More

    ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದು, ಕ್ವಾರಂಟೈನ್​ನಲ್ಲಿ ಇರುವವನಿಗೆ ಅಲ್​ ಕೈದಾ ಉಗ್ರರ ನಂಟು !

    ನವದೆಹಲಿ: ಅಮೆರಿಕಕ್ಕೆ ಈ ಹಿಂದೆ ಮೆಕ್ಸಿಕೋ ಗಡಿಯ ಮೂಲಕ ಅಕ್ರಮವಾಗಿ ನುಸುಳಿದ್ದ 167 ಭಾರತೀಯರನ್ನು ಇತ್ತೀಚೆಗೆ ಆ ದೇಶ ಗಡಿಪಾರು ಮಾಡಿದೆ.
    ಅಲ್ಲಿಂದ ಗಡಿಪಾರಾದ 167 ಜನರನ್ನು ಪಂಜಾಬ್​ನ ಅಮೃತ್​ಸರಕ್ಕೆ ಕರೆದುಕೊಂಡು ಬಂದು, ಕ್ವಾರಂಟೈನ್​ ಕೇಂದ್ರದಲ್ಲಿ ಇರಿಸಲಾಗಿದೆ.

    ಹೀಗೆ ಗಡಿಪಾರಾಗಿ ಬಂದ ಓರ್ವನಿಗೆ ಅಲ್​​ ಕೈದಾ ಉಗ್ರಸಂಘಟನೆಯ ನಂಟು ಇದೆ ಎನ್ನಲಾಗಿದ್ದು, ಪೊಲೀಸರು ಹೆಚ್ಚಿನ ಸಾಕ್ಷಿ ಕಲೆ ಹಾಕುತ್ತಿದ್ದಾರೆ.

    ಇದನ್ನೂ ಓದಿ: ಇಡೀ ಜಗತ್ತಿಗೆ ಕರೊನಾ ಹಬ್ಬಿಸಿ ತನ್ನ ದೇಶದೊಳಗೆ ಮೊದಲ ಬಾರಿಗೆ ಮಹತ್ತರ ಸಾಧನೆಗೈದ ಚೀನಾ ಸರ್ಕಾರ!

    40 ವರ್ಷ ಜುಬೇರ್ ಎಂಬಾತನ ಮೇಲೆ ಅನುಮಾನ ಬಲವಾಗಿದೆ. ಈತ ಹೈದರಾಬಾದ್​ನಲ್ಲಿಯೇ ಇಂಜಿನಿಯರಿಂಗ್​ ಪದವಿ ಪಡೆದಿದ್ದಾನೆ. ಇದೀಗ ಗುಪ್ತಚರ ದಳದ ಅಧಿಕಾರಿಗಳೂ ಸಹ ಆತನ ಬೆನ್ನು ಬಿದ್ದಿವೆ. ಜುಬೇರ್​ ಕುಟುಂಬದ ಹಿನ್ನೆಲೆ, ಹೈದರಾಬಾದ್​ನಲ್ಲಿ ಅವನು ಓದಿದ ಕಾಲೇಜು, ಉಳಿದಿದ್ದ ಸ್ಥಳಗಳ ಬಗ್ಗೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.

    ಜುಬೇರ್​ ವಿರುದ್ಧ ಭಾರತದಲ್ಲಿ ಎಲ್ಲಿಯೂ ಸಹ ಯಾವುದೇ ಪ್ರಕರಣ ದಾಖಲಾಗಿತ್ತು. ಈತನ ಕ್ವಾರಂಟೈನ್​ ಅವಧಿ ಮುಗಿದ ಮೇಲೆ ಕೇಂದ್ರದ ತನಿಖಾ ದಳಗಳು ಪ್ರಕರಣ ದಾಖಲು ಮಾಡಿಕೊಂಡು, ಅಲ್​ ಕೈದಾ ನಂಟಿನ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.

    ಹಾಗೇ ಜುಬೇರ್​ನನ್ನು ವಿಚಾರಣೆಯ ಭಾಗವಾಗಿ ಹೈದರಾಬಾದ್​ಗೂ ಕರೆತರುವ ಬಗ್ಗೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ತೆಲಂಗಾಣ ಪೊಲೀಸರೂ ಸಹ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ನಟಿಮಣಿಯರ ಲಾಕ್​ಡೌನ್ ಪ್ರವರ

    ಜುಬೇರ್​ ಕುಟುಂಬದ ಬಗ್ಗೆ ಇದುವರೆಗೆ ಜಾಸ್ತಿ ಮಾಹಿತಿ ಸಿಕ್ಕಿಲ್ಲ. ತಾನು ಹುಟ್ಟಿದ್ದು ಯುಎಇಯ ಶಾರ್ಜಾದಲ್ಲಿ. 1990ರ ದಶಕದಲ್ಲಿ ಹೈದರಾಬಾದ್​ನ ಖಾಸಗಿ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.
    ಇಂಜಿನಿಯರಿಂಗ್​ ಪದವಿ ಪಡೆದು ವಾಪಸ್​ ಶಾರ್ಜಾಕ್ಕೆ ಹೋಗಿದ್ದು, ಅಲ್ಲಿಂದ ಈತ ತನ್ನ ಸೋದರನಿದ್ದಲ್ಲಿಗೆ ಅಂದರೆ ಯುಎಸ್​ಗೆ ಹೋಗಿದ್ದ.

    ಈತನ ಪೂರ್ತಿ ಹೆಸರು ಇಬ್ರಾಹಿಂ ಮೊಹಮ್ಮದ್​ ಜುಬೇರ್​. ಈತ ಭಾರತೀಯ ನಾಗರಿಕತ್ವ ಪಡೆದಿದ್ದಾನೆ. 2006ರವರೆಗೂ ಭಾರತದಲ್ಲಿಯೇ ಇದ್ದು, ನಂತರ ಯುಎಸ್​ಗೆ ತೆರಳಿದ್ದಾನೆ. ನಂತರ ಯುಎಸ್​ನ ಯುವತಿಯನ್ನು ಮದುವೆಯಾಗಿ, 2007ರ ಸುಮಾರಿಗೆ ಕಾನೂನು ಬದ್ಧವಾಗಿ ಯುಎಸ್​ನ ಕಾಯಂ ನಿವಾಸಿಯಾಗಿದ್ದಾನೆ ಎಂದು ಯುಎಸ್​ನ ನ್ಯಾಯಾಂಗ ವಿಭಾಗ 2018ರಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

    ಜುಬೇರ್​ನ ಸಹೋದರರಿಬ್ಬರು ಉಗ್ರರಿಗೆ ಹಣಕಾಸು ಸಹಾಯ ಮಾಡುತ್ತಿದ್ದ ಆರೋಪದಡಿ 2011 ರಲ್ಲಿ ಬಂಧಿತರಾಗಿದ್ದಾರೆ. ಹಾಗೇ ಈತನೂ ಸಹ ಅಲ್​ ಕೈದಾ ಮುಖ್ಯಸ್ಥ ಅನ್ವರ್​ ಅಲ್​ ಅಲ್ವಾಕಿಗಾಗಿ ಹಣ ಹೊಂದಿಸುತ್ತಿದ್ದ ಎಂಬ ಆರೋಪ ಇದೆ. ಈ ಅನ್ವರ್​ನನ್ನು ಯೆಮನ್​ಲ್ಲಿ 2011ರಲ್ಲಿ ಡ್ರೋಣ್​ ದಾಳಿ ಮೂಲಕ ಹತ್ಯೆಗೈಯ್ಯಲಾಗಿದೆ.
    ಜುಬೇರ್​ಗೆ ಅಲ್​ಕೈದಾ ನಂಟಿರುವುದು ಯುಎಸ್​ನಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ 2019ರಲ್ಲಿ ಜೈಲು ಸೇರಿದ್ದ.

    2020ರ ಫೆಬ್ರವರಿ 7ರಂದು ಬಿಡುಗಡೆಯಾಗಿದ್ದ. ನ್ಯಾಯಾಲಯದ ಆದೇಶದ ಅನ್ವಯ ಜುಬೇರ್​ ಗಡಿಪಾರಾಗಿದ್ದಾನೆ. ಜುಬೇರ್​ಗೆ ಅಲ್​ಕೈದಾ ನಂಟು ಇದೆ ಎಂಬುದಕ್ಕೆ ಯುಎಸ್​ ಕೋರ್ಟ್​ನಲ್ಲಿ ಸಾಕ್ಷಿ ಇದೆ ಎಂದು ಹೇಳಲಾಗಿದೆ. ಈಗ ಗಡಿಪಾರಾಗಿದ್ದರಿಂದ ಭಾರತೀಯ ಅಧಿಕಾರಿಗಳು ಹೆಚ್ಚಿನ ತನಿಖೆ ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: 36 ತಾಸು ಕರೊನಾ ಕರ್ಫ್ಯೂ: ಇಂದು ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಬಂದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts