್ವಚ್ಛವಾಗಿ, ಅಭಿವೃದ್ಧಿ ಹೊಂದಿ ಮಾದರಿ ಕ್ಷೇತ್ರಗಳೆನಿಸಿವೆ. ಇಲಾಖೆಗಿಂತ ಖಾಸಗಿಯವರೇ ದೇವಾಲಯಗಳ ನಿರ್ವಹಣೆ ಚೆನ್ನಾಗಿ ಮಾಡಬಲ್ಲರು. ಕಾರ್ತಟ್ಟು ಅಘೋರೇಶ್ವರ ದೇವಾಲಯ ಈ ಸಾಲಿಗೆ ಸೇರುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ಕಾರ್ತಟ್ಟು ಚಿತ್ರಪಾಡಿ ಶ್ರೀ ಅಘೋರೇಶ್ವರ ದೇವಸ್ಥಾನ ಅಷ್ಟಬಂಧ ಪುನಃಪ್ರತಿಷ್ಠಾಪನೆ- ಬ್ರಹ್ಮಕಲಶೋತ್ಸವ ಅಂಗವಾಗಿ ಮಂಗಳವಾರ ರಾತ್ರಿ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
    ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಉದ್ಯಮಿ ಕಿದಿಯೂರು ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳ ಮಾಜಿ ಅಧ್ಯಕ್ಷ ಅನಂತಪದ್ಮನಾಭ ಐತಾಳ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಲತಾ ಹೆಗ್ಡೆ, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿದರು. ಉದ್ಯಮಿಗಳಾದ ಅರವಿಂದ ಪ್ರಭು, ರಮೇಶ್ ನಾಯರಿ, ಡಾ.ವಿಷ್ಣುಮೂರ್ತಿ ಐತಾಳ, ಪಟ್ಟಣ ಪಂಚಾಯಿತಿ ಸದಸ್ಯೆ ಸುಕನ್ಯಾ ಜಗದೀಶ್, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಂಜುನಾಥ ನಾಯರಿ, ಕೋಶಾಧಿಕಾರಿ ಪ್ರಕಾಶ್ ಮಧ್ಯಸ್ಥ, ಜಯಕರ್ನಾಟಕ ಉಡುಪಿ ಜಿಲ್ಲಾಧ್ಯಕ್ಷ ಸುರೇಶ್ ಪೂಜಾರಿ, ಮೊಗವೀರ ಸಂಘಟನೆ ಜಿಲ್ಲಾಧ್ಯಕ್ಷ ಶಿವರಾಮ್, ಪ್ರಚಾರ ಸಮಿತಿಯ ಆರ್.ಕೆ.ಬ್ರಹ್ಮಾವರ ಮೊದಲಾದವರು ಉಪಸ್ಥಿತರಿದ್ದರು.
    ಶ್ರೀ ಅಘೋರೇಶ್ವರ ದೇವಳ ಸಮಿತಿ ಕಾರ್ಯದರ್ಶಿ, ವಕೀಲ ಶ್ಯಾಮಸುಂದರ ನಾಯರಿ ಸ್ವಾಗತಿಸಿದರು. ಆಡಳಿತ ಮೊಕ್ತೇಸರ ಚಂದ್ರಶೇಖರ ಕಾರಂತ ಪ್ರಸ್ತಾವನೆಗೈದರು. ಕಿದಿಯೂರು ಉದಯಕುಮಾರ್ ಶೆಟ್ಟಿ ಹಾಗೂ ದೇವಾಲಯದ ರಸ್ತೆ ನಿರ್ಮಾಣಕ್ಕೆ ಸ್ಥಳದಾನ ಮಾಡಿದವರನ್ನು ಸನ್ಮಾನಿಸಲಾಯಿತು.
    ರೇಡಿಯೋ ಜಾಕಿ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣ ಸೋಮಯಾಜಿ ಮತ್ತು ಬಾಲಕೃಷ್ಣ ನಕ್ಷತ್ರಿ ನೇತೃತ್ವದಲ್ಲಿ ಅಷ್ಟಬಂಧ ಪುನಃ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಂಗಲೋಪನ್ಯಾಸ, ರಾತ್ರಿ ರಂಗಪೂಜೆ ನೆರವೇರಿತು.

    ಜನರಿಗೆ ಮಾನಸಿಕ ಬೆಂಬಲ ನೀಡಿ, ನೈತಿಕತೆ ಹೆಚ್ಚಿಸುವಲ್ಲಿ ದೇವಾಲಯಗಳ ಪಾತ್ರ ಮುಖ್ಯ. ದೇವಸ್ಥಾನಗಳಲ್ಲಿ ಸಂಗ್ರಹವಾಗುವುದು ಜನರ ಹಣ. ಅದು ಜನೋಪಯೋಗಿ ಕಾರ್ಯಗಳಿಗೇ ವ್ಯಯವಾಗಬೇಕು. ಆ ದೃಷ್ಟಿಯಲ್ಲೇ ಸಪ್ತಪದಿ ಯೋಜನೆ ಜಾರಿಗೊಳಿಸಲಾಗಿದೆ.
    |ಕೋಟ ಶ್ರೀನಿವಾಸ ಪೂಜಾರಿ
    ಧಾರ್ಮಿಕ ದತ್ತಿ ಇಲಾಖೆ ಸಚಿವ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts