More

    ಅವಿರೋಧ ಆಯ್ಕೆಯಾದ್ರು ನಿತ್ಯ ತರಕಾರಿ ಸೊಪ್ಪು ಮಾರುವ ಗ್ರಾ.ಪಂ ಅಧ್ಯಕ್ಷೆ: ಆಕೆ ಮಾತು ಕೇಳಿದ್ರೆ ಹೆಮ್ಮೆ ಪಡ್ತೀರಾ!

    ಮೆಹಬೂಬಬಾದ್​: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಸಾಕಷ್ಟು ಖರ್ಚು ಮಾಡುವುದನ್ನು ನೋಡಿದ್ದೇವೆ. ಇನ್ನು ಅಧ್ಯಕ್ಷ ಸ್ಥಾನಕ್ಕಾಗಿ ದುಡ್ಡಿನ ಮಳೆಯನ್ನೇ ಹರಿಸುತ್ತಾರೆ. ಆದರೆ, ಅಧಿಕಾರ ಬಂದ ಬಳಿಕ ಪಂಚಾಯಿತಿ ಬರುವ ನಿಧಿಯನ್ನೆಲ್ಲ ಗುಳಂ ಮಾಡುತ್ತಾರೆ. ಗ್ರಾಮ ಅಭಿವೃದ್ಧಿಗೆ ಬಳಸುವ ಹಣ ಏಕ ವ್ಯಕ್ತಿಯ ಉದ್ಧಾರಕ್ಕಾಗಿ ದುರ್ಬಳಕೆ ಮಾಡಲಾಗುತ್ತದೆ.

    ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಅನೇಕರು ಪೈಪೋಟಿ ನಡೆಸುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಅವಿರೋಧವಾಗಿ ಒಂದು ರೂಪಾಯಿ ಖರ್ಚಿಲ್ಲದೆ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಹೀಗಿದ್ದರೂ ಆ ಮಹಿಳೆ ರಸ್ತೆ ಬದಿಯಲ್ಲಿ ತಮ್ಮ ಕುಟುಂಬಕ್ಕೆ ನೆರವಾಗಲು ಈಗಲೂ ಸೊಪ್ಪು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದು, ಅವರ ಮಾತನ್ನು ಕೇಳಿದರೆ ಹೆಮ್ಮೆ ಎನಿಸುತ್ತದೆ.

    ಇದನ್ನೂ ಓದಿರಿ: ಇಲ್ಲಿದೆ ಗುಡ್​ ನ್ಯೂಸ್: ಡ್ರೈವಿಂಗ್​ ಟೆಸ್ಟ್​ ಇಲ್ಲದೆ ಲೈಸೆನ್ಸ್​ ಪಡೆಯುವ ಸಮಯ ಬಹಳ ಹತ್ತಿರ..!

    ಗುಗುಲೋತು ಗ್ರಾಮ ನಿವಾಸಿ ಲಕ್ಷ್ಮೀ ರಾಮಚಂದ್ರನ್​ ತೆಲಂಗಾಣದ ಮೆಹಬೂಬಬಾದ್​ ಜಿಲ್ಲೆಯ ರೆಗಾಡಿ ತಾಂಡಾದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಚಿಕ್ಕದಾಗ ಸ್ಥಳದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಿರುವ ಲಕ್ಷ್ಮೀ, ತಮ್ಮ ಕುಟುಂಬಕ್ಕೆ ನೆರವಾಲು ಸೊಪ್ಪು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಮೆಹಬೂಬಬಾದ್​ ಜಿಲ್ಲೆಯಲ್ಲಿ ಪ್ರಮುಖ ಮಾರುಕಟ್ಟೆಯಲ್ಲಿ ಪ್ರತಿದಿನ ಬೆಳಗ್ಗೆ ತನ್ನ ಕಾಯಕವನ್ನು ಮಾಡುತ್ತಿದ್ದಾರೆ.

    ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ರು ಸೊಪ್ಪು ಮತ್ತು ತರಕಾರಿ ಮಾರುತ್ತಿದ್ದೀರಲ್ಲಾ ಎಂದು ಕೇಳಿದರೆ, ಒಮ್ಮೆ ಮುಗುಳ್ನಗುವ ಲಕ್ಷ್ಮೀ, ಇಷ್ಟದ ಕಾಯಕವನ್ನು ಕಷ್ಟಪಟ್ಟು ಮಾಡುವುದರಲ್ಲಿ ತಪ್ಪೇನಿದೆ? ಅಧ್ಯಕ್ಷ ಸ್ಥಾನಕ್ಕೆ ಸರ್ಕಾರದಿಂದ ಬರುವ ಸಣ್ಣ ಮೊತ್ತದ ಸಂಬಳ ನನ್ನ ಗಾಡಿಯ ಪೆಟ್ರೋಲ್​ಗೂ ಸಾಕಾಗುವುದಿಲ್ಲ. ನನ್ನ ಕುಟುಂಬಕ್ಕೆ ನಾನು ಹೇಗೆ ಬೆಂಬಲ ನೀಡಲಿ? ಹೀಗಾಗಿ ನಾನು ಈ ಕೆಲಸ ಮಾಡುತ್ತಿದ್ದೇನೆ. ನಮ್ಮ ಕೆಲಸ ಮಾಡಿದರೆ ಏನಾದರೂ ತಪ್ಪೆ ಎಂದು ಪ್ರಶ್ನಿಸುತ್ತಾರೆ.

    ಇದನ್ನೂ ಓದಿರಿ: Web Exclusive | ದೇವರಾಜ ಅರಸು ‘ಹಿಂದುಳಿದ’ ನಿಗಮ; ಅರಿವು ಸಾಲ ನೀಡಿಲ್ಲ, ಗಂಗಾ ಕಲ್ಯಾಣವೂ ಸ್ಥಗಿತ…

    ಲಕ್ಷ್ಮೀ ಆದರ್ಶ ಮಹಿಳೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇಂದು ಪಂಚಾಯಿತಿಯಲ್ಲಿ ಸಣ್ಣದೊಂದು ಪೋಸ್ಟ್​ ಸಿಕ್ಕರೂ ನಾನೇ ಎಂದು ಮೆರೆಯುವ ಜನರ ನಡುವೆ ಲಕ್ಷ್ಮೀ ಕೊಂಚ ವಿಭಿನ್ನವಾಗಿ ನಿಲ್ಲುತ್ತಾರೆ. ಕುಟುಂಬಕ್ಕೆ ನೆರವಾಗಲು ಪ್ರತಿನಿತ್ಯ ತಮ್ಮ ಕಾಯಕ ಮುಂದುವರಿಸಿರುವ ಲಕ್ಷ್ಮೀ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೆ, ಸರ್ಕಾರ ಸರಿಯಾದ ರೀತಿಯಲ್ಲಿ ಪಂಚಾಯಿತಿ ನಿಧಿಯನ್ನು ನೀಡಬೇಕು. ಆಗಿದ್ದಲ್ಲಿ ಮಾತ್ರ ಗ್ರಾಮಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು ಎನ್ನುತ್ತಾರೆ ಲಕ್ಷ್ಮೀ. (ಏಜೆನ್ಸೀಸ್​)

    ಹೆಂಡತಿಯನ್ನು ಬೆಕ್ಕು ಎಂದವನಿಗೆ ಎಂಟು ವರ್ಷ ಜೈಲು; ಮೊಸರು ತಿಂದಿದ್ದಕ್ಕೇ ಗಲಾಟೆ ಶುರು…

    ಕೆಲಸದಿಂದ ಮನೆಗೆ ಬಂದ ವ್ಯಕ್ತಿ ಪತ್ನಿಗಾಗಿ ಹುಡುಕಾಡಿದಾಗ ಆಕೆಯ ನಿಜ ಬಣ್ಣ ಬಯಲು: ತಂದೆಯೇ ವಿಲನ್​!

    ಮದ್ವೆಯಾದ 2 ತಿಂಗಳಲ್ಲಿ ಗಂಡನಿಂದಲೇ ಬಿ.ಟೆಕ್​ ವಿದ್ಯಾರ್ಥಿನಿ ಹತ್ಯೆ: ಕೊಲೆಗೆ ಕಾರಣ ಕೇಳಿ ಬೆಚ್ಚಿಬಿದ್ದ ಪಾಲಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts