More

    ತಾಪಮಾನ ಏರಿಕೆಗೆ ಮಾನವ ಕಾರಣ

    ಬೆಳಗಾವಿ: ಪರಿಸರದಲ್ಲಿ ಮೊದಲು ಜನಿಸಿದ್ದು ಕ್ರಿಮಿಕೀಟಗಳು, ವನ ಸಂಪತ್ತು. ಅನಂತರವೇ ಮಾನವ ಹುಟ್ಟಿದ. ಆದರೆ, ಇಂದು ಮಾನವನಿಂದ ಪರಿಸರದಲ್ಲಿ ಜಲಮಾಲಿನ್ಯ, ವಾಯುಮಾಲಿನ್ಯ ಸೇರಿ ಪರಿಸರವೇ ಮಲೀನವಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಗೆ ಮಾನವನೇ ನೇರ ಕಾರಣ. ಮಾನವನ ಚಟುವಟಿಕೆಗಳು ಜಗತ್ತಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಪರಿಸರವಾದಿ ಶಿವಾಜಿ ಕಾಗಣೇಕರ ಕಳವಳ ವ್ಯಕ್ತಪಡಿಸಿದರು.

    ನಗರದ ಲಿಂಗರಾಜ ಮಹಾವಿದ್ಯಾಲಯದಲ್ಲಿ ಈಚೆಗೆ ಸಮಾಜಶಾಸ ವಿಭಾಗ ಏರ್ಪಡಿಸಿದ್ದ ಸಂಪೋಷಿತ ಪರಿಸರ ಅಭಿವೃದ್ದಿ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಾನವ ತನ್ನ ಉದ್ದೇಶಗಳ ಈಡೇರಿಕೆಗೆ ಪರಿಸರದ ಮೇಲೆ ಇನ್ನಿಲ್ಲದಂತೆ ದಾಳಿ ನಡೆಸುತ್ತಿದ್ದಾನೆ. ಅದರಿಂದಾಗಿ ಪರಿಸರ ಇನ್ನಿಲ್ಲದಂತೆ ಹದಗೆಡುತ್ತಿದ್ದು, ಮಾನವ ಐಷಾರಾಮಿ ಜೀವನಕ್ಕಿಂತ ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದರು.

    ಭಾರತದಲ್ಲಿ ಹುಟ್ಟಿ ಬೆಳೆದ ನಾವೆಲ್ಲರೂ ನಮ್ಮ ಜನ್ಮಭೂಮಿಯನ್ನು ಪ್ರೀತಿಸಬೇಕು. ಆದರೆ, ಇಂದಿನ ಯುವ ಸಮಾಜ ಇಲ್ಲಿ ಶಿಕ್ಷಣ ಪಡೆದು ಹಣದ ಆಸೆಗೆ ಪಾಶ್ಚಿಮಾತ್ಯ ದೇಶಗಳಿಗೆ ಹೋಗಿ ಸೇವೆ ಸಲ್ಲಿಸುತ್ತಿರುವುದು ಅತ್ಯಂತ ಕಳವಳದ ಸಂಗತಿ. ಈ ನಿಟ್ಟಿನಲ್ಲಿ ಭಾರತೀಯರು ತಾಯ್ನಡಲ್ಲೇ ಸೇವೆ ಸಲ್ಲಿಸಬೇಕು. ವಿದ್ಯಾವಂತ ಯುವ ಸಮಾಜ ದೇಶದಲ್ಲೇ ಉಳಿದು ಭಾರತೀಯರಿಗೆ ಸೇವೆ ನೀಡಬೇಕಾಗಿದೆ ಎಂದರು.
    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ ವಿಭಾಗದ ಮುಖ್ಯಸ್ಥ ಸುಮಂತ ಹಿರೇಮಠ ಮಾತನಾಡಿ, ಪರಿಸರ ಸ್ವಚ್ಛತೆ ಕುರಿತು ನಾವು ಜಾಗೃತಿ ಹೊಂದಿರಬೇಕು. ನೀರಿನ ಸಂರಕ್ಷಣೆ ಹಾಗೂ ತ್ಯಾಜ್ಯಗಳ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಾಧ್ಯ ಎಂದು ತಿಳಿಸಿದರು.

    ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಹನುಮಂತ ಮೇಲಿನಮನಿ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ ವಿಭಾಗದ ಮುಖ್ಯಸ್ಥ ನವೀನ ಕಣಬರಗಿ, ಭೂಮಿಕಾ ಕರನಿಂಗ, ಮಹಮ್ಮದ ಮುಕ್ರಾಂ ಶೇಖ್ ಇದ್ದರು. ನಿ ಪ್ರಾರ್ಥಿಸಿದರು. ತಸ್ನಿಮ್ ಪೀರಜಾದೆ ಸ್ವಾಗತಿಸಿದರು. ಸ್ಟಾನ್ಸಿಲಾ ಲೋಬೋ ವಂದಿಸಿದರು. ಪ್ರೀತಿ ರಾಜಪುರೋಹಿತ ಹಾಗೂ ರಶ್ಮಿ ಬಿರಾದಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts